ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ದೊಡ್ಡ ದೊಡ್ಡ ಕನಸು ಕಾಣುತ್ತಿದ್ದಾರೆ. ಆ ಕನಸು ನನಸು ಮಾಡಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. 'ಕೆಜಿಎಫ್' ಸರಣಿ ಬಳಿಕ 'ಟಾಕ್ಸಿಕ್', 'ರಾಮಾಯಣ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳನ್ನು ಯಶ್ ಮಾಡಿದ್ದಾರೆ. ಹಾಗಾದ್ರೆ ಅವರ ಮುಂದಿನ ಸಿನಿಮಾ ಯಾವ್ದು ?
2028ರಲ್ಲಿ 'ರಾಮಾಯಣ'- 2 ಸಿನಿಮಾ ತೆರೆಗ ಬರಲಿದೆ. ಅದಕ್ಕೂ ಮುನ್ನ ಮತ್ತೊಂದು ಸಿನಿಮಾ ಮಾಡುವ ಸಾಧ್ಯತೆಯಿದೆ. ಕೆಲ ಫಿಲ್ಮ್ ಮೇಕರ್ಸ್ ಈಗಾಗಲೇ ಕಥೆಗಳನ್ನು ಹೇಳಿದ್ದಾರೆ. ಆದರೆ ಯಶ್ ಯಾವುದನ್ನು ಫೈನಲ್ ಮಾಡಿಲ್ಲ. 'ರಾಮಾಯಣ' ಸಕ್ಸಸ್ ಬೆನ್ನಲ್ಲೇ ಪತ್ನಿ ಜೊತೆ ಯಶ್ ವಿದೇಶ ಪ್ರವಾಸ ಕೈಗೊಂಡಿದ್ದರು. ಸದ್ಯ ಜಾಲಿ ಮೂಡ್‌ನಲ್ಲಿರುವ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಆಲೋಚನೆಯಲ್ಲಿದ್ದಾರೆ.
ಯಶ್ ಇನ್ಮುಂದೆ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರ ಮಾಡ್ತಾರಾ ? ಸಣ್ಣ ಬಜೆಟ್ ಸಿನಿಮಾ ಮಾಡಲ್ವಾ? 'ಕಿತಾತಕ', 'ರಾಜಾಹುಲಿ', 'ಗೂಗ್ಲಿ' ರೀತಿಯ ಸಿನಿಮಾಗಳಲ್ಲಿ ಅವರನ್ನು ಅಭಿಮಾನಿಗಳು ನೋಡೊಕೆ ಸಾಧ್ಯ ಇಲ್ವಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತದೆ. 'ಕೆಜಿಎಫ್'-1 ಚಿತ್ರೀಕರಣದ ಬಳಿಕ 'ಮೈನೇಮ್ ಈಸ್ ಕಿರಾತಕ' ಚಿತ್ರವನ್ನು ಯಶ್ ಆರಂಭಿಸಿದ್ದರು. ಗಡ್ಡಕ್ಕೆ ಕತ್ತರಿ ಹಾಕಿ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. 15 ದಿನಗಳ ಕಾಲ ಚಿತ್ರೀಕರಣ ನಡೀತು. ಬಳಿಕ ನಿಂತು ಹೋಗಿತ್ತು.
ಜಯಣ್ಣ-ಭೋಗೇಂದ್ರ ಆ ಚಿತ್ರ ನಿರ್ಮಾಣ ಮಾಡುತ್ತಿದ್ದರು. ಖರ್ಚಾದ ಹಣದ ಜೊತೆಗೆ ಒಂದಷ್ಟು ಹಣವನ್ನು ಸೇರಿಸಿ ನಿರ್ಮಾಪಕರಿಗೆ ಯಶ್ ವಾಪಸ್ ಕೊಟ್ಟಿದ್ದರು. ಕಾರಣ 'ಕೆಜಿಎಫ್' ಸರಣಿ ಸಿನಿಮಾಗಳ ನಡುವೆ ಸಣ್ಣ ಸಿನಿಮಾ ಮಾಡುವುದು ಬೇಡ ಎಂದುಕೊಂಡಿದ್ದರು. ಇದೀಗ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಿದ್ದು ಆಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ದೊಡ್ಡ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಈಗ ಯಶ್ ಮತ್ತೆ 'ಕಿರಾತಕ'ನ ಅವತಾರ ತಾಳಿದ್ರೆ ಹೇಗಿರುತ್ತೆ?
ಯಶ್ ಇಂತಾದೊಂದು ಸರ್‌ಪ್ರೈಸ್ ಜೊತೆ ಬಂದ್ರು ಅಚ್ಚರಿ ಪಡಬೇಕಿಲ್ಲ. ಯಶ್ ಆಲೋಚನೆಗಳೇ ಹಾಗೆ.. ಯಾವಾಗಲೂ ವಿಭಿನ್ನವಾಗಿ ಆಲೋಚಿಸುತ್ತಾರೆ. 'ರಾಮಾಯಣ'- 2 ಬರುವ ಗ್ಯಾಪ್‌ನಲ್ಲಿ 'ಮೈ ನೇಮ್ ಈಸ್ ಕಿರಾತಕ' ಸಿನಿಮಾ ಮಾಡ್ತಾರಾ ಹೇಳೊಕ್ಕಾಗಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಯಶ್ ಈ ಸಿನಿಮಾ ಬಗ್ಗೆ ಮಾತನಾಡಿದ್ದರು. ನಿಮ್ಮ ಯಾವ ಚಿತ್ರಕ್ಕೆ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಮಾಡುವ ಮನಸ್ಸಿದೆ ಎನ್ನುವ ಪ್ರಶ್ನೆಗೆ "ನಾನು 'ಕಿರಾತಕ' ಅಂತ ಸಿನಿಮಾ ಮಾಡ್ಬೇಕಿತ್ತು. ಸ್ಕ್ರಿಪ್ಟ್ ಬಹಳ ಇಷ್ಟ ಆಗಿತ್ತು. ಚಿತ್ರೀಕರಣ ಕೂಡ ಆರಂಭಿಸಿದ್ವಿ.. ಅದು ನನ್ನ ಮನಸ್ಸಿಗೆ ಹತ್ತಿರವಾದದ್ದು.. ಆ ಸಿನಿಮಾ ಮಾಡುವ ಆಸೆಯಿದೆ" ಎಂದಿದ್ದಾರೆ.
ಎಲ್ಲರೂ ಯಶ್ ಮುಂದಿನ ಸಿನಿಮಾ ಯಾವ್ದು? ಎಷ್ಟು ಕೋಟಿ ಬಜೆಟ್? ನಿರ್ದೇಶಕ ಯಾರು ? ಕಥೆ ಏನು? ಎಂದು ತಲೆ ಕೆಡಿಸಿಕೊಂಡಿರುವಾಗ 'ಮೈ ನೇಮ್ ಈಸ್ ಕಿರಾತಕ' ರೀತಿಯ ಸಣ್ಣ ಸಿನಿಮಾ ಮೂಲಕ ಬಂದು ಯಶ್ ಶಾಕ್ ಕೊಡ್ತಾರಾ ಕಾದು ನೋಡಬೇಕಿದೆ. ಬಾಸ್ ಪ್ರತಿ ಚಿತ್ರಕ್ಕೆ 4 ವರ್ಷ ಕಾಯಿಸ್ಬೇಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಹಾಗಾಗಿ ಸಣ್ಣ ಸಿನಿಮಾ ಮಾಡಿ ಬೇಗ ಬರ್ತಾರಾ ? ಕಾದು ನೋಡೋಣ.
. @TheNameIsYash BOSS is interested for #Kirathaka sequel again, let's see how this will materialize 🌝
— 𝗦𝘁𝗮𝗻 𝗥𝗦𝗬 ʳᵃᵐᵃʸᵃⁿᵃ (@rsy_stan) November 24, 2026
Gonna be the biggest entertainer with nostalgic references if it does happen 😃❤️🔥#Yash #Ramayana pic.twitter.com/dSxFKojsIX