ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಮೊದಲ ಭಾಗ ನವೆಂಬರ್ 5ರಂದು ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಪ್ರೇಕ್ಷಕರು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗ್ತಿದ್ದು ತ್ರಿಡಿ ಹಾಗೂ ಐಮ್ಯಾಕ್ಸ್ ವರ್ಷನ್‌ಗಳಲ್ಲಿ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ.

ಈಗಾಗಲೇ 'ರಾಮಾಯಣ' ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತಾಗಿದೆ. ರಾವಣನಾಗಿ ನಟಿಸುವುದರ ಜೊತೆಗೆ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾಗಾಗಿ ಕನ್ನಡದ ಮಟ್ಟಿಗೂ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಕರ್ನಾಟದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ರೆಸ್ಪಾನ್ಸ್ ಚೆನ್ನಾಗಿದೆ.

ಕನ್ನಡದಲ್ಲಿ 1 ಕೋಟಿ ಗಳಿಕೆ

ಐದು ಭಾಷೆಗಳಲ್ಲಿ 'ರಾಮಾಯಣ' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗ್ತಿದೆ. ವಾಯ್ಸ್ ಡಬ್ ಜೊತೆಗೆ ಲಿಪ್ ಸಿಂಕ್ ಆಗುವಂತೆ ಮಾಡಲಾಗಿದ್ದು ಕನ್ನಡದ್ದೇ ಸಿನಿಮಾ ಎನ್ನುವಂತೆ ಮೂಡಿ ಬಂದಿದೆ. ಕರ್ನಾಟಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಬರೀ ಕನ್ನಡದಲ್ಲೇ 1.07 ಕೋಟಿ ರೂ. ಈಗಾಗಲೇ ಕಲೆಕ್ಷನ್ ಆಗಿದೆ. ಡಬ್ಬಿಂಗ್ ಚಿತ್ರವೊಂದಕ್ಕೆ ಕನ್ನಡದಲ್ಲಿ ಇಂತಹ ರೆಸ್ಪಾನ್ಸ್ ಸಿಗುತ್ತಿರುವುದು ಇದೇ ಮೊದಲು.

1 ಲಕ್ಷ ಟಿಕೆಟ್ ಮಾರಾಟ

ದಸರಾ ಸಂಭ್ರಮದಲ್ಲಿ ದೇಶಾದ್ಯಂತ 'ರಾಮಾಯಣ' ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಈಗಾಗಲೇ ಲಕ್ಷ ಲಕ್ಷ ಟಿಕೆಟ್ ಬುಕ್ ಆಗಿದೆ. ದೇಶಾದ್ಯಂತ ಬರೋಬ್ಬರಿ 11 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಹಾಗಾಗಿ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಗುವ ನಿರೀಕ್ಷೆಯಿದೆ.

ಹೊಸ ಸಾಂಗ್

ಇನ್ನು 'ರಾಮಾಯಣ' ಚಿತ್ರದ ಮತ್ತೊಂದು ವೀಡಿಯೋ ಸಾಂಗ್ ರಿಲೀಸ್ ಆಗಿದೆ. ಸೀತಾ ಸ್ವಯಂವರ, ರಾಮ-ಸೀತೆ ಮದುವೆ ಸಂದರ್ಭದಲ್ಲಿ ಬರುವ "ಮಂಗಳ ಸಂಗಮ" ಎನ್ನುವ ಹಾಡು ಗಮನ ಸೆಳೆಯುತ್ತಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಅದು ಪ್ರತಿಫ್ರೇಮ್‌ನಲ್ಲಿ ಗೊತ್ತಾಗುತ್ತಿದೆ. ಎ. ಆರ್ ರಹಮಾನ್ ಸಂಗೀತದ ಹಾಡಿಗೆ ಕನ್ನಡದಲ್ಲಿ ಕಾರ್ತಿಕ್ ಸರಗುರ್ ಸಾಹಿತ್ಯ ಬರೆದಿದ್ದಾರೆ. ಅರ್ಮಾನ್ ಮಲಿಕ್, ಬೇಲಾ ಶೆಂಡೆ ದನಿಯಾಗಿದ್ದಾರೆ.