ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಕಾರುಬಾರು ಕಮ್ಮಿ ಆಗ್ತಿದೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಕೆಲವರು ಟಾರ್ಗೆಟ್ ಮಾಡಿ ನೆಗೆಟಿವ್ ಮಾಡಿದ್ರು ಎನ್ನುವ ಆರೋಪವೂ ಇದೆ. ಪೈರಸಿ ಮಾಡಿ ಚಿತ್ರವನ್ನು ತುಳಿಯಲು ಯತ್ನಿಸಿದ್ರು ಎಂದು ಹೇಳುವವರು ಇದ್ದಾರೆ. 'ಟಾಕ್ಸಿಕ್' ಸಿನಿಮಾ ಫಲಿತಾಂಶದ ಬಗ್ಗೆ ಚಿತ್ರತಂಡ ಈ ಬಗ್ಗೆ ಮಾತನಾಡಿಲ್ಲ.
ರಾಕಿಂಗ್ ಸ್ಟಾರ್ ಯಶ್ ಕೂಡ ಮೌನಕ್ಕೆ ಜಾರಿದ್ದಾರೆ. 'ರಾಮಾಯಣ' ಸಿನಿಮಾ ಪ್ರಮೋಷನ್ ಸಹ ಶುರುವಾಗಿಲ್ಲ. ಹಾಲಿವುಡ್ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು ಯಶ್ ಸಿನಿಮಾ ಕಟ್ಟಿಕೊಟ್ಟಿದ್ದರು. ಕೆಲವರಿಗೆ ಸಿನಿಮಾ ಅದ್ಭುತ ಎನಿಸಿದರೂ ಬಹುತೇಕರಿಗೆ ಇಷ್ಟವಾಗಲಿಲ್ಲ. ಅದಕ್ಕೆ ನಾನಾ ಕಾರಣಗಳಿವೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಮೊದಲ ದಿನ ಯಶ್ ಹೇಗೆ ಪ್ರತಿಕ್ರಿಯಿಸಿದ್ರು ಎನ್ನುವುದನ್ನು ಆಪ್ತ ಜೈದೇವ್ ಮೋಹನ್ ಹಂಚಿಕೊಂಡಿದ್ದಾರೆ. ಪ್ರಜಾವಾಣಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
'ಟಾಕ್ಸಿಕ್' ಚಿತ್ರಕ್ಕೆ ಡಬ್ಬಿಂಗ್ ಮೇಲ್ವಿಚಾರಕರಾಗಿ ಜೈದೇವ್ ಕೆಲಸ ಮಾಡಿದ್ದರು. "ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಯಶ್ ಅವರನ್ನು ನಾನು ಇನ್ನು ಭೇಟಿ ಮಾಡಿಲ್ಲ. ಫೋನ್ ಮಾಡಿ ಮಾತನಾಡಿದೆ. ಚಿತ್ರದ ಒಂಧು ಭಾಗವಾಗಿ ನನಗೆ ಅಂತಹ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಯಶ್ ಮಾಡಿ ಜಾಸ್ತಿ ಮನಸ್ಸಿಗೆ ಹಚ್ಚಿಕೊಳ್ಳಬೇಡ. ಆಗಿದ್ದು ಆಯ್ತು, ಪ್ರೇಕ್ಷಕರಿಗೆ ಬಿಟ್ಟು ಬಿಡೋಣ.. ನೀನು ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಬೇಗ ಸಿದ್ಧನಾಗು.. ಮತ್ತೆ ಕೆಲಸ ಇದೆ.. ಓಕೆ ಸಿಗೋಣ ಬೈ" ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಯಶ್ ಹೇಳಿದ್ದು ಇಷ್ಟೇ.. ಆದ್ರೆ ಆ ದನಿಯಲ್ಲಿ ನೋವು ಗೊತ್ತಾಗುತ್ತೆ. 'ಟಾಕ್ಸಿಕ್' ಸಿನಿಮಾ ಕಥೆಯ ಮೊದಲ ವರ್ಷನ್ ಕೇಳಿದ ಸಮಯದಿಂದ ನಾನು ತಂಡದಲ್ಲಿ ಇದ್ದೀನಿ. ಹೇಗೆಲ್ಲಾ ಬದಲಾಯ್ತು ಎಲ್ಲವನ್ನು ನೋಡಿದ್ದೇನೆ. ಆ ಇಡೀ ಪ್ರಕ್ರಿಯೆಯ ಕಾರಣಕರ್ತ ಯಶ್.. ಅವರಿಗೆ ಎಷ್ಟು ನೋವಾಗಿರಬಹುದು ಎಂದು ಜೈದೇವ್ ವಿವರಿಸಿದ್ದಾರೆ. ಬೇಕೆಂದೇ ಕೆಲವರು ನಮ್ಮ ಸಿನಿಮಾ ತುಳಿದರು ಅನ್ನಿಸುತ್ತೆ. 3 ಲಕ್ಷಕ್ಕೂ ಅಧಿಕ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿಸಿದ್ದೀವಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Yash's First Reaction after Toxic Result #ToxicTheMovie #Yash@TheNameIsYash pic.twitter.com/6p78IlrBrZ
— Tony (@Rocky_Scofield) September 9, 2026