ನಟ ಯಶ್ ತಾಯಿ ಪುಷ್ಪಾ ಅರುಣ್‌ ಕುಮಾರ್ ನಿರ್ಮಾಪಕಿಯಾಗಿ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ನೇರಾನೇರ ಮಾತುಗಳಿಂದಲೂ ಸದಾ ಸುದ್ದಿ ಆಗುತ್ತಾರೆ. 'ಟಾಕ್ಸಿಕ್' ಸಿನಿಮಾ ನೆಗೆಟಿವ್ ಟ್ರೋಲ್ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಪುಷ್ಪಾ ಮಾತನಾಡಿದ್ದರು. ಮೊದಲಿನಿಂದ ಮಗನನ್ನು ಬಹಳ ಧೈರ್ಯವಾಗಿ ಹುರಿದುಂಬಿಸಿ ಸಾಕಿದ್ದೀನಿ. ಇಂಥದ್ದಕ್ಕೆಲ್ಲಾ ಅವ್ನು ಹೆದರಲ್ಲ ಎಂದು ಕಡ್ಡಿ ತುಂಡು ಮಾಡಿದ್ದಂತೆ ಹೇಳಿದ್ದಾರೆ.

'ಕೆಜಿಎಫ್' ಬರೋಕೆ ಮುನ್ನ ಯಶ್ ಅಂದ್ರೆ ಯಾರಿಗೆ ಗೊತ್ತಿತ್ತು ಎಂದಿದ್ದ ತೆಲುಗು ನಿರ್ಮಾಪಕನಿಗೂ ಪುಷ್ಪಾ ಅರುಣ್ ಕುಮಾರ್ ತಿರುಗೇಟು ನೀಡಿದ್ದರು. 'ಟಾಕ್ಸಿಕ್' ಸಿನಿಮಾ ಬಗ್ಗೆ ಟ್ರೋಲ್ ಮಾಡಿದ್ದ ರಿಷಿಕಾ ಸಿಂಗ್ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ. ಅವ್ಳು ಯಾರು? ಅವಳ ಮಾತಿಗೆಲ್ಲಾ ನಾನು ಉತ್ತರಿಸಲ್ಲ ಎಂದಿದ್ದರು. ಇದೇ ವೇಳೆ ಮೊದಲಿನಿಂದ ಯಶ್‌ಗೆ ಎಷ್ಟು ಬೆಂಬಲವಾಗಿ ನಿಂತಿದ್ದೆ ಎನ್ನುವುದಕ್ಕೆ ಒಂದು ಘಟನೆಯನ್ನು ವಿವರಿಸಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ. 'ಕೆಜಿಎಫ್' ಚಿತ್ರದ ರಾಕಿ ತಾಯಿ ಶಾಂತಮ್ಮ ರೀತಿ ನಿಜಜೀವನದಲ್ಲಿ ಯಶ್ ಸಾಧನೆಗೆ ಸ್ಫೂರ್ತಿ ಇವ್ರೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.

ಯಶ್ ಪಿಯುಸಿ ಓದುತ್ತಿದ್ದಾಗ ಯಶ್ ಕಾಲಿಗೆ ಯಾರೋ ಶ್ರೀಮಂತರ ಮನೆ ಮಗ ಕಾರಿನಿಂದ ಗುದ್ದಿಬಿಟ್ಟಿದ್ದ.. ಕಾಲೇಜು ಬಳಿ ಹೋಗಿದ್ದೆ. ಯಶ್ ಏನೋ ತಪ್ಪು ಮಾಡಿರಬಹುದು ಎಂದು ಅವನನ್ನು ಬೈದೆ. ಬಳಿಕ ಅವನ ತಪ್ಪಿಲ್ಲ ಅಂತ ಗೊತ್ತಾಯ್ತು. ಆ ಹುಡುಗ ತಾಯಿ "ನನ್ನ ಮಗನಿಗೆ ಕಾರು ತಗೊಳ್ಳೊ ಶಕ್ತಿಯಿದೆ.. ನನ್ನ ಮಗ ಮಾಡ್ತಾನೆ.. ನೀನು ಕಾರ್ ತಗೊಂಡು ಬಂದು ಮಾಡು ಅಂದ್ರಂತೆ".. ಅದಕ್ಕೆ ತಾಯಿಯಾಗಿ ನಾನು ಏನು ಹೇಳಿರಬಹುದು.. "ನಿನಗೆ 5 ಲೀಟರ್ ಪೆಟ್ರೋಲ್ ತಗೊಳ್ಳೋ ಶಕ್ತಿ ಇತ್ತಲ್ಲ.. ತಂದು ಅವನ ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಬರಬೇಕಿತ್ತು.. ನಾನು ನಿನ್ನ ಬಿಡಿಸ್ಕೊಂಡು ಬರ್ತಿದ್ದೆ ಅಂತ ಆ ಸಮಯದಲ್ಲೇ ಯಶ್‌ಗೆ ಧೈರ್ಯ ಕೊಟ್ಟಿದ್ದೆ.. ಅವನನ್ನು ಧೈರ್ಯವಾಗಿ ಬೆಳಸಿ ಒಳ್ಳೆ ಕೆಲಸ ಮಾಡೋಕೆ ಬಿಟ್ಟಿದ್ದೀವಿ ಎಂದು ಪುಷ್ಪಾ ಹೇಳಿದ್ದಾರೆ.

ಏನ್ ಡೈಲಾಗ್ ಗುರೂ.. ಯಶ್‌ಗೆ ಇದಕ್ಕಿಂತ ಎಲಿವೇಷನ್ಸ್ ಬೇಕಾ? ನಿಜ ಜೀವನದಲ್ಲೇ ಯಶ್‌ಗೆ ಇಂತಹ ಎಲಿವೇಷನ್ಸ್ ಸಿಕ್ಕಿದೆ. ಪುಷ್ಪಾ ಅವರನ್ನು ನೋಡಿ ಪ್ರಶಾಂತ್ ನೀಲ್ 'ಕೆಜಿಎಫ್' ಚಿತ್ರದಲ್ಲಿ ಶಾಂತಮ್ಮ ಪಾತ್ರ ಡಿಸೈನ್ ಮಾಡಿದ್ರಾ ಅಂತ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.