ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ'-1 ಸಿನಿಮಾ ಭಾರತದಲ್ಲೇ 1000 ಕೋಟಿ ರೂ. ನೆಟ್ ಕಲೆಕ್ಷನ್ ಸನಿಹದಲ್ಲಿದೆ. ಯಶಸ್ಸಿಯಾಗಿ ಸಿನಿಮಾ 25 ದಿನದತ್ತ ಮುನ್ನುಗ್ಗುತ್ತಿದೆ. ಈಗಾಗಲೇ 1700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಹುಬ್ಬೇರಿಸಿದೆ.

ನಿನ್ನೆ(ನವೆಂಬರ್ 25) ಕೂಡ ಸಿನಿಮಾ ಭಾರತದಲ್ಲಿ 10 ಕೋಟಿ ರೂ. ಗಳಿಕೆ ಕಂಡಿದೆ. ವೀಕೆಂಡ್ ಮತ್ತಷ್ಟು ಹೆಚ್ಚು ಕೊಳ್ಳೆ ಹೊಡೆಯುವ ಸುಳಿವು ಸಿಕ್ತಿದೆ. 25 ದಿನಕ್ಕೆ 'ಬಾಹುಬಲಿ- 2' ಹಾಗೂ 'ಧುರಂಧರ್- 2' ಚಿತ್ರದ ಬಾಕ್ಸಾಫೀಸ್ ದಾಖಲೆಗಳನ್ನು ಹಿಂದಿಕ್ಕಿ ಸಿನಿಮಾ ಸದ್ದು ಮಾಡುವ ಸೂಚನೆ ಸಿಕ್ಕಿದೆ. ಈ ಕ್ಷಣಕ್ಕೂ ಗಂಟೆಗೆ 8 ಸಾವಿರ ಟಿಕೆಟ್ ಬುಕ್‌ಮೈ ಶೋನಲ್ಲಿ ಬುಕ್ ಆಗ್ತಿದೆ. ಅಷ್ಟರಮಟ್ಟಿಗೆ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.

ಒಟ್ಟು ಕಲೆಕ್ಷನ್

ಅಂದಹಾಗೆ 'ರಾಮಾಯಣ' ಚಿತ್ರದ ಮೊದಲ ಭಾಗ 21ಕ್ಕೆ ದಿನಕ್ಕೆ ವಿಶ್ವದಾದ್ಯಂತ 1755.60 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಬುಧವಾರ 15,700 ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ. ಹಿಂದಿ ವರ್ಷನ್ ಮಾತ್ರ 6.75 ಕೋಟಿ ರೂ. ತಂದುಕೊಟ್ಟಿರುವುದಾಗಿ ಅಂದಾಜಿಸಲಾಗ್ತಿದೆ. ಇನ್ನುಳಿದಂತೆ ಕನ್ನಡ ಹಾಗೂ ಮಲಯಾಳಂ ವರ್ಷನ್ ರೆಸ್ಪಾನ್ಸ್ ಚೆನ್ನಾಗಿತ್ತು.

'ಬಾಹುಬಲಿ- 2' ಹಿಂದಿಕ್ಕುತ್ತಾ ?

ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಬಾಹುಬಲಿ- 2' ಈಗ ಮೂರನೇ ಸ್ಥಾನದಲ್ಲಿದೆ. ರಾಜಮೌಳಿ ನಿರ್ದೇಶನದ ಈ ಫ್ಯಾಂಟಸಿ ಅಡ್ವೆಂಚರಸ್ ಸಿನಿಮಾ 9 ವರ್ಷಗಳ ಹಿಂದೆ 1,810.60 ಕೋಟಿ ರೂ. ಕಲೆಕ್ಷನ್ ಮಾಡಿದ್ದಾರೆ ಹೇಳಲಾಗಿತ್ತು. ಇನ್ನೆರಡು ದಿನಗಳಲ್ಲಿ 'ರಾಮಾಯಣ' ಸಿನಿಮಾ ಆ ದಾಖಲೆ ಹಿಂದಿಕ್ಕುವ ಸುಳಿವು ಸಿಕ್ಕಿದೆ. ಎರಡನೇ ಸ್ಥಾನದಲ್ಲಿರುವ 'ಧುರಂಧರ್'-2 ಚಿತ್ರ 1,852.44 ಕೋಟಿ ರೂ. ಗಳಿಸಿದ್ದಾಗಿ ಹೇಳಲಾಗ್ತಿದೆ. ಇನ್ನೊಂದು ವಾರದಲ್ಲಿ ಈ ದಾಖಲೆಯನ್ನು ಕೂಡ 'ರಾಮಾಯಣ' ಮೀರಿಸಲಿದೆ. ಆದರೆ 2000 ಕೋಟಿ ರೂ. ಕ್ಲಬ್ ಸೇರಲು ಸಾಧ್ಯವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಓಟಿಟಿ ಸ್ಟ್ರೀಮಿಂಗ್ ಯಾವಾಗ?

'ರಾಮಾಯಣ' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಟ್‌ಸ್ಟರ್ ಭಾರೀ ಮೊತ್ತಕ್ಕೆ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಜನವರಿ ವೇಳೆಗೆ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುವ ನಿರೀಕ್ಷೆಯಿದೆ. ಇನ್ನು 2028ರಲ್ಲಿ 'ರಾಮಾಯಣ' ಚಿತ್ರದ ಎರಡನೇ ಭಾಗ ತೆರೆಗೆ ಬರಲಿದೆ.