ಇದು ಫ್ಯಾಮಿಲಿ ಶೋ ಕಣ್ರೋ ಎಂದು ಬಿಗ್‌ಬಾಸ್ ನೋಡಿ ಕೆಲವರು ಕಾಮೆಂಟ್ ಮಾಡ್ತಾರೆ. ಕೆಲವೊಮ್ಮೆ ಸ್ಪರ್ಧಿಗಳ ನಡೆ ಅತಿರೇಕಕ್ಕೆ ಹೋಗಿಬಿಡುತ್ತೆ. ಕೆಲವರಿಗೆ ಅಂಥದ್ದೇನು ಆಗಿಲ್ಲ ಎನಿಸಿದರೂ ಬಹುತೇಕ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಕೂಡ ಇಂತಹ ಸನ್ನಿವೇಶಗಳು ಕಂಡು ಬರ್ತಿದೆ. ಎಲ್ಲವೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗದಿದ್ದರೂ ಜಿಯೋ ಹಾಟ್‌ಸ್ಟರ್ ಲೈವ್‌ನಲ್ಲಿ ಬಟಾಬಯಲಾಗುತ್ತಿದೆ.
ಈ ಬಾರಿ ಯಶಸ್ ಕೊಂಚ ಅತಿಯಾಗಿ ಆಡ್ತಿದ್ದಾರೆ ಎಂದು ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ. ಇತ್ತೀಚೆಗೆ ಗಾನವಿ ಜೊತೆ ಡಬಲ್ ಮೀನಿಂಗ್ ಸಂಭಾಷಣೆ ವೀಡಿಯೋ ವೈರಲ್ ಆಗಿತ್ತು. ಇದೀಗ ಸೌಂದರ್ಯ ಶೆಟ್ಟಿ ಜೊತೆ ಯಶಸ್ ಕಿತ್ತಾಡುತ್ತಾ ಒಬ್ಬರ ಕೈ ಮತ್ತೊಬ್ಬರು ಕಚ್ಚಿರುವ ವೀಡಿಯೋ ವೈರಲ್ ಆಗ್ತಿದೆ.
ಬಾತ್‌ರೂಮ್ ಏರಿಯಾದಲ್ಲಿ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಪೈಪೋಟಿ ನಡೆದಿದೆ. ಇಬ್ಬರೂ ಬಿಟ್ಟುಕೊಡದೆ ಕೈಗಳನ್ನು ಹಿಡಿದು ತಡೆದಿದ್ದಾರೆ. ಕೈಗಳಿಂದ ಏನು ಮಾಡೋಕೆ ಸಾಧ್ಯವಾಗದೇ ಇದ್ದಾಗ ಕಾಯಿಗೆ ಕೆಲಸ ಕೊಟ್ಟಿದ್ದಾರೆ. ನೀವು ಕಚ್ಚದ್ದಕ್ಕೆ ನಾನು ಕಚ್ಚಿದ್ದು ಎಂದು ಯಶಸ್ ಹೇಳಿದ್ದಾರೆ.
ಬಿಗ್‌ಬಾಸ್ ಸೀಸನ್ 13 ಇದೀಗ 5ನೇ ವಾರಕ್ಕೆ ಕಾಲಿಟ್ಟಿದೆ. ಮೊದಲಿಗೆ 16 ಮಂದಿ ಸ್ಪರ್ಧಿಗಳು ಮನೆ ಒಳಗೆ ಹೋಗಿದ್ದರು. ಈಗಾಗಲೇ ಐವರು ಎಲಿಮಿನೇಟ್ ಆಗಿದ್ದಾರೆ. ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ಮನೆಯಿಂದ ಹೊರಬಂದಿದ್ದಾರೆ. ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ.
ತೂ B*****#bbk13 pic.twitter.com/1T1bstv03C
— Musthafā KP (ಮುಸ್ತಫಾ ಕೆಪಿ) (@kpindianboy1) October 6, 2026