ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ 'ರಾಮಾಯಣ-1' ಸಿನಿಮಾ ದಾಖಲೆಯ ಪ್ರದರ್ಶನ ಕಾಣ್ತಿದೆ. 25ನೇ ದಿನದತ್ತ ಸಿನಿಮಾ ಮುನ್ನುಗ್ಗುತ್ತಿದ್ದು 1700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಬೇರೆ ದೇಶಗಳಲ್ಲಿ ಎಲ್ಲಾ ಭಾರತೀಯ ಸಿನಿಮಾಗಳು ಬಿಡುಗಡೆ ಆಗುವುದಿಲ್ಲ. ಒಂದು ವೇಳೆ ಬಿಡುಗಡೆ ಆದ್ರು ದೊಡ್ಡದಾಗಿ ಸದ್ದು ಮಾಡಲ್ಲ.
'ರಾಮಾಯಣ-1' ಸಿನಿಮಾ ಅಂತರಾಷ್ಟ್ರೀಯಮಟ್ಟದಲ್ಲಿ ದೊಡ್ಡದಾಗಿ ತೆರೆಕಂಡಿತ್ತು. ಇಂಗ್ಲೀಷ್ ಭಾಷೆಗೂ ಡಬ್ ಆಗಿ ಬಿಡುಗಡೆ ಆಗಿತ್ತು. ಹಾಗಾಗಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಜಗತ್ತಿನ 27 ದೇಶಗಳಲ್ಲಿ ಅತಿಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಪೌರಾಣಿಕ ಸಿನಿಮಾ ಪಾತ್ರವಾಗಿದೆ. ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 'ದಂಗಲ್' ಮೊದಲ ಸ್ಥಾನದಲ್ಲಿದೆ. ಆದರೆ 'ದಂಗಲ್' ಚಿತ್ರದ ಗಳಿಕೆಯಲ್ಲಿ ದೊಡ್ಡ ಪಾಲು ಚೀನಾದಿಂದ ಬಂದಿತ್ತು.
ಇದೀಗ 'ರಾಮಾಯಣ-1' ಸಿನಿಮಾ ಹೊರ ದೇಶಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಯುಕೆ, ನೇಪಾಳ, ಜಾರ್ಜಿಯಾ, ಥಾಯ್ಲೆಂಡ್, ವೆಯೆಟ್ನಾಂ ರೀತಿಯ ದೇಶಗಳಲ್ಲಿ ಕೂಡ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ.
ಯುಎಸ್/ಕೆನಡಾ, ಇಂಡೋನೇಷ್ಯಾ, ನೆದರ್‌ಲ್ಯಾಂಡ್ಸ್, ಕಾಂಬೊಡಿಯಾ, ಫಿನ್‌ಲ್ಯಾಂಡ್, ಕೀನ್ಯಾ, ಉಕ್ರೇನ್, ಜಮೈಕಾ, ಘಾನಾ, ಮಾಲ್ಡೊವಾ ಸೇರಿದಂತೆ 27 ದೇಶಗಳಲ್ಲಿ 'ರಾಮಾಯಣ- 1' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ ಎಂದು ಚಿತ್ರತಂಡ ಘೋಷಿಸಿದೆ. ಇನ್ನು ಮೊದಲ ವಾರಕ್ಕೆ ಈ ಪೌರಾಣಿಕ ಸಿನಿಮಾ 1761 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗ್ತಿದೆ.
ಇನ್ನು ಮೂರು ವಾರಕ್ಕೆ ಕನ್ನಡ ವರ್ಷನ್ ಮಾತ್ರ 92 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ಹೇಳಲಾಗ್ತಿದೆ. ಯಶ್ ನಟಿಸಿರುವುದು ಹಾಗೂ ಡಬ್ಬಿಂಗ್ ಗುಣಮಟ್ಟ ಉತ್ತಮವಾಗಿರುವುದು ಕನ್ನಡದಲ್ಲೇ ಸಾಕಷ್ಟು ಜನ ಸಿನಿಮಾ ನೋಡುವಂತೆ ಮಾಡಿದೆ.
Grateful for the love Ramayana continues to receive across the world. 🙏🏻
— The World Of Ramayana (@WorldOfRamayana) November 26, 2026
Yeh Ram ke yug ka aarambh hai. 🏹 pic.twitter.com/8LD1myiyQ6