ಭಾರತದಲ್ಲಿ ಬಿಡುಗಡೆ ಆಗುವ ಮುನ್ನ ಹೊರ ದೇಶಗಳಲ್ಲಿ 'ರಾಮಾಯಣ' ಸಿನಿಮಾ ಪ್ರೀಮಿಯರ್ ಶೋಗಳು ಆರಂಭವಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರ್ತಿದೆ. ಮೊದಲ ಭಾಗ ದೀಪಾವಳಿ ಸಂಭ್ರಮದಲ್ಲಿ ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಆದರೆ ಅಮೆರಿಕಾದ ಲಾಸ್ ಏಂಜಲೀಸ್‌ನ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ಚಿತ್ರದ ಪ್ರೀಮಿಯರ್ ಶೋ ಯಶಸ್ವಿಯಾಗಿ ನಡೆದಿದೆ.
ಇಡೀ ಚಿತ್ರತಂಡ ಅಲ್ಲಿನ ಪ್ರೇಕ್ಷಕರ ಜೊತೆ 'ರಾಮಾಯಣ' ಸಿನಿಮಾ ನೋಡಿದೆ. ಪತ್ನಿ ರಾಧಿಕಾ ಸಮೇತ ಪ್ರೀಮಿಯರ್ ಶೋನಲ್ಲಿ ಯಶ್ ಭಾಗಿ ಆಗಿದ್ದರು. ಇಬ್ಬರ ಔಟ್‌ಫಿಟ್ ಸಖತ್ ಗಮನ ಸೆಳೆದಿದೆ. ಅದರಲ್ಲೂ ಯಶ್ ಉಡುಪಿನಲ್ಲಿದ್ಧ ರಾವಣನ ಪಾತ್ರದಿಂದ ಸ್ಫೂರ್ತಿ ಪಡೆದ ಚಿನ್ನದ ಬ್ರೂಚ್ ಎಲ್ಲರ ಗಮನ ಸೆಳೆಯುತ್ತಿದೆ. ನಟ ಯಶ್ ಸ್ಟೈಲ್ ಐಕಾನ್ ಆಗಿ ಗುರ್ತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಕೂಡ ಡಿಸೈನರ್ ಕಾಸ್ಟ್ಯೂಮ್‌ಗಳಲ್ಲಿ ಮಿಂಚುತ್ತಿದ್ದಾರೆ. ಯಶ್ ತೊಡುವ ಕಾಸ್ಟ್ಯೂಮ್ ಅನ್ನು ಸಾನಿಯಾ ಸರ್ದಾರಿಯಾ ಡಿಸೈನ್ ಮಾಡ್ತಾರೆ.
ಅಂದಹಾಗೆ 'ರಾಮಾಯಣ' ಪ್ರೀಮಿಯರ್ ಶೋನಲ್ಲಿ ರಣ್‌ಬೀರ್, ಸಾಯಿಪಲ್ಲವಿ ಎಲ್ಲರೂ ಕಲರ್‌ಫುಲ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ. ಹಸಿರು ಬಣ್ಣದ ರೇಷ್ಮೆ ಸೀರೆಯಲ್ಲಿ ರಾಧಿಕಾ ಪಂಡಿತ್ ಗಮನ ಸೆಳೆದರು. ಇನ್ನು ಯಶ್ ಕಪ್ಪು ಬಣ್ಣದ ವೆಲ್ವೆಟ್ ಬ್ಲೇಜರ್, ಅದಕ್ಕೆ ಹೊಂದುವ ಪ್ಯಾಂಟ್, ಒಳಗೆ ಕಪ್ಪು ಶರ್ಟ್, ಕಪ್ಪ ಬಣ್ಣದ ಸನ್‌ಗ್ಲಾಸ್ ಧರಿಸಿ ಎಂದಿನಂತೆ ಗಡ್ಡಧಾರಿಯಾಗಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಆ ಬ್ಲೇಸರ್ ಮೇಲೆ ದಶಮುಖ ರಾವಣನ ಚಿನ್ನ ಬ್ರೂಚ್, ಅದಕ್ಕೆ ಜೋತು ಬಿದ್ದ ಸರಗಳು ಹೈಲೆಟ್ ಆಗಿತ್ತು.
ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸಿದ್ದಾರೆ. ಹಾಗಾಗಿ ತಮ್ಮ ಪಾತ್ರವನ್ನು ಪ್ರತಿನಿಧಿಸುವಂತೆ ಯಶ್ ದರ್ಶನ ಕೊಟ್ಟಿದ್ದರು. ಆದರೆ ಆ ಬ್ರೂಚ್ ಅನ್ನು ಸರಿಯಾಗಿ ಗಮನಿಸಿದರೆ 10 ತಲೆಯ ರಾವಣನ ಬದಲು 9 ತಲೆಗಳಿರುವುದು ಗೊತ್ತಾಗ್ತಿದೆ. ಸಾಕಷ್ಟು ಜನ ಪದೇ ಪದೆ ಲೆಕ್ಕ ಹಾಕಿ ನೋಡುತ್ತಿದ್ದಾರೆ. ಅರೇ, ನಾವು ಲೆಕ್ಕ ತಪ್ಪುತ್ತಿದ್ದೀವಾ? ಇಲ್ಲ ನಿಜಕ್ಕೂ ತಪ್ಪಾಗಿದ್ಯಾ ಎಂದು ತಲೆ ಕೆಡಿಸಿಕೊಂಡಿದ್ದಾರೆ. ನಿಜಕ್ಕೂ ಬ್ರೂಚ್‌ನಲ್ಲಿ 9 ತಲೆಯ ರಾವಣ ಇದ್ದಾನೆ. 10ನೇ ತಲೆ ರಾವಣ ಪಾತ್ರಧಾರಿ ಯಶ್ ಅವರದ್ದು ಎನ್ನುವ ಅರ್ಥದಲ್ಲಿ ಹೀಗೆ ಡಿಸೈನ್ ಮಾಡಿದ್ದಾರೆ. ಏನ್ ಕ್ರಿಯೇಟಿವ್ ಗುರೂ ಎಂದು ಈ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.
ಅಂದಹಾಗೆ ಸಾನಿಯಾ ಸರ್ದಾರಿಯಾ ಹಾಗೂ ಅಮ್ರಪಾಲಿ ಸೇರಿ ಯಶ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಪ್ರೀಮಿಯರ್ ಶೋನಲ್ಲಿ ಯಶ್ ಲುಕ್ ಎಲ್ಲರ ಚಿತ್ತ ಕದ್ದಿದೆ. ಅದೇ ರೀತಿ ಕನ್ನಡ ಚಿತ್ರರಂಗದ ಬಗ್ಗೆ ಯಶ್ ವೇದಿಕೆಯಲ್ಲಿ ಹೇಳಿದ ಮಾತು ಎಲ್ಲರ ಮನಗೆದ್ದಿದೆ. "ಕನ್ನಡ ಚಿತ್ರರಂಗದ ಭಾಗವಾಗಿರುವದಕ್ಕೆ ನನಗೆ ಹೆಮ್ಮೆ ಇದೆ" ಎಂದು ರಾಕಿಂಗ್ ಸ್ಟಾರ್ ಹೇಳಿರುವುದು ವೈರಲ್ ಆಗ್ತಿದೆ.
Ravana had 10 heads. 👑 When I saw Yash’s suit, I realised he was wearing a 10-headed Ravana dollar! 😂🔥
— ವೀರ ಕನ್ನಡಿಗ (@Mohan228906) October 28, 2026
But I could count only 9 heads. I kept wondering why he missed one… Then I realised Yash’s own head was the 10th! 💀🤣
WHAT PEAK DETAILING! 🗿🔥#yash #ramayana pic.twitter.com/aiDcfihOxi