ಬಿಗ್‌ಬಾಸ್ ಕನ್ನಡ ಸೀಸನ್ 13 ಇದೀಗ 50ನೇ ದಿನಕ್ಕೆ ಕಾಲಿಟ್ಟಿದೆ. ವೀಕ್ಷಕರನ್ನು ಶೋ ರಂಜಿಸುತ್ತಿದೆ. ವೀಕೆಂಡ್‌ನಲ್ಲಿ ಕಿಚ್ಚ ಬಂದು ಪಂಚಾಯ್ತಿ ನಡೆಸಿ ಸರಿ ತಪ್ಪುಗಳ ಲೆಕ್ಕ ಹಾಕಿ ಶಹಬ್ಬಾಶ್‌ಗಿರಿ ಅಥವಾ ಚಾಟಿ ಏಟು ಕೊಡುತ್ತಿದ್ದಾರೆ. ದೊಡ್ಮನೆಯಲ್ಲಿ ಸೌಂದರ್ಯ ಶೆಟ್ಟಿ ಆರ್ಭಟ ಹೋರಾಗಿದೆ. ಇದೆಲ್ಲದರ ನಡುವೆ ಈ ವಾರ ಮತ್ತೊಂದು ಎಲಿಮಿನೇಟ್ ನಡೆದಿದೆ.
ಈ ವೀಕೆಂಡ್ ಪಂಚಾಯ್ತಿ ಶುರುವಾಗಿದೆ. ಸಾಕಷ್ಟು ಸರ್‌ಪ್ರೈಸ್‌ಗಳೊಂದಿಗೆ ಶನಿವಾರದ ಎಪಿಸೋಡ್ ಮುಗಿದಿದೆ. ಭಾನುವಾರದ ಎಪಿಸೋಡ್‌ನಲ್ಲಿ ಸಖತ್ ಫನ್ ಕೂಡ ಇದೆ. ಜೊತೆಗೆ ಲಕ್ಷ್ಮಿ ಗೌಡ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಅಗ್ನಿಪರೀಕ್ಷೆ ಮೂಲಕ ಲಕ್ಷ್ಮಿ ಗೌಡ ಬಿಗ್‌ಬಾಸ್ ಮನೆ ಪ್ರವೇಶಿಸುವ ಪ್ರಯತ್ನ ಮಾಡಿದ್ದರು. ಆದರೆ ಆರಂಭದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ 35 ದಿನಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆ ಪ್ರವೇಶಿಸಿದ್ದರು. ಎರಡೇ ವಾರಕ್ಕೆ ತಮ್ಮ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ ಎಂದು ಹೇಳಲಾಗ್ತಿದೆ.
ಪ್ರಶಾಂತ್ ಗೌಡ, ಗಾನವಿ ಗೌಡ ಹಾಗೂ ಸೋನಿಕಾ ಗೌಡ ಮೊದಲಿಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಅಗ್ನಿ ಪರೀಕ್ಷೆ ಸ್ಪರ್ಧಿಗಳಾಗಿದ್ದ ಕುಮಾರಿ ಹಾಗೂ ಲಕ್ಷ್ಮಿ ಗೌಡಗೂ ಈ ಅವಕಾಶ ಸಿಕ್ಕಿತ್ತು. ಆದರೆ ಇವರಿಬ್ಬರು ಸ್ಪರ್ಧಿಗಳಾಗಿ ಅಲ್ಲದೇ ಅತಿಥಿಗಳಾಗಿ ಮಾತ್ರ ಮನೆಯೊಳಗೆ ಹೋಗಿದ್ದಾರೆ ಎನ್ನಲಾಗ್ತಿದೆ.
ಮಂಜು ನಾಲಿಗೆ ಹರಿಬಿಟ್ಟು ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು. ಸಂಗೀತಾ ಭಟ್ ಅನಾರೋಗ್ಯ ಕಾರಣದಿಂದ ಜರ್ನಿ ಮುಗಿಸಿದ್ದರು. ಹಾಗಾಗಿ ಒಟ್ಟಿಗೆ ಕುಮಾರಿ ಹಾಗೂ ಲಕ್ಷ್ಮಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಮಂಡ್ಯ ಮೂಲದ ಲಕ್ಷ್ಮಿ ಗೌಡ ಬೆಂಗಳೂರಿನಲ್ಲಿ ನೆಲೆಸಿದ್ದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫನ್ನಿ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದವರು. ಅಗ್ನಿ ಪರೀಕ್ಷೆಯಲ್ಲಿ ತೀರ್ಪುಗಾರ್ತಿ ಶ್ರುತಿ ಅವರ ಮನಗೆದ್ದು ಲಕ್ಷ್ಮಿ ಅಂತಿಮ ಹಂತದವರೆಗೆ ಬಂದಿದ್ದರು. ಬಳಿಕ ಹಿನ್ನಡೆ ಆಗಿತ್ತು.
ಈ ವಾರ ಸೋನಿಕಾ, ಕುಮಾರಿ ಹಾಗೂ ಲಕ್ಷ್ಮಿ ಎಲಿಮಿನೇಟ್ ಆಗಲು ಕೊನೆಯವರಾಗಿ ಉಳಿದುಕೊಂಡಿದ್ದರು. ಅಂತಿಮವಾಗಿ ಲಕ್ಷ್ಮಿ ಅವರ ಬಿಗ್‌ಬಾಸ್ ಜರ್ನಿ ಮುಗಿದಿದೆ ಎಂದು ಹೇಳಲಾಗ್ತಿದ್ದು ಶೀಘ್ರದಲ್ಲೇ ಸ್ಪಷ್ಟನೆ ಸಿಗಲಿದೆ.