ಕರ್ನಾಟಕದಲ್ಲಿ ಪರಭಾಷೆ ಸಿನಿಮಾಗಳು ದೊಡ್ಡದಾಗಿ ಸದ್ದು ಮಾಡುತ್ತವೆ. ಆಯಾ ಭಾಷೆಗಳಲ್ಲಿ ಇಲ್ಲಿ ಬಿಡುಗಡೆ ಆಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತವೆ. ಆದರೆ ಕನ್ನಡ ಸಿನಿಮಾಗಳು ಹೊರ ರಾಜ್ಯಗಳಲ್ಲಿ ಅಷ್ಟಾಗಿ ಬಿಡುಗಡೆ ಆಗಲ್ಲ. ಕೆಲವೊಮ್ಮೆ ಡಬ್ ಆಗಿ ಬಿಡುಗಡೆ ಆಗುವುದನ್ನು ನೋಡಬಹುದು. ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಶುರುವಾದ ಬಳಿಕ ಅದು ಹೆಚ್ಚಾಗಿದೆ. ಯಶ್ ನಟನೆಯ 'ರಾಮಾಯಣ' ಸಿನಿಮಾ ವಿಶ್ವದಾದ್ಯಂತ ದೊಡ್ಡದಾಗಿ ತೆರೆಗಪ್ಪಳಿಸುತ್ತಿದೆ.

ಹಿಂದಿ ಭಾಷೆಯಲ್ಲಿ 'ರಾಮಾಯಣ' ಸಿನಿಮಾ ನಿರ್ಮಾಣವಾಗಿದೆ. ಆದರೆ ವಿವಿಧ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರ್ತಿದೆ. ಎಐ ತಂತ್ರಜ್ಞಾನ ಬಳಸಿ ಕಲಾವಿದರ ತುಟಿ ಚಲನೆಯನ್ನು ಆಯಾ ಭಾಷೆಗೆ ತಕ್ಕಂತೆ ಹೊಂದಿಸುವ ಪ್ರಯತ್ನ ಮಾಡಲಾಗಿದೆ. ಹಾಗಾಗಿ ಡಬ್ಬಿಂಗ್ ಸಿನಿಮಾ ಎನಿಸದೇ ನಮ್ಮದೇ ಭಾಷೆಯಲ್ಲಿ ಸಿನಿಮಾ ನೋಡುವ ಅನುಭವ ನೀಡಲಿದೆ. ತಮಿಳುನಾಡಿನಲ್ಲಿ ಕೂಡ 'ರಾಮಾಯಣ' ಸಿನಿಮಾ ಬಿಡುಗಡೆ ಆಗ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿದೆ.

ತಮಿಳುನಾಡಿನಲ್ಲಿ ತಮಿಳು ವರ್ಷನ್ ಜೊತೆಗೆ ಕೆಲವಡೆ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ 'ರಾಮಾಯಣ' ಸಿನಿಮಾ ಪ್ರದರ್ಶನವಾಗ್ತಿದೆ. ಆದರೆ ಕರ್ನಾಟಕ ಹಾಗೂ ತಮಿಳುನಾಡು ಗಡಿಯ ಹೊಸೂರಿನಲ್ಲಿರು ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ಕನ್ನಡ ವರ್ಷನ್ ಬಿಡುಗಡೆ ಆಗ್ತಿದೆ. district ಆಪ್‌ನಲ್ಲಿ ಪ್ರೇಕ್ಷಕರು ಟಿಕೆಟ್ ಬುಕ್ ಮಾಡಬಹುದು. ಗುರುವಾರ (ನವೆಂಬರ್ 5) ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗ್ತಿದೆ. ತಮಿಳಿಗಿಂತ ಅಲ್ಲಿ ಕನ್ನಡ ವರ್ಷನ್ ಶೋ ಸಂಖ್ಯೆ ಹೆಚ್ಚಾಗಿದೆ.

ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗ್ತಿದೆ. ನಾಲ್ಕು ಸ್ಕ್ರೀನ್‌ಗಳಿರುವ ಸಣ್ಣ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ಅದು. ಹಾಗಾಗಿ ಕನ್ನಡ ಸಿನಿಮಾಗಳಿಗೂ ಶೋ ಕೊಡ್ತಾರೆ. 'ಕಾಂತಾರ- 2', 'ಕಾಟೇರ', 'ಕೆಜಿಎಫ್-2' ಸೇರಿದಂತೆ ಕನ್ನಡ ಕೆಲ ಕನ್ನಡ ಸಿನಿಮಾಗಳು ಅಲ್ಲಿ ಬಿಡುಗಡೆ ಆಗಿ ಸದ್ದು ಮಾಡಿದ್ದವು. 'ಪ್ರೇಮದ ಊರಲಿ' ಅಲ್ಲಿ ದಾಖಲೆಯ ಪ್ರದರ್ಶನ ಕಂಡಿದೆ. 50 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿ ಸಂಚಲನ ಸೃಷ್ಟಿಸಿದೆ. ತಮಿಳಿಗೆ ಡಬ್ ಆಗಿದೇ ಕನ್ನಡದಲ್ಲೇ ಇಷ್ಟರಮಟ್ಟಿಗೆ ಸಿನಿಮಾ ಸದ್ದು ಮಾಡ್ತಿದೆ. 40ನೇ ದಿನವೂ 'ಪ್ರೇಮದ ಊರಲಿ' ಮೆರವಣಿಗೆ ಮುಂದುವರೆದಿದೆ. ಈ ವಾರದಿಂದ 'ರಾಮಾಯಣ' ಕನ್ನಡ ವರ್ಷನ್ ದರ್ಬಾರ್ ಶುರುವಾಗ್ತಿದೆ.