ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಸಹ 'ರಾಮಾಯಣ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. 11 ದಿನಕ್ಕೆ 400 ಕೋಟಿ ರೂ.ಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ 12 ದಿನವೂ ಹಿಡಿತ ಸಾಧಿಸಿದೆ. ಅಂತರಾಷ್ಟ್ರೀಯಮಟ್ಟದಲ್ಲಿ ಸೋನಿ ಪಿಕ್ಚರ್ಸ್ ರೀತಿಯ ದೊಡ್ಡ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿದೆ.

ಪ್ಯಾನ್ ಇಂಡಿಯಾ ಅಲ್ಲ ಗ್ಲೋಬಲ್ ಮಟ್ಟದಲ್ಲಿ 'ರಾಮಾಯಣ' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆದಿತ್ತು. ಅದಕ್ಕಾಗಿ ಹೊರ ದೇಶಗಳಲ್ಲಿ ಭರ್ಜರಿ ಪ್ರಚಾರ ಮಾಡಲಾಗಿತ್ತು. ಸಿನಿಮಾಕಾನ್ ಸಮಾವೇಶದಲ್ಲಿ ಕೂಡ ಭಾಗಿ ಆಗಿ ಯಶ್ ಚಿತ್ರವನ್ನು ಪ್ರಮೋಷನ್ ಮಾಡಿದ್ದರು. ವಿದೇಶದಲ್ಲೇ ಮೊದಲಿಗೆ ಟೀಸರ್ ರಿಲೀಸ್ ಮಾಡಲಾಗಿತ್ತು. ಭಾರತದಲ್ಲಿ ಸಿನಿಮಾ ಬಿಡುಗಡೆ ಆಗುವ ವಾರಕ್ಕೂ ಮುನ್ನ ವಿದೇಶಗಳಲ್ಲಿ ಪ್ರೀಮಿಯರ್ ಶೋ ನಡೆದಿತ್ತು. ಇಂಗ್ಲೀಷ್ ಭಾಷೆಗೂ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿದೆ.

'ರಾಮಾಯಣ'ವನ್ನು ಅಂತರಾಷ್ಟ್ರೀಯ ಚಿತ್ರದ ರೀತಿ ಪ್ರಚಾರ ಮಾಡಿ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ತಕ್ಕ ಪ್ರತಿಕ್ರಿಯೆ ಈಗ ಸಿಕ್ತಿದೆ. ಭಾರತದಲ್ಲಿ 1000 ಕೋಟಿ ರೂ. ಕಲೆಕ್ಷನ್ ಸನಿಹದಲ್ಲಿರುವ ಸಿನಿಮಾ ವಿದೇಶಗಳಲ್ಲಿ 400 ಕೋಟಿ ರೂ. ಗಡಿ ದಾಟಿದೆ.

'ರಾಮಾಯಣ' ಸಿನಿಮಾ 11 ದಿನಗಳ ಕಲೆಕ್ಷನ್

ದೇಶ ಕಲೆಕ್ಷನ್(ಕೋಟಿ ರೂ.ಗಳಲ್ಲಿ)

ಯುಎಸ್‌ಎ $16,825,100 (158.05 ಕೋಟಿ)

ಕೆನಡಾ CAD 7,207,910- $5.05M (47 ಕೋಟಿ)

ಯುಕೆ & ಐರ್ಲೆಂಡ್ €4,162,806 - $5.49M (51.57 ಕೋಟಿ)

ಆಸ್ಟ್ರೇಲಿಯಾ A$6,053,612 - $4.09M (38.42 ಕೋಟಿ)

ನ್ಯೂಜಿಲೆಂಡ್ NZ$936,313 - $516K (4.85 ಕೋಟಿ)

ಯುಎಇ & ಗಲ್ಫ್ ದೇಶಗಳು $5.4M (50.73 ಕೋಟಿ)

ನೇಪಾಳ $1.42M (13.34 ಕೋಟಿ)

ಮಲೇಷಿಯಾ $1.35M (12.68 ಕೋಟಿ)

ಜರ್ಮನಿ $1.03M (9.68 ಕೋಟಿ)

ಸಿಂಗಾಪುರ SGD 1.01 million - $784K (7.36 ಕೋಟಿ)

ಇತರೆ ಯೂರೋಪ್ ದೇಶಗಳು $2.24M (21.04 ಕೋಟಿ)

ಪ್ರಪಂಚದ ಇತರೆ ದೇಶಗಳು $4.6M (43.21)

ಒಟ್ಟು ಕಲೆಕ್ಷನ್ 458.38 ಕೋಟಿ ರೂಪಾಯಿ

ಹೀಗೆ ದೇಶ ವಿದೇಶಗಳಲ್ಲಿ 'ರಾಮಾಯಣ' ಸಿನಿಮಾ ಕಲೆಕ್ಷನ್ ಮಾಡಿದೆ. 12 ದಿನವಾದ ನಿನ್ನೆ ಕೂಡ ಒಟ್ಟು 10 ಕೋಟಿ ರೂ. ಹೊರ ದೇಶಗಳಲ್ಲಿ ಗಳಿಕೆ ಕಂಡಿರುವುದಾಗಿ ಅಂದಾಜಿಸಲಾಗ್ತಿದೆ. ಈ ಸಿನಿಮಾ ಗೆಲುವು ಮುಂದೆ 'ರಾಮಾಯಣ- 2' ಚಿತ್ರಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವೇದಿಕೆ ನಿರ್ಮಾಣ ಮಾಡಲಿದೆ.