ವಾರಕ್ಕೂ ಮುನ್ನ ಅಮೆರಿಕಾದಲ್ಲಿ 'ರಾಮಾಯಣ' ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ಲಾಸ್ ಏಂಜಲೀಸ್‌ನ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ಚಿತ್ರದ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು. ಪ್ರೇಕ್ಷಕರ ಜೊತೆ ಇಡೀ ಚಿತ್ರತಂಡ ಸಿನಿಮಾ ವೀಕ್ಷಿಸಿದೆ. ಈಗಾಗಲೇ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಯಶ್ ಲಾಸ್ ಏಂಜಲೀಸ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿನ ಕನ್ನಡಿಗರಿಂದ ರಾಯನಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದವರು ಏನಂದ್ರು ? ಅದರಲ್ಲೂ Venky Reviews ರಿವ್ಯೂ ಏನಿದೆ ? ಮುಂದೆ ಓದಿ...

ದೊಡ್ಡ ದೊಡ್ಡ ಸಿನಿಮಾಗಳಿಗೆ Venky Reviews ಟ್ವಿಟರ್ ಖಾತೆಯಲ್ಲಿ ಹಾಕುವ ರಿವ್ಯೂ ಭಾರೀ ಚರ್ಚೆ ಆಗ್ತಿದೆ. 'ಟಾಕ್ಸಿಕ್' ಚಿತ್ರಕ್ಕೆ ಆತನ ರಿವ್ಯೂ ವಿವಾದ ಸೃಷ್ಟಿಸಿತ್ತು. ಈತನ ರಿವ್ಯೂ ಕಾರಣಕ್ಕೆ ಸಿನಿಮಾ ಬಗ್ಗೆ ದೊಡ್ಡಮಟ್ಟದ ನೆಗೆಟಿವ್ ಶುರು ಆಯ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಸಿನಿಮಾ ಪ್ರದರ್ಶನ ಆರಂಭವಾಗುವ ಮುನ್ನವೇ ಟ್ವೀಟ್ ಮಾಡಿದ್ದಾನೆ ಎಂದು ಕೆಲವರು ಆರೋಪಿಸಿದ್ದರು. ಇದೀಗ 'ರಾಮಾಯಣ' ಚಿತ್ರಕ್ಕೂ Venky Reviews ರಿವ್ಯೂ ಬಂದಿದೆ. ಪ್ರೀಮಿಯರ್ ಶೋ ನೋಡಿ ಅಭಿಪ್ರಾಯ ಹಂಚಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಕೆಲವರು ವೀಡಿಯೋ ಮಾಡಿ ಮಾತನಾಡಿದ್ದಾರೆ.

ನೋಡಬಹುದು.. ಆದ್ರೆ..

ಇದು ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಇದರ ಹಿಂದಿನ ಶ್ರಮ ಸ್ಪಷ್ಟವಾಗಿ ಗೊತ್ತಾಗುತ್ತದೆ. ತಂಡವು ಹೆಚ್ಚಾಗಿ ರಾಮಾಯಣಕ್ಕೆ ಬದ್ಧವಾಗಿದ್ದರೂ ಡ್ರಾಮಾ ಹಾಗೂ ಎಮೋಷನ್‌ಗಿಂತ ಆರ್ಭಟ ಹಾಗೂ ಆಕ್ಷನ್ ಮೇಲೆ ಹೆಚ್ಚು ಗಮನ ಹರಿಸಿದೆ. ಇದು ಕಥೆಯ ಕೆಲವು ಭಾಗಗಳನ್ನು ನೀರಸವಾಗಿ ಮತ್ತು ಕೆಲವೊಮ್ಮೆ ಧಾರಾವಾಹಿ ರೀತಿ ಪರಿವರ್ತನೆ ಮಾಡುತ್ತೆ. ಫಸ್ಟ್ ಹಾಫ್ ಕೊನೆಗೊಳ್ಳುವ ರೀತಿಯಿಂದಾಗಿ ಸೆಕೆಂಡ್ ಹಾಫ್ ಕೆಲವೊಮ್ಮೆ ಎಳೆದಾಡಿದಂತೆ ಭಾಸವಾಗುತ್ತದೆ. ಸೀಮಿತ ಕಥಾವಸ್ತು ಬರೀ ಆಕ್ಷನ್ ಸನ್ನಿವೇಶಗಳೊಂದಿಗೆ ವಿಸ್ತರಿಸಲ್ಪಟ್ಟಿದೆ. ಅವು ಹೆಚ್ಚು ಪರಿಣಾಮ ಬೀರುವುದಿಲ್ಲ.

ರಾವಣನ ಪಾತ್ರದಲ್ಲಿ ಯಶ್ ಅವರ ಅಭಿನಯವು ಚಿತ್ರದ ಪ್ರಮುಖ ಆಕರ್ಷಣೆ. ಇಂಟ್ರಡಕ್ಷನ್ ದೃಶ್ಯಗಳಲ್ಲಿ ನಿಜಕ್ಕೂ ಅದ್ಭುತ. ರಾಮ ಮತ್ತು ಸೀತೆಯ ಪಾತ್ರಗಳಿಗೆ ರಣಬೀರ್ ಕಪೂರ್, ಸಾಯಿ ಪಲ್ಲವಿ ಸೂಕ್ತ ಎನಿಸುತ್ತಾರೆ. ಆದಾಗ್ಯೂ, ದೈವತ್ವ ಮತ್ತು ಭಾವನಾತ್ಮಕ ಮೌಲ್ಯ ಪರದೆಯ ಮೇಲೆ ಸಂಪೂರ್ಣವಾಗಿ ಪ್ರತಿಫಲಿಸುವುದಿಲ್ಲ.

ವಿಷ್ಯುವಲ್ಸ್ ಅದ್ಭುತ. ಹಾಕಿರುವ ಹಣ ತೆರೆಮೇಲೆ ಕಾಣಿಸುತ್ತೆ. ಆದರೆ ಕೆಲವು ದೃಶ್ಯಗಳು ಸ್ಟುಡಿಯೋ ಗ್ರೀನ್ ಮ್ಯಾಟ್‌ನಲ್ಲಿ ಚಿತ್ರೀಕರಿಸಿದಂತೆ ಸ್ಕ್ರೀನ್ ಶಾಟ್‌ಗಳಂತೆ ಭಾಸವಾಗುತ್ತವೆ. ಚಿತ್ರದ ದೊಡ್ಡ ದೊಡ್ಡ ನೆಗೆಟಿವ್ ಸಂಗೀತ. ರಾಮಾಯಣದಂತಹ ಕಥೆಗೆ, ಸಂಗೀತವು ಅದರಲ್ಲಿ ಬಹಳಷ್ಟು ದೈವತ್ವ ಮತ್ತು ಭಾವನೆಯನ್ನು ಹೊಂದಿರಬೇಕು. ಆದರೆ, ಕೆಲವು ದೃಶ್ಯಗಳನ್ನು ಹೊರತುಪಡಿಸಿ, ಭಾರತೀಯ-ಹಾಲಿವುಡ್ ಸೇರಿಸುವ ಪ್ರಯತ್ನ ವಿಫಲವಾಗಿದೆ. ಒಟ್ಟಾರೆ ನೋಡಬಹುದು.. ಆದ್ರೆ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಸಿನಿಮಾ ಸೂಪರ್ ಅಂತೆ

ಲಾಸ್ ಏಂಜಲೀಸ್ ಪ್ರೀಮಿಯರ್‌ನಲ್ಲಿ ಸ್ನೇಹಿತರು ರಾಮಾಯಣ ನೋಡಿದ್ದಾರೆ.. ಬ್ಲಾಕ್‌ಬಸ್ಟರ್ ಗ್ಯಾರಂಟಿ.. ಅವ್ರು ಚಿತ್ರ ಅದ್ಭುತ ಎಂದು ಹೊಗಳುತ್ತಿದ್ದಾರೆ….ವಿಷ್ಯುವಲ್ಸ್ ಅದ್ಭುತ, ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತೆ. "ಹಿಂದಿ ಪ್ರೇಕ್ಷಕರು ಕನೆಕ್ಟ್ ಆಗ್ತಾರೆ". ಸಂಗೀತ ಮತ್ತು ಸ್ವಲ್ಪ ಸ್ಲೋ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕಲ್ಕಿ 2898AD ಚಿತ್ರಕ್ಕೆ ಇಂತದ್ದೇ ರೆಸ್ಪಾನ್ಸ್ ಬಂದಿತ್ತು. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ನನಗೆ ಮನರಂಜನೆ ಸಿಕ್ತು

ಕೆಲ ದೃಶ್ಯಗಳು ಚೆನ್ನಾಗಿಲ್ಲ. ಒಳ್ಳೆ ಆಕ್ಷನ್ ಸನ್ನಿವೇಶ ನೋಡುವಾಗ ದೀರ್ಘಾವಧಿಯ ನಿರೂಪಣೆ ದೃಶ್ಯಗಳು ಚಿತ್ರದ ವೇಗಕ್ಕೆ ಕಡಿವಾಣ ಹಾಕುತ್ತದೆ. ಹಾಡಿಗಳಿಲ್ಲದೇ ಇಂಗ್ಲಿಷ್ ಡಬ್ಬಿಂಗ್ ವರ್ಷನ್ ಆಲ್ ಡಬ್ಬಿಂಗ್ ಹಾಡುಗಳಿಲ್ಲದ ಆವೃತ್ತಿಯು ವಿಚಿತ್ರ ಅನ್ನಿಸಿತು. ಖಳನಾಯಕ ಎಷ್ಟು ಅದ್ಭುತವಾಗಿ ಇರ್ತಾನೆ ಅಂದ್ರೆ ನಾಯಕ ಕೂಡ ಸಪ್ಪೆ ಎನಿಸುತ್ತಾನೆ. ಇದು ಕೊಂಚ ಆಂತಕದ ಸಂಗತಿ. ಒಟ್ಟಾರೆ ನನಗೆ ಎಂಟರ್‌ಟೈನ್‌ಮೆಂಟ್ ಸಿಕ್ತು. ಎರಡನೇ ಭಾಗ ಬಂದಾಗ ನೋಡ್ತೀನಿ ಜ್ಯಾಕ್ ಸಫಿರ್ ಎಂಬುವವರು ಬರೆದುಕೊಂಡಿದ್ದಾರೆ.