ಸೆಲೆಬ್ರೆಟಿಗಳು ಐಷಾರಾಮಿ ಕಾರು ಖರೀದಿಸುವುದು ಹೊಸದೇನು ಅಲ್ಲ. ಈಗ ರಾಘಣ್ಣ ಮನೆಗೆ Audi Q8 ಕಾರು ಬಂದಿದೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ. ಮನೆಗೆ ಕಾರು ಡೆಲಿವರಿ ಕೊಟ್ಟಿದ್ದು ಮನೆಯಲ್ಲೇ ರಿಜಿಸ್ಟ್ರೇಷನ್ ಪ್ರಕ್ರಿಯೆ ಕೂಡ ಮಾಡಲಾಗಿದೆ. ಅಪ್ಪ, ಅಮ್ಮ ಹಾಗೂ ಅಣ್ಣನ ಜೊತೆ ಯುವ ಜಾಲಿ ರೈಡ್ ಹೋಗಿ ಬಂದಿದ್ದಾರೆ.
'ಯುವ' ಹಾಗೂ 'ಎಕ್ಕ' ಸಿನಿಮಾಗಳ ಬಳಿಕ ಜಡೇಶ್ ನಿರ್ದೇಶನದ 'ಪವರ್‌ಮ್ಯಾನ್' ಚಿತ್ರದಲ್ಲಿ ಯುವರಾಜ್‌ಕುಮಾರ್ ನಟಿಸುತ್ತಿದ್ದಾರೆ. ತರುಣ್ ಸುಧೀರ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ತಡವಾಗಿ ಯುವ ತಮ್ಮ ಮೂರನೇ ಸಿನಿಮಾ ಆರಂಭಿಸಿದ್ದಾರೆ. ಮುಂದಿನ ವರ್ಷ ಆದಷ್ಟು ಬೇಗ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
ಎರಡು ವರ್ಷಗಳ ಹಿಂದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ Audi Q7 ಕಾರು ಖರೀದಿಸಿದ್ದರು. ಇದೀಗ ರಾಘಣ್ಣನ ಮನೆಗೆ Audi Q8 ಕಾರ್ ಬಂದಿದೆ. ಒಂದೂವರೆ ಕೋಟಿಯಿಂದ ಎರಡು ಕೋಟಿ ಮೌಲ್ಯದ ಕಾರ್ ಇದು. 5-ಸೀಟರ್ ಕೂಪ್ ಎಸ್‌ಯುವಿ (SUV) ಕಾರ್ ಇದಾಗಿದ್ದು 3.0-ಲೀಟರ್ V6 ಟರ್ಬೊ-ಪೆಟ್ರೋಲ್ ಎಂಜಿನ್, ತಂತ್ರಜ್ಞಾನ ಹೊಂದಿದೆ. 340 hp (ಸುಮಾರು 335 bhp) ಮತ್ತು 500 Nm ಟಾರ್ಕ್ ಪವರ್, 8-ಸ್ಪೀಡ್ ಟಿಪ್ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ಇದರಲ್ಲಿದೆ. ಗಂಟೆಗೆ 250 ಕಿ.ಮೀ ಗರಿಷ್ಠ ವೇಗ ಹೊಂದಿದೆ. ಕಾರಿನ ಸುತ್ತಮುತ್ತಲಿನ ದೃಶ್ಯವನ್ನು ಸ್ಪಷ್ಟವಾಗಿ ತೋರಿಸುವ 360-ಡಿಗ್ರಿ ಕ್ಯಾಮೆರಾ ಇದೆ. ಹೀಗೆ ಸಾಕಷ್ಟು ವಿಶೇಷತೆಗಳನ್ನು ಈ ಕಾರು ಒಳಗೊಂಡಿದೆ.
ಕಳೆದ ವರ್ಷ ತಂದೆ ಹುಟ್ಟುಹಬ್ಬಕ್ಕೆ ಯುವ ಇನ್ನೋವಾ ಹೈಬ್ರೀಡ್ ಕಾರ್ ಉಡುಗೊರೆ ಕೊಟ್ಟಿದ್ದರು. ಇದೀಗ Audi Q8 ಕಾರು ಖರೀದಿಸಿದ್ದಾರೆ. 6 ವರ್ಷಗಳ ಹಿಂದೆ ಈ ಕಾರು ಲಾಂಚ್ ಆಗಿತ್ತು. ಕ್ರಿಕೆಟಿಗ ವಿರಾಟ್ ಕೊಹ್ಲಿ ಆಡಿ Q8 SUV ಕಾರಿನ ಮೊದಲ ಮಾಲೀಕ ಎನಿಸಿಕೊಂಡಿದ್ದರು. ಬಳಿಕ ಆ ಕಾರನ್ನು ಅವರು ಮಾರಾಟಕ್ಕೆ ಇಟ್ಟಿದ್ದರು. ಕೆಲ ಬಾಲಿವುಡ್ ಸೆಲೆಬ್ರೆಟಿಗಳ ಬಳಿ ಕೂಡ ಇದೇ ಮಾಡೆಲ್ ಕಾರ್ ಇದೆ.
Audi Q8 ಕಾರು ಖರೀದಿಸಿದ ರಾಘಣ್ಣ ಕುಟುಂಬ.. ಈ ಹಿಂದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ Audi Q7 ಕಾರು ಖರೀದಿಸಿದ್ದರು. #yuvarajkumar #sandalwood #powerman pic.twitter.com/s0ae6qp4GY
— Cinesamachara 🌊 (@cinesamachara26) November 16, 2026