ಭಾರತದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆಗೆ ಇನ್ನು ಒಂದು ವಾರ ಬಾಕಿಯಿದೆ. ಆದರೆ ಈಗಾಗಲೇ ವಿದೇಶದಲ್ಲಿ ಪ್ರೀಮಿಯರ್ ಶೋ ಆರಂಭವಾಗಿದೆ. ಅಮೆರಿಕಾದ ಲಾಸ್ ಏಂಜಲೀಸ್‌ನ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ 'ರಾಮಾಯಣ' ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಕೂಡ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.
ಪತ್ನಿ ರಾಧಿಕಾ ಪಂಡಿತ್ ಸಮೇತ ಯಶ್ ಲಾಸ್ ಏಂಜಲೀಸ್‌ಗೆ ತೆರಳಿಸಿದ್ದಾರೆ. ಚಿತ್ರಮಂದಿರದಲ್ಲಿ ರಾಕಿಂಗ್ ಸ್ಟಾರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಯಶ್ ಎಂಟ್ರಿ ಆಗುತ್ತಿದ್ದಂತೆ ರಾವಣ.. ರಾವಣ ಎಂದು ಜೈಕಾರ ಹಾಕಿರುವ ವೀಡಿಯೋ ವೈರಲ್ ಆಗ್ತಿದೆ. ಇನ್ನು ಅಲ್ಲಿನ ಮಾಧ್ಯಮಗಳ ಜೊತೆ ಮಾತನಾಡಿರುವ ಯಶ್ ಯಾವುದೇ ಕಾರಣಕ್ಕೂ ನಮ್ಮ ಹಿನ್ನಲೆ ಮರೆಯಬಾರದು ಎಂದು ಹೇಳಿರುವುದು ಗಮನ ಸೆಳೆದಿದೆ.
ದೀಪಾವಳಿ ಸಂಭ್ರಮದಲ್ಲಿ ನವೆಂಬರ್ 5ರಂದು 'ರಾಮಾಯಣ' ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಬಹುಕೋಟಿ ವೆಚ್ಚದಲ್ಲಿ ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣವಾಗಿದೆ. ಪ್ರೀಮಿಯರ್ ಶೋ ಆರಂಭವಾಗುವ ಮುನ್ನ ಯಶ್ ಮಾತನಾಡಿ "ನೀವು ಎಲ್ಲಿಂದ ಪ್ರಾರಂಭಿಸುತ್ತೀರಿ ಎಂಬುದು, ನೀವು ಎಷ್ಟು ದೂರ ಸಾಗುತ್ತೀರಿ ಎಂಬುದನ್ನು ಎಂದಿಗೂ ನಿರ್ಧರಿಸಲಾರದು. ಹಾಗಾಗಿ, ನಾನು ಕನ್ನಡ ಚಲನಚಿತ್ರರಂಗದ ಸದಸ್ಯನಾಗಿದ್ದೇನೆ ಎಂದು ಇಂದಿಲ್ಲಿ ಹೆಮ್ಮೆಯಿಂದ ಹೇಳಬಲ್ಲೆ" ಎಂದಿದ್ದಾರೆ. ಯಶ್ ಕನ್ನಡ ಪ್ರೇಮವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಈಗಾಗಲೇ ಪ್ರೀಮಿಯರ್ ಶೋ ಮುಗಿದಿದ್ದು ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ರಾಮಾಯಣ' ದೃಶ್ಯವೈಭವ ಕಂಡು ಬೆರಗಾದೆವು ಎಂದು ಜೈಕಾರ ಹಾಕುತ್ತಿದ್ದಾರೆ. ಪ್ರೀಮಿಯರ್ ಶೋಗೆ ಸಂಬಂಧಿಸಿದ ಫೋಟೊ, ವೀಡಿಯೋಗಳು ಸಖತ್ ವೈರಲ್ ಆಗ್ತಿದೆ.
ಸೋನಿ ಪಿಕ್ಚರ್ಸ್ ಸಂಸ್ಥೆ 'ರಾಮಾಯಣ' ಚಿತ್ರದ ಅಂತರಾಷ್ಟ್ರೀಯ ಮಟ್ಟದ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ. ಹಾಗಾಗಿ ಹಾಲಿವುಡ್ ಅಂಗಳದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ನಮ್ಮ ಸಿನಿಮಾ ಬಿಡುಗಡೆ ಆಗ್ತಿದೆ. ಭಾರತದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ತ್ರಿಡಿಯಲ್ಲಿ ಸಿನಿಮಾ ನೋಡಲು ಸಾಕಷ್ಟು ಜನ ಕಾಯ್ತಿದ್ದಾರೆ.
Ravana Chants in LA....💥🔥#Ramayana pic.twitter.com/qZ10Lgvq3G
— 𝙈𝙖𝙣𝙪𝙪𝙪🧢 (@ManuMonster19) October 28, 2026
💛❤️🔥
— 𝙈𝙖𝙣𝙪𝙪𝙪🧢 (@ManuMonster19) October 28, 2026
pic.twitter.com/VkZXBlDrtL