ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಗೌಡ ಅಕ್ಕ ತಮ್ಮನ ರೀತಿ ಇದ್ದವರು. ದರ್ಶನ್ ನಮ್ಮ ಅಣ್ಣ ವಿಜಯಲಕ್ಷ್ಮಿ ನಮ್ಮ ಅತ್ತಿಗೆ ಎಂದು ಹೇಳಿಕೊಳ್ಳುತ್ತಿದ್ದರು. ಇದೀಗ ಅತ್ತಿಗೆ ಮೈದುನನ ನಡುವೆಯೇ ಭಿನ್ನಾಭಿಪ್ರಾಯ ಮೂಡಿದೆ. ಇದಕ್ಕೆಲ್ಲಾ ಕಾರಣ ದುಡ್ಡು ಎನ್ನುವುದು ಈಗ ಗೊತ್ತಾಗುತ್ತಿದೆ. ಈ ಬಗ್ಗೆ ದರ್ಶನ್ ಹಾಗೂ ಧನ್ವೀರ್ ಕುಟುಂಬಗಳಿಗೆ ಆಪ್ತರಾಗಿರುವ ಮಾಜಿ ಕಾರ್ಪೊರೇಟರ್ ವೇಲು ನಾಯಕ್ ಮಾತನಾಡಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲಿಗೆ ಸೇರಿದ ದಿನದಿಂದ ಧನ್ವೀರ್ ಅವರ ಕುಟುಂಬದ ಬೆಂಬಲಕ್ಕೆ ನಿಂತಿದ್ದರು. ವಿಜಯಲಕ್ಷ್ಮಿ ಜೊತೆ ದೇವಸ್ಥಾನ, ಕೋರ್ಟ್ ಕಚೇರಿ ಅಂತೆಲ್ಲಾ ಓಡಾಡಿದ್ದರು. ಈ ವೇಳೆ ಸಾಕಷ್ಟು ಹಣದ ವ್ಯವಹಾರ ನಡೆದಿತ್ತು. ವಿಜಯಲಕ್ಷ್ಮಿ ದರ್ಶನ್ ಬಳಿ ಒಂದಷ್ಟು ಹಣ ಪಡೆದು ಧನ್ವೀರ್ ಖರ್ಚು ವೆಚ್ಚ ನೋಡಿಕೊಂಡಿದ್ದರು. ಇದರಲ್ಲೇ ಹೆಚ್ಚು ಕಮ್ಮಿ ಆಗಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಅಕ್ಕ-ತಮ್ಮನ ನಡುವೆ ವೈಮನಸ್ಸು ಮೂಡಿದೆ ಎಂದು ವೇಲು ನಾಯಕ್ ಜೀಕನ್ನಡ ನ್ಯೂಸ್ ವಾಹಿನಿ ಮಾಹಿತಿ ನೀಡಿದ್ದಾರೆ.

ಕಿರಿಕ್‌ಗೆ ಕಾರಣ ?

ಧನ್ವೀರ್ ಅಂದ್ರೆ ವಿಜಯಲಕ್ಷ್ಮಿಗೆ ಸಹೋದರ ಎನ್ನುವಂತಹ ಸಲುಗೆ ಇತ್ತು. ಧನ್ವೀರ್ ತಂದೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಾರೆ. ಹಾಗಾಗಿ ಸಾಕಷ್ಟು ವಕೀಲರ ಪರಿಚಯ ಇತ್ತು. ಹಾಗಾಗಿ ದರ್ಶನ್ ಕೇಸ್ ನಡೆಸುವ ಜವಾಬ್ದಾರಿಯನ್ನು ಧನ್ವೀರ್ ವಹಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‌ವರೆಗೂ ಕೇಸ್ ಹೋಗಿದ್ದು ಗೊತ್ತೇಯಿದೆ. ಹಾಗಾಗಿ ಸಾಕಷ್ಟು ಹಣ ಧನ್ವೀರ್ ಪಡೆದಿದ್ದರು. ದರ್ಶನ್ ಜೈಲಿನಿಂದ ಹೊರ ಬರುವುದು ಸ್ವತಃ ವಿಜಯಲಕ್ಷ್ಮಿಗೆ ಇಷ್ಟವಿಲ್ಲ ಎನ್ನುವುದೆಲ್ಲಾ ಸುಳ್ಳು. ಪಾಪ ಆ ಹೆಣ್ಣುಮಗಳು ಪತಿಯನ್ನು ಸಂಕಷ್ಟದಿಂದ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದೆಲ್ಲಾ ಸುಳ್ಳು ವದಂತಿ ಎಂದು ವೇಲು ನಾಯಕ್ ತಿಳಿಸಿದ್ದಾರೆ.

ಧನ್ವೀರ್ ಹಣ ವಾಪಸ್ ಕೊಡ್ತಿಲ್ಲ

ಕೋರ್ಟ್ ವಿಚಾರಕ್ಕೆ ಧನ್ವೀರ್‌ಗೆ ಸಾಕಷ್ಟು ಹಣ ವಿಜಯಲಕ್ಷ್ಮಿ ಕೊಟ್ಟಿದ್ದಾರೆ. ಖರ್ಚಾಗಿದ್ದು ಬಿಟ್ಟು ಉಳಿದ ಹಣ ವಾಪಸ್ ಕೊಡು ಎಂದು ವಿಜಯಲಕ್ಷ್ಮಿ ಕೇಳಿದ ಮೇಲೆ ಸಮಸ್ಯೆ ಶುರುವಾಗಿದೆ ಎನ್ನುವುದು ನನ್ನ ಅಭಿಪ್ರಾಯ ಎಂದು ವೇಲು ನಾಯಕ್ ತಿಳಿಸಿದ್ದಾರೆ. ನಾನೇ ಧನ್ವೀರ್‌ನ ಅವತ್ತು ಪರಪ್ಪನ ಅಗ್ರಹಾರ ಜೈಲಿಗೆ ಕರ್ಕೊಂಡ್ ಹೋಗಿ ದರ್ಶನ್ ಭೇಟಿ ಮಾಡಿಸಿದ್ದೆ. ಅವರನ್ನು ದರ್ಶನ್ ಅವ್ರು ಹೇಳಿದ್ದು ಒಂದೇ ಮಾತು ಎಂದಿದ್ದಾರೆ.

ಹಣ ಕೊಡ್ಟಿಡು ಚಿನ್ನಾ..

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರಕ್ಕೆ ಎರಡು ದಿನ ಮಾತ್ರ ಕುಟುಂಬಸ್ಥರು ದರ್ಶನ್ ಭೇಟಿ ಮಾಡಲು ಅವಕಾಶ ಇದೆ. ಕುಟುಂಬಸ್ಥರು ಒಪ್ಪಿದ್ರೆ ಬೇರೆಯವರನ್ನು ಕರೆದುಕೊಂಡು ಹೋಗಬಹುದು. ಪದೇ ಪದೆ ಧನ್ವೀರ್ ಬಳಿ ವಿಜಯಲಕ್ಷ್ಮಿ ಹಣ ವಾಪಸ್ ಕೇಳುತ್ತಿದ್ರು. "ಅಣ್ಣಾ ಹೇಳಿದ್ರೆ, ಒಂದೇ ದಿನಕ್ಕೆ ವಾಪಸ್ ಕೊಡ್ತೀನಿ" ಎಂದಿದ್ದರಂತೆ.. ಹಾಗಾಗಿ ದರ್ಶನ್ ಅವರ ಬಳಿ ಹೇಳಿಸೋಕೆ ಅವತ್ತು ಜೈಲಿಗೆ ಕರ್ಕೊಂಡು ಹೋಗಿದ್ದೆ.. ನೋಡ್ ಚಿನ್ನಾ ಹಣ ವಾಪಸ್ ಕೊಡು, ನನ್ನದು ನಿನ್ನದು ಏನಿದೆ ಹೊರಗಡೆ ಬಂದ್ಮೇಲೆ ಮಾತಾಡೋಣ, ಈಗ ಸಮಸ್ಯೆಯಿದೆ. ಹಣ ವಾಪಸ್ ಕೊಡ್ಬಿಡು ಅಂದ್ರು.. ಸರಿ ಅಣ್ಣಾ ನಾಳೆನೇ ಕೊಡ್ಬಿಡ್ತೀನಿ ಎಂದು ಧನ್ವೀರ್ ಹೇಳಿಬಂದ್ರು. ಈಗ ಧನ್ವೀರ್‌ನ ಕೇಳಿದ್ರೆ, ಸತಾಯಿಸುತ್ತಿದ್ದಾರೆ ಎಂದು ವೇಲು ನಾಯಕ್ ಅಸಲಿ ಸಂಗತಿ ಬಿಚ್ಚಿಟ್ಟಿದ್ದಾರೆ.