'ಟಾಕ್ಸಿಕ್' ಚಿತ್ರದಲ್ಲಿ ರಾಯ ಹಾಗೂ ಟಿಕೆಟ್ ಆಗಿ ದ್ವಿಪಾತ್ರದಲ್ಲಿ ನಟಿಸಿದ್ದ ಯಶ್ ಈಗ ರಾವಣನಾಗಿ ಅಬ್ಬರಿಸೋಕೆ ಬರ್ತಿದ್ದಾರೆ. ನವೆಂಬರ್ 5ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ರಾವಣನಾಗಿ ಯಶ್ ಅಬ್ಬರಿಸಿರುವ ಟ್ರೈಲರ್ ಸಖತ್ ಸದ್ದು ಮಾಡ್ತಿದೆ. ಈ ಪಾತ್ರ ಮಾಡುವ ಬಗ್ಗೆ ಯಶ್ ಮಾತನಾಡಿದ್ದಾರೆ.
ಹೀರೊ ಆಗಿರುವ ನಾನು ರಾವಣ ರೀತಿಯ ನೆಗೆಟಿವ್ ಪಾತ್ರ ಮಾಡಿದ್ರೆ ಹೇಗೆ ಎನ್ನುವ ಪ್ರಶ್ನೆ ಮೂಡಿತ್ತು. ನನ್ನ ಫ್ಯಾನ್ಸ್ ಕೂಡ ಈ ಬಗ್ಗೆ ಕೇಳಬಹುದು ಎಂದುಕೊಂಡಿದ್ದೆ. ಅಚ್ಚರಿ ಎಂದರೆ ನನ್ನ ಮಗ ಇದನ್ನು ಕೇಳಿದ್ದ. ಅವನಿಗೆ ಅರ್ಥ ಮಾಡಿಸಲು ಬಹಳ ಕಷ್ಟವಾಯ್ತು. ಒಂದರ್ಥದಲ್ಲಿ ಅವನ ಪ್ರಶ್ನೆಗಳಿಗೆ ಉತ್ತರಿಸಲು ಪೀಕಲಾಟಕ್ಕೆ ಸಿಲುಕಿದ್ದ. ನೀನು ರಾಮ ಅಲ್ವಾ ಅದು ಹೇಗೆ ರಾವಣ ಪಾತ್ರ ಮಾಡ್ತೀಯಾ ಅಂತ ಕೇಳ್ದೆ ಎಂದು ಯಶ್ ಹೇಳಿದ್ದಾರೆ. ಸುಮಾ ಕನಕಾಲ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ 'ರಾಮಾಯಣ' ಚಿತ್ರತಂಡ ಮಾತನಾಡಿದೆ.
"ನನ್ನ ಮಗನಿಗೆ ತಂದೆ ಹೀರೊ.. ಅವನಿಗೆ ರಾಮಾಯಣ ಕಥೆ ಎಲ್ಲಾ ಗೊತ್ತು.. ನೀನು ರಾವಣ ಆಗೋಕೆ ಹೇಗೆ ಸಾಧ್ಯ, ನೀನು ಹೀರೊ ಅಲ್ವಾ ಅಂತಾನೆ.. ಹೌದಪ್ಪ ನಿಜ ಜೀವನದಲ್ಲಿ ರಾಮ, ಸಿನಿಮಾದಲ್ಲಿ ಮಾತ್ರ ರಾವಣ.. ಆದರೂ ನೀನು ವಿಲನ್ ಅಲ್ವಾ ಅಂತಾನೆ.. ಹೀರೊ, ವಿಲನ್ ಎಲ್ಲರನ್ನು ತೋರಿಸಿದ್ರೆ ತಾನೆ ಕಥೆ ಅರ್ಥ ಮಾಡಿಸೋಕೆ ಸಾಧ್ಯ ಅಂದೆ. ಹಂಗಾದ್ರೆ ನಾನು ಯಾವ ತಂಡವನ್ನು ಬೆಂಬಲಿಸಬೇಕು ಎಂದು ಕೇಳ್ದ.. ಉತ್ತರಿಸೋಕೆ ಅಯ್ಯೋ ಅದು ಕಠಿಣವಾದ ಪ್ರಶ್ನೆ ಎನಿಸಿತ್ತು. ಅಭಿಮಾನಿಗಳಿಗೂ ಈ ಪ್ರಶ್ನೆ ಇರುತ್ತೆ.. ಸಾಕಷ್ಟು ಜನ ಯಶ್ ಯಾಕೆ ನೆಗೆಟಿವ್ ರಾವಣ ಪಾತ್ರ ಮಾಡ್ತಿದ್ದಾರೆ, ಸೀತಾಪಹರಣದಂತಹ ಸನ್ನಿವೇಶವನ್ನು ಹೇಗೆ ಒಪ್ತಾರೆ ಅಂದ್ರು" ಎಂದು ಯಶ್ ಹೇಳಿದ್ದಾರೆ.
ಬಳಿಕ ಮಗ ಯಥರ್ವ್‌ಗೆ ಬಿಡಿಸಿ ಹೇಳಿದೆ. ಎಲ್ಲರೂ ರಾಮನನ್ನು ಅನುಸರಿಸಬೇಕು. ರಾವಣ ಬಹಳ ಅದ್ಭುತ, ವಿಶೇಷ ಅನ್ನಿಸಬಹುದು. ಆದ್ರೆ ಸಿನಿಮಾದಲ್ಲಿ ನನ್ನ ತಂಡವನ್ನು ಬೆಂಬಲಿಸಬೇಕು ಎಂದು ಹೇಳಿದೆ.. ಎಲ್ಲಾ ಸರಿ ನೀನು ಚಿತ್ರದಲ್ಲಿ ಸೋಲ್ತಿಯಾ, ಸಾಯ್ತಿಯಾ ಅಂತೆಲ್ಲಾ ಕೇಳ್ಬಿಟ್ಟ.. ಬಳಿಕ ಅದನ್ನೆಲ್ಲಾ ಬಿಡಿಸಿ ಹೇಳ್ದೆ. ಅದು ನಿಜಕ್ಕೂ ಕಷ್ಟವಾಗಿತ್ತು. ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಫ್ಯಾನ್ಸ್ ಕೇಳ್ತಾರೆ ಅಂದುಕೊಂಡಿದ್ದೆ. ಆದ್ರೆ ಮಗ ಕೇಳ್ದ ಎಂದು ಯಶ್ ವಿವರಿಸಿದ್ದಾರೆ.
“You can cheer for me as an actor, but never mistake the character for an ideal ”
— Yash Trends ™ (@YashTrends) October 31, 2026
This is how @TheNameIsYash Boss is teaching Yatharv about the Ramayana and the deeper layers, values and complexities of its characters ❤️#Yash #Ramayana pic.twitter.com/2VvuPaYPFR