ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಹಬ್ಬದ ಸಂಭ್ರಮದಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಯಶ್ ನಟನೆಯ 'ರಾಮಾಯಣ' ಭಾಗ -1 ಲಿಸ್ಟ್‌ನಲ್ಲಿದೆ. ತಮಿಳಿನಲ್ಲಿ ಎರಡು ತೆಲುಗಿನಲ್ಲಿ ಒಂದು ಸಿನಿಮಾ ಕೂಡ ಪಟ್ಟಿಯಲ್ಲಿದೆ. ಒಂದು ಹಾಲಿವುಡ್ ಸಿನಿಮಾ ಕೂಡ ಪೈಪೋಟಿಗೆ ಇಳಿತ್ತಿದೆ.

ಹಬ್ಬದ ಸಂಭ್ರಮದಲ್ಲಿ ದೊಡ್ಡ ಸಿನಿಮಾಗಳ ಬಿಡುಗಡೆ ಹೊಸದೇನು ಅಲ್ಲ. ಅದರಲ್ಲೂ ಬಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ದೀಪಾವಳಿ ಸೆಂಟಿಮೆಂಟ್ ಹೆಚ್ಚು. ಸ್ಟಾರ್ ನಟರ ಸಿನಿಮಾಗಳು ಬೆಳಕಿನ ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬಂದಿವೆ. ಅದೇ ರೀತಿ ಈ ವರ್ಷ ಕೂಡ ಬಾಕ್ಸಾಫೀಸ್ ಕದನ ಜೋರಾಗಿ ಇರಲಿದೆ.

ರಾಮಾಯಣ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸರಣಿ ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಮೊದಲ ಭಾಗ ನವೆಂಬರ್ 5ರಂದು ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆ ಆಗ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸಿರುವುದು ವಿಶೇಷ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

ಗಾಡ್ಜಿಲ್ಲಾ ಮೈಸನ್ ಜಿರೋ

ನವೆಂಬರ್ 13ರಂದು ಹಾಲಿವುಡ್ ಸಿನಿಮಾ 'ಗಾಡ್ಜಿಲ್ಲಾ ಮೈಸನ್ ಜಿರೋ' ಸಿನಿಮಾ ತೆರೆಗಪ್ಪಳಿಸಲಿದೆ. 'ರಾಮಾಯಣ' ಹಾಗೂ 'ಗಾಡ್ಜಿಲ್ಲಾ' ಚಿತ್ರಗಳ ನಡುವೆ ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಪೈಪೋಟಿ ಏರ್ಪಡುವ ಸುಳಿವು ಸಿಕ್ಕಿದೆ. ವಿದೇಶಗಳಲ್ಲಿ ಕೂಡ ಎರಡೂ ಚಿತ್ರಗಳ ನಡುವೆ ಕದನ ನಡೆಯಲಿದೆ. ಸೋನಿ ಪಿಕ್ಚರ್ಸ್ ಸಂಸ್ಥೆ ಹಾಲಿವುಡ್ ಅಂಗಳದಲ್ಲಿ 'ರಾಮಾಯಣ' ಚಿತ್ರವನ್ನು ವಿತರಣೆ ಮಾಡುತ್ತಿದೆ.

ಮೂಕುಟ್ಟಿ ಅಮ್ಮನ್- 2

ಸುಂದರ್ .ಸಿ ನಿರ್ದೇಶನದಲ್ಲಿ 'ಮೂಕುಟ್ಟಿ ಅಮ್ಮನ್- 2' ಚಿತ್ರ ಕೂಡ ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಲು ಬರ್ತಿದೆ. ಈ ಫ್ಯಾಂಟಸಿ ಚಿತ್ರದಲ್ಲಿ ಮತ್ತೊಮ್ಮೆ ಮೂಕುಟ್ಟಿ ಅಮ್ಮನ್ ಅವತಾರದಲ್ಲಿ ನಯನತಾರಾ ನಟಿಸಿದ್ದಾರೆ. ವಿಲನ್ ಆಗಿ ದುನಿಯಾ ವಿಜಯ್ ಅಬ್ಬರಿಸಿದ್ದಾರೆ. ಇದೇ ಹೆಸರಿನಲ್ಲಿ ಹಿಂದೆ ಒಂದು ಸಿನಿಮಾ ಬಂದು ಗೆದ್ದಿತ್ತು.

ಸೀನ್

ಜಿತು ಮಾಧವನ್ ನಿರ್ದೇಶನದಲ್ಲಿ ಸೂರ್ಯ ಹಾಗೂ ಜ್ಯೋತಿಕಾ ದಂತಿ ನಟನೆಯ 'ಸೀನ್' ಚಿತ್ರ ನವೆಂಬರ್ 6ರಂದು ತೆರೆಗೆ ಬರ್ತಿದೆ. ನಸ್ಸೆನ್ ಹಾಗೂ ನಜ್ರಿಯಾ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಇದೊಂದು ಆಕ್ಷನ್ ಕಾಮಿಡಿ ಸಿನಿಮಾ ಆಗಿದ್ದು ಡಿಎಸ್‌ಪಿ ಇನ್ಬರಾಜ್ ಪಾತ್ರದಲ್ಲಿ ಸೂರ್ಯ ಮಿಂಚಿದ್ದಾರೆ.

ಆದರ್ಶ ಕುಟುಂಬಂ

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ವಿಕ್ಟರಿ ವೆಂಕಟೇಶ್ ನಿರ್ದೇಶನದ 'ಆದರ್ಶ ಕುಟುಂಬಂ' ಸಿನಿಮಾ ಕೂಡ ದೀಪಾವಳಿ ರೇಸ್‌ನಲ್ಲಿದೆ. ಅಕ್ಟೋಬರ್ 30ರಂದು ಅಂದ್ರೆ ಹಬ್ಬಕ್ಕಿಂತ ಬಹಳ ಬೇಗ ಈ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ತೆರೆಗೆ ಬರ್ತಿದೆ. ಶ್ರೀನಿಧಿ ಶೆಟ್ಟಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.