ಬಿಗ್‌ಬಾಸ್ ಸೀಸನ್ 13 ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಮಾಡ್ರನ್ ಮಹಾಕವಿ ಮಂಜ ಎಂದೇ ಸದ್ದು ಮಾಡಿದ್ದ ಮಂಜುಗೆ ರೆಡ್ ಕಾರ್ಡ್ ಸಿಕ್ಕಿ ಎಲಿಮಿನೇಟ್ ಆಗಿದ್ದು ಬಳಿಕ ರೀಎಂಟ್ರಿ ಕೊಟ್ಟಿದ್ದು ಗೊತ್ತೇಯಿದೆ. ಈ ವೀಕೆಂಡ್ ಮಂಜ ಮನೆಯಿಂದ ಹೊರ ಬಂದಿದ್ದಾರೆ.
ಆರಂಭದಲ್ಲಿ ತಮ್ಮ ಅಬ್ಬರ ಆಟದಿಂದ ಮಂಜ ಗಮನ ಸೆಳೆದಿದ್ದರು. ಇದೇ ಒಂದು ಹಂತಕ್ಕೆ ಆತ ಮನೆಯಿಂದ ಹೊರ ಬರಲು ಕಾರಣವಾಗಿತ್ತು. ಆದರೆ ರೀ ಎಂಟ್ರಿ ವೇಳೆ ಮಂಜ ಫುಲ್ ಸೈಲೆಂಟ್ ಆಗಿಬಿಟ್ಟಿದ್ದರು. ಇದು ವೀಕ್ಷಕರು ಮಾತ್ರವಲ್ಲ ಕಿಚ್ಚನಿಗೂ ಅಚ್ಚರಿ ಮೂಡಿಸಿತ್ತು. ಮತ್ತೆ ಮನೆ ಒಳಗೆ ಹೋಗುವಾಗ ಹಂಗೆ ಮಾಡ್ತೀನಿ ಹಿಂಗೆ ಮಾಡ್ತೀನಿ ಎಂದು ಹಾರಾಡಿದ್ದ ಮಂಜ ಯಾಕೆ ಮನೆ ಒಳಗೆ ಸಾಧು ಪ್ರಾಣಿಯಾಗಿಬಿಟ್ಟಿದ್ದರು.
ಒಮ್ಮೆ ರೆಡ್ ಕಾರ್ಡ್ ಪಡೆದು ಹೊರಬಂದ ಸ್ಪರ್ಧಿಯನ್ನು ಮತ್ತೆ ಮನೆ ಒಳಗೆ ಕಳುಹಿಸಿದ್ದು ಯಾಕೆ ಎನ್ನುವ ಚರ್ಚೆ ನಡೆದಿತ್ತು. ಅದಕ್ಕೆ ಸುದೀಪ್ ಬಿಗ್‌ಬಾಸ್ ವೇದಿಕೆಯಲ್ಲೇ ಉತ್ತರ ಕೊಟ್ಟಿದ್ದಾರೆ. ಮಂಜನನ್ನು ಮನೆಯಿಂದ ಹೊರಗೆ ಕರೆಸುವ ಮುನ್ನ ಮುನ್ನ ಈ ಬಗ್ಗೆ ಮಾತನಾಡಿದ್ದಾರೆ. ಒಬ್ಬರ ಜೀವನ ಹಾಳಾಗುವುದು ಬೇಡ ಎನ್ನುವ ಕಾರಣಕ್ಕೆ ವೈಯಕ್ತಿಕವಾಗಿ ನಾನು ಮಂಜನನ್ನು ಒಳಗೆ ಕಳುಹಿಸಿದೆ ಎಂದು ವಿವರಿಸಿದ್ದಾರೆ.
ಬೇರೆ ಭಾಷೆಗಳ ಬಿಗ್‌ಬಾಸ್ ಶೋಗಳಲ್ಲಿ ಹೀಗೆ ರೆಡ್ ಕಾರ್ಟ್ ತೋರ್ಸಿ ಸ್ಪರ್ಧಿಗಳನ್ನು ಹೊರಗೆ ಕಳುಹಿಸಿದ್ದಾರೆ. ನನ್ನ ಶೋನಲ್ಲಿ ಅದನ್ನು ನಾನು ಒಪ್ಪುವುದಿಲ್ಲ. ರೆಡ್ ಕಾರ್ಡ್ ತೋರಿಸೋದ್ರಿಂದ ಒಬ್ಬರ ಜೀವನ ಹಾಳಾಗುತ್ತೆ.. ಅದು ಬೇಡ, ಅವರಲ್ಲೂ ವ್ಯಕ್ತಿತ್ವ ಇದೆ. ಕಲೆ ಇದೆ.. ಕೆಲವೊಮ್ಮೆ ಎಡವಿರಬಹುದು.. ನಾವು ಎಡವುತ್ತೀವಿ.. ಹಾಗಾಗಿ ಆ ಹುಡುಗನಲ್ಲಿ ಚಿಕ್ಕದಾಗಿ ಒಳ್ಳೆದಾಗ್ಲಿ.. ಕೊನೆ ಪಕ್ಷ ಮನೆಯಿಂದ ಹೊರಗೆ ಹೋಗುವಾಗ ಒಳ್ಳೆ ವಿಟಿ ಕೊಟ್ಟು ಕಳಿಸೋಣ ಎಂದು ವೈಯಕ್ತಿಕವಾಗಿ ಮತ್ತೆ ಮನೆ ಒಳಗೆ ಕಳುಹಿಸಿದೆ" ಎಂದು ಸುದೀಪ್ ಹೇಳಿದ್ದಾರೆ.
ಅಗ್ನಿ ಪರೀಕ್ಷೆ ಎದುರಿಸಿ ಗೆದ್ದು ಕಾಮನ್‌ಮ್ಯಾನ್ ಕ್ಯಾಟಗರಿಯಲ್ಲಿ ಮಂಜ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಮೊದಲಿಗೆ 35 ದಿನ ಮನೆ ಒಳಗೆ ಇದ್ದರು. ಯಶಸ್ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ, ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಆರೋಪಗಳನ್ನು ಮಾಡಿ ಮಂಜು ಎಡವಟ್ಟು ಮಾಡಿದ್ದರು. ಹೀಗೆ ಮನೆ ನಿಯಮಗಳನ್ನು ಮೀರಿದ್ದ ಕಾರಣಕ್ಕೆ ರೆಡ್ ಕಾರ್ಡ್ ಪಡೆದು ಎಲಿಮಿನೇಟ್ ಆಗಿದ್ದರು. ಬಳಿಕ 63ನೇ ದಿನಕ್ಕೆ ರೀ ಎಂಟ್ರಿ ಪಡೆದು ಮಂಜು ಮನೆ ಪ್ರವೇಶಿಸಿದ್ದರು. ಇದೀಗ 77ನೇ ದಿನಕ್ಕೆ ತಮ್ಮ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬರುವಂತಾಗಿದೆ.
Deepanna can't do anything here Makers are doing more than Manja and Candy ever did. Candy deserved a RED CARD but she being saved by quota🙂#BBK13 pic.twitter.com/haZeBLmSro
— saisurya (@saiprasad2628) November 22, 2026