ನಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಆರ್ಭಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. 19 ದಿನಗಳ ಬಳಿಕ ಕೂಡ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಬಾಕ್ಸಾಫೀಸ್ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಮುನ್ನುಗ್ಗುತ್ತಿದೆ.
ನವೆಂಬರ್ 5ರಂದು ಈ ಪೌರಾಣಿಕ ಸಿನಿಮಾ ತೆರೆಗಪ್ಪಳಿಸಿತ್ತು. ಅದಕ್ಕೂ ಮುನ್ನ ವಿದೇಶಗಳಲ್ಲಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಗ್ಲೋಬಲ್ ಮಟ್ಟದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ದೊಡ್ಡಮಟ್ಟದ ಓಪನಿಂಗ್ ಸಿಗದೇ ಇದ್ದರೂ ಬಳಿಕ ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಿತು. ವೀಕೆಂಡ್ಗಳಲ್ಲಿ ಫ್ಯಾಮಿಲಿ ಸಮೇತ ಜನ ಸಿನಿಮಾ ನೋಡಲು ಮುಗಿಬಿದ್ದರು. ಹಾಗಾಗಿ ಕಲೆಕ್ಷನ್ ಏರುತ್ತಾ ಹೋಯಿತು. ಈಗಾಗಲೇ 1700 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ.
19 ದಿನಕ್ಕೆ 1704 ಕೋಟಿ ಗಳಿಕೆ
ನಿಜಕ್ಕೂ 'ರಾಮಾಯಣ' ಸಿನಿಮಾ ಆರ್ಭಟ ಜೋರಾಗಿದೆ. 20ನೇ ದಿನ ಕೂಡ ಗಂಟೆಗೆ 18 ಸಾವಿರ ಟಿಕೆಟ್ ಬುಕ್ಮೈಶೋನಲ್ಲಿ ಬುಕ್ ಆಗುತ್ತಿದೆ. ಇದು ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದನ್ನು ಸಾರಿ ಸಾರಿ ಹೇಳ್ತಿದೆ. ಮೂರನೇ ಭಾನುವಾರ ಕೂಡ ಸಿನಿಮಾ 36 ಕೋಟಿ ರೂ. ಕೊಳ್ಳೆ ಹೊಡೆದು ಸಂಚಲನ ಸೃಷ್ಟಿಸಿತು. ವೀಕೆಂಡ್ ಅಥವಾ ವಾರದ ದಿನ ಎನ್ನುವ ಭೇದ ಇಲ್ಲದೇ ಎಲ್ಲಾ ದಿನದಲ್ಲೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸದ್ಯ 19 ದಿನಕ್ಕೆ 1704 ಕೋಟಿ ರೂ. ಕಲೆಕ್ಷನ್ ಆಗಿರುವುದಾಗಿ ವರದಿಯಾಗಿದೆ.
ಬೆಂಗಳೂರಿನಲ್ಲಿ ದಾಖಲೆ
ಯಶ್ ನಟಿಸಿರುವುದರಿಂದ ಕನ್ನಡ ವರ್ಷನ್ ದೊಡ್ಡದಾಗಿ ಗೆದ್ದಿದೆ. ಕರ್ನಾಟಕದಲ್ಲಿ ಸಿನಿಮಾ ದರ್ಬಾರ್ ಜೋರಾಗಿದೆ. ಬೆಂಗಳೂರಿನಲ್ಲೇ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕನ್ನಡ ವರ್ಷನ್ ಗಳಿಕೆ 50 ಕೋಟಿ ರೂ. ಗಡಿ ದಾಟಿದೆ. ಇನ್ನು ಬಾಲಿವುಡ್ ಚಿತ್ರವೊಂದು ಡಬ್ ಆಗಿ ಬಂದು ಕನ್ನಡದಲ್ಲಿ ಇಷ್ಟು ದೊಡ್ಡದಾಗಿ ಸದ್ದು ಮಾಡ್ತಿರೋದು ಇದೇ ಮೊದಲು. ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್.
2000 ಕೋಟಿ ರೂ. ಕನಸು ?
'ರಾಮಾಯಣ' ಸಿನಿಮಾ ಕಲೆಕ್ಷನ್ 2000 ಕೋಟಿ ರೂ. ಕ್ಲಬ್ ಸೇರುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಭಾರತದ ಯಾವುದೇ ಸಿನಿಮಾ ಈ ಸಾಧನೆ ಮಾಡಿಲ್ಲ. ಚೀನಾ ಗಳಿಕೆ ಸೇರಿ 'ದಂಗಲ್' ಸಿನಿಮಾ ಮಾತ್ರ ಆ ದಾಖಲೆ ಮಾಡಿದೆ ಎನ್ನಲಾಗ್ತಿದೆ. ನಿತೇಶ್ ತಿವಾರಿ ಸಿನಿಮಾ ಆ ಮೈಲಿಗಲ್ಲು ಸಾಧಿಸುತ್ತಾ ಕಾದು ನೋಡಬೇಕಿದೆ. ಈ ಬಾರಿ ಸಾಧ್ಯವಾಗದೇ ಇದ್ದರೂ 'ರಾಮಾಯಣ'- 2 ಸಿನಿಮಾ ಕಂಡಿತ 2000 ಕೋಟಿ ರೂ. ಗಳಿಕೆ ಕಾಣಲಿದೆ.