ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಗೌಡ ನಡುವಿನ ಸಂಘರ್ಷ ತಾರಕಕ್ಕೆ ಏರಿದೆ. ಧನ್ವೀರ್ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಇದನ್ನು ಒಪ್ಪಲು ಸಿದ್ಧರಿಲ್ಲ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಧನ್ವೀರ್ ಗೌಡನ ದರ್ಶನ್ ಬ್ಲಾಕ್ ಮಾಡಿದ್ದಾರೆ. ಹೀಗಂತ ಸ್ವತಃ ಧನ್ವೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರನ್ನು ಧನ್ವೀರ್ ಅನ್‌ಫಾಲೋ ಮಾಡಿದ್ದಾರೆ ಎಂದು ಗುಲ್ಲಾಗಿದೆ. ಇದಕ್ಕೆ ಸ್ವತಃ ಧನ್ವೀರ್ ಸ್ಪಷ್ಟನೆ ಕೊಟ್ಟಿದ್ದಾರೆ. "ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಸರ್ ಅಕೌಂಟ್ ಇಂದ ಬ್ಲಾಕ್‌ ಮಾಡಬಹುದು. ನಾನೇ ಅನ್‌ಫಾಲೋ ಮಾಡಿದೆ ಎಂದು ಬಿಂಬಿಸಬಹುದು. ಜನರ ಮುಂದೆ ನನ್ನನ್ನು ಕೆಟ್ಟವನಾಗಿ ಬಿಂಬಿಸಬಹುದು. ನನ್ನ ವಿರುದ್ಧ ಎಷ್ಟು ಬೇಕಾದರೂ ನೆಗೆಟಿವ್ ಪಿಆರ್ ಮಾಡಬಹುದು. ಆದರೆ ನನ್ನ ಹೃದಯದ ಬಾಗಿಲಲ್ಲಿ ದರ್ಶನ್ ಸರ್ ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ" ಎಂದು ಬರೆದುಕೊಂಡಿದ್ದಾರೆ.

"ನನ್ನ ಅಭಿಮಾನ ನಿಮ್ಮ ವಿರೋಧದಿಂಧ ಹುಟ್ಟಿದ್ದಲ್ಲ. ನಿಮ್ಮ ವಿರೋಧದಿಂದ ಸಾಯುವುದು ಇಲ್ಲ. ಜಗತ್ತು ಏನೇ ಹೇಳಲಿ.. ಕಾಲವೇ ಬದಲಾಗಲಿ.. ನನ್ನ ನಿಲುವು ಒಂದೇ. ನನ್ನ ಅಭಿಮಾನ ಒಂದೇ.. ದರ್ಶನ್ ಸರ್ ಫಾರ್ ಎವರ್" ಎಂದು ಧನ್ವೀರ್ ಗೌಡ ಪೋಸ್ಟ್ ಮಾಡಿದ್ದಾರೆ. ಸದ್ಯ ದರ್ಶನ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಪತ್ನಿ ವಿಜಯಲಕ್ಷ್ಮಿ ಹ್ಯಾಂಡಲ್ ಮಾಡುತ್ತಿದ್ದಾರೆ. ಇದೀಗ ಅವರೇ ದರ್ಶನ್ ಅವರ ಅಕೌಂಟ್‌ನಲ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ ಎಂದು ಧನ್ವೀರ್ ಆರೋಪಿಸಿದ್ದಾರೆ.

ದರ್ಶನ್ ಸರ್ ಜೈಲಿನಿಂದ ಹೊರಗೆ ಬರುವುದು ಸ್ವತಃ ಪತ್ನಿ ವಿಜಯಲಕ್ಷ್ಮಿಗೆ ಇಷ್ಟವಿಲ್ಲ. ಆಕೆ ದೇವಸ್ಥಾನಗಳಿಗೆ ಸುತ್ತಾಡುವುದೆಲ್ಲಾ ಬರೀ ಫೇಕ್.. ಆಕೆಯ ಕಾರಣಕ್ಕೆ ಇನ್ನು ಜಾಮೀನು ಸಿಕ್ಕಿಲ್ಲ ಎಂದು ಫಸ್ಟ್ ನ್ಯೂಸ್ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಧನ್ವೀರ್ ಆರೋಪ ಮಾಡಿದ್ದಾರೆ. ನಾನು ಮಾತ್ರ ಯಾವುದೇ ಕಾರಣಕ್ಕೂ ದರ್ಶನ್ ಅವರನ್ನು ಬಿಡುವ ಮಾತೇಯಿಲ್ಲ. ಆ ವ್ಯಕ್ತಿ ಜೊತೆ ನಾನು ಸದಾ ನಿಲ್ಲುತ್ತೇನೆ ಎಂದು ಧನ್ವೀರ್ ಹೇಳುತ್ತಿದ್ದಾರೆ.