ರಾಕಿಂಗ್ ಸ್ಟಾರ್ ಯಶ್ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. 'ಟಾಕ್ಸಿಕ್' ಸಿನಿಮಾ ಸೋತಿರಬಹುದು, ಆದ್ರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಾಯನ ದರ್ಬಾರ್ ಜೋರಾಗಿಯೇ ಇದೆ. 'ರಾಮಾಯಣ'ದ ರಾವಣನಾಗಿ ಶೀಘ್ರದಲ್ಲೇ ತೆರೆಮೇಲೆ ಅಬ್ಬರಿಸಲು ಯಶ್ ಬರ್ತಿದ್ದಾರೆ. ಈಗಾಗಲೇ ಪ್ರಚಾರ ಆರಂಭವಾಗಿದೆ.
ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. ನಿನ್ನೆ(ಸೆಪ್ಟೆಂಬರ್ 26) ಮುಂಬೈನಲ್ಲಿ ಅದ್ದೂರಿ ಈವೆಂಟ್ ಮಾಡಿ ಚಿತ್ರದ ಪ್ರಚಾರ ಮಾಡಿದೆ ಚಿತ್ರತಂಡ. ರಣ್‌ಬೀರ್, ಸಾಯಿ ಪಲ್ಲವಿ ಸೇರಿ ಇಡೀ ಚಿತ್ರತಂಡ ಅಲ್ಲಿತ್ತು. ಆದರೆ ಕಾರಣಾಂತರಗಳಿಂದ ಯಶ್ ಗೈರಾಗಿದ್ದರು. ರಾವಣನಾಗಿ ನಟಿಸುವುದು ಮಾತ್ರವಲ್ಲ ನಿರ್ಮಾಪಕನಾಗಿ ಕೂಡ ಯಶ್ ಕೈಜೋಡಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ನವೆಂಬರ್ 8ರಂದು ಚಿತ್ರ ಬಿಡುಗಡೆ ಆಗುವ ನಿರೀಕ್ಷೆಯಿದೆ.
ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರವಿ ದುಬೆ, ವಿವೇಕ್ ಒಬೆರಾಯ್, ರಕುಲ್ ಪ್ರೀತ್‌ಸಿಂಗ್ ಹಾಗೂ ಕಾಜಲ್ ಆಗರ್‌ವಾಲ್ ಸೇರಿ ದೊಡ್ಡ ತಾರಗಣ ಚಿತ್ರದಲ್ಲಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಜೈಜೈ ರಾಮ್' ಸಾಂಗ್ ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗದೆ. ಇದೆಲ್ಲದರ ನಡುವೆ ಚಿತ್ರದ ಎರಡು ಹೊಸ ಪೋಸ್ಟರ್ ಅನಾವರಣವಾಗಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣನ ಒಂದು ಪೋಸ್ಟರ್ ಹಾಗೂ ರಾವಣನಾಗಿ ಯಶ್ ಕಾಣಿಸಿಕೊಂಡಿರುವ ಮತ್ತೊಂದು ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆದರೆ ರಾವಣ ಯಶ್ ಪೋಸ್ಟರ್ ಹೆಚ್ಚು ಸದ್ದು ಮಾಡ್ತಿದೆ.
ಹೌದು ಶ್ರೀರಾಮನಾಗಿ ರಣ್‌ಬೀರ್ ಹಾಗೂ ಸೀತೆಯಾಗಿ ಸಾಯಿಪಲ್ಲವಿ ಕಾಣಿಸಿಕೊಂಡಿರುವ ಪೋಸ್ಟರ್‌ಗಿಂತ ರಾವಣನ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. World of Ramayana ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಎರಡೂ ಪೋಸ್ಟರ್‌ಗಳನ್ನು ಏಕಕಾಲಕ್ಕೆ ಪೋಸ್ಟ್ ಮಾಡಿದ್ದರು. 18 ಗಂಟೆಗಳಲ್ಲಿ ರಾವಣ ಯಶ್ ಪೋಸ್ಟರ್ 9ಲಕ್ಷದ 80 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಆದರೆ ಶ್ರೀರಾಮ, ಸೀತೆ, ಲಕ್ಷ್ಮಣರ ಪೋಸ್ಟರ್ 7 ಲಕ್ಷ ಲೈಕ್ಸ್ ಮಾತ್ರ ಗಿಟ್ಟಿಸಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇದಪ್ಪಾ ಯಶ್ ಕ್ರೇಜ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ತ್ರಿಲೋಕಾಧೀಶ ರಾವಣನಾಗಿ ರಾಕಿಂಗ್ ಸ್ಟಾರ್ ಖದರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಎರಡೂ ಪೋಸ್ಟರ್ ಸೂಪರ್ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ರಾವಣ ಪೋಸ್ಟರ್ ಕೊಂಚ ಹೆಚ್ಚು ವೈರಲ್ ಆಗ್ತಿದೆ. ಇನ್ನು ಅಭಿಮಾನಿಗಳ ಇನ್‌ಸ್ಟಾ, ವಾಟ್ಸಪ್ ಸ್ಟೇಟಸ್‌ನಲ್ಲಿ ರಾವಣನ ದರ್ಬಾರ್ ನಡೀತಿದೆ.