ಹಣಕಾಸು ವಿಚಾರಕ್ಕೆ ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಕುಟುಂಬದ ನಡುವೆ ತಿಕ್ಕಾಟ ಶುರುವಾಗಿದೆ. ಇದೇ ವಿಚಾರಕ್ಕೆ ಪೊಲೀಸ್ ಸ್ಟೇಷನ್, ದೂರು ಅಂತೆಲ್ಲಾ ರಾದ್ಧಾಂತವಾಗಿದೆ. ವಿಜಯದಶಮಿ ಹಬ್ಬದ ದಿನ ಧನ್ವೀರ್ ಮನೆಗೆ ವಿಜಯಲಕ್ಷ್ಮಿ ಹೋಗಿದ್ದರು. ಈ ವೇಳೆ ಕಿರಿಕ್ ಆಗಿತ್ತು ಎನ್ನುವ ವಿಚಾರ ಗೊತ್ತೇಯಿದೆ. ಧನ್ವೀರ್ ಕೆಟ್ಟದಾಗಿ ಬೈದಿದ್ದಾನೆ ಎಂದು ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ದೂರು ಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಹಾಗೂ ನಾಗರಾಜ್ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ರು ಎಂದು ಧನ್ವೀರ್ ತಂದೆ ದೂರು ನೀಡಿದ್ದಾರೆ.
ಅವತ್ತು ಧನ್ವೀರ್ ಮನೆಯಲ್ಲಿ ಏನೆಲ್ಲಾ ನಡೀತು ಎನ್ನುವ ಬಗ್ಗೆ ದರ್ಶನ್ ಆಪ್ತ ವೇಲು ನಾಯ್ಕರ್ ಮಾತನಾಡಿದ್ದಾರೆ. ಬಾಸ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದು ಹಂತಕ್ಕೆ ವಿಜಯಲಕ್ಷ್ಮಿ ಅವರನ್ನು ಅಂದು ಧನ್ವೀರ್ ಮನೆಯ ಕೋಣೆ ಒಂದರಲ್ಲಿ ಕುಟುಂಬ ಸದಸ್ಯರು ಕೂಡಿ ಹಾಕಿದ್ರು ಎಂದು ಹೇಳಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗ್ತಿದೆ.
ಆ ದಿನ ಧನ್ವೀರ್ ಮನೆಯಲ್ಲಿ ಏನೆಲ್ಲಾ ಆಯ್ತು ಎಂದು ವೇಲು ನಾಯ್ಕರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪತಿಯನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ವಿಜಯಲಕ್ಷ್ಮಿ ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ವರೆಗೂ ಹೋಗಿ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ಹಣ ವ್ಯಯಿಸಿದ್ದಾರೆ. ಧನ್ವೀರ್ ಮುಂದೆ ನಿಂತು ಇದನ್ನೆಲ್ಲಾ ನೋಡಿಕೊಳ್ಳುತ್ತಿದ್ರು. ಹಾಗಾಗಿ ಇಬ್ಬರ ನಡುವೆ ಹಣದ ವ್ಯವಹಾರ ನಡೆದಿದೆ. ಉಳಿದ ಹಣ ಕೊಟ್ಟಿಲ್ಲ ಎನ್ನುವುದಕ್ಕೆ ವಿಜಯಲಕ್ಷ್ಮಿ ಗರಂ ಆಗಿದ್ದಾರೆ. ಅದನ್ನು ವಾಪಸ್ ಕೇಳಿದ್ದಾಗಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ವರದಿಯಾಗಿದೆ.
ಅವತ್ತು ಹಣ ಕೇಳೋಕೆ ಧನ್ವೀರ್ ತಂದೆಗೆ ಸಾಕಷ್ಟು ಬಾರಿ ವಿಜಯಲಕ್ಷ್ಮಿ ಅವ್ರು ಕಾಲ್ ಮಾಡಿದ್ರು.. ಅವ್ರು ಪಿಕ್ ಮಾಡಿರಲಿಲ್ಲ.. ಅಂಕಲ್ ಎಷ್ಟು ಕಾಲ್ ಮಾಡಿದ್ರು ನೀವ್ ಪಿಕ್ ಮಾಡ್ತಿಲ್ಲ. ಸಂಜೆ ಮನೆ ಹತ್ರ ಬಂದು ಮಾತಾಡ್ಕೊಂಡು ಹೋಗ್ತೀನಿ ಎಂದು ವಿಜಯಲಕ್ಷ್ಮಿ ಮೆಸೇಜ್ ಹಾಕಿದ್ದಾರೆ. ಆ ಮೆಸೇಜ್ ಕೂಡ ನನ್ನ ಬಳಿಯಿದೆ. ಬಳಿಕ ಸಂಜೆ ನಾಗರಾಜ್ನ ಕರ್ಕೊಂಡು ಧನ್ವೀರ್ ಮನೆಗೆ ವಿಜಯಲಕ್ಷ್ಮಿ ಹೋಗಿದ್ರು ಎಂದು ವೇಲು ನಾಯ್ಕರ್ ಹೇಳಿದ್ದಾರೆ.
ಮನೆಗೆ ಹೋದಾಗ ಧನ್ವೀರ್ ತಾಯಿ, ತಂಗಿ ಜೊತೆ ವಿಜಯಲಕ್ಷ್ಮಿ ಮಾತಾಡ್ತಾ ಕೂತಿರ್ತಾರೆ.. ಆಗ ಇಬ್ರು ಮೂವರು ಬರ್ತಾರೆ. ಯಾರು ಅಂತ ಕೇಳಿದ್ದಕ್ಕೆ ನಮ್ಮ ಸಂಬಂಧಿಕರು ಅಂತಾರೆ.. ಅಷ್ಟರಲ್ಲಿ ಧನ್ವೀರ್ ತಂದೆ ಮಹಡಿ ಮೇಲಿಂದ ಕೆಳಗೆ ಇಳಿದು ಬರ್ತಾರೆ.. ಇದ್ದಕ್ಕಿದಂತೆ ಅವಾಚ್ಯ ಪದಗಳನ್ನು ಬಳಸಿ ವಿಜಯಲಕ್ಷ್ಮಿ ಬಗ್ಗೆ ಮಾತನಾಡಿದ್ದಾರೆ.. ಯಾಕೆ ಹಿಂಗೆಲ್ಲಾ ಮಾತಾಡ್ತಿದ್ದೀರಾ ಅಂದಾಗ ಏನೋ ಕಿರುಚಾಟ ಆಗ್ತಿದೆ ಎಂದು ಹೊರಗಡೆ ಕಾರ್ ಬಳಿಯಿದ್ದ ನಾಗರಾಜ್ ಮನೆ ಒಳಗೆ ಹೋಗಿದ್ದಾರೆ. ಒಳಗಿದ್ದ ಮೂವರು ನಾಗರಾಜ್ನ ನೂಕಾಡಿ ಏನೋ ರೌಡಿನಾ ನೀನು ಎಂದು ಕ್ಯಾತೆ ತೆಗಿತ್ತಾರೆ. ಮೇಡಂ ಆತಂಕದಿಂದ ನನಗೆ ಫೋನ್ ಮಾಡ್ತಾರೆ.. ನಾನು ದೇವರ ಮೆರವಣಿಗೆಯಲ್ಲಿದ್ದ. ಆ ಸೌಂಡ್ನಲ್ಲಿ ನನಗೆ ಕಾಲ್ ಬಂದಿದ್ದು ಗೊತ್ತಾಗ್ಲಿಲ್ಲ. ಹಾಗಾಗಿ ಭೋಜರಾಜ್ ಅನ್ನೋರಿಗೆ ಕಾಲ್ ಮಾಡಿದ್ದಾರೆ ಎಂದು ವೇಲು ನಾಯ್ಕರ್ ವಿವರಿಸಿದ್ದಾರೆ.
ಭೋಜರಾಜ್ ಅನ್ನೋರು ಸಿನಿಮಾ ನಿರ್ಮಾಪಕರು. ರೌಡಿ ಅಲ್ಲ. ಅವರಿಗೆ ಫೋನ್ ಮಾಡಿ ಹೀಗೆ ಧನ್ವೀರ್ ಮನೆಗೆ ಬಂದಿದ್ದೆ ಗಲಾಟೆ ಆಗ್ತಿದೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಅಷ್ಟರಲ್ಲಿ ವಿಜಯಲಕ್ಷ್ಮಿ ಇದ್ದ ಕೋಣೆಯ ಬಾಗಿಲು ಲಾಕ್ ಮಾಡಿದ್ದಾರೆ. ಕೋಣೆಯಲ್ಲಿ ಹಾಕಿ ಬಾಗಿಲು ಚಿಲಕ ಹಾಕಿದ್ರೆ ಕೂಡಿ ಹಾಕಿದಂತೆ ಅರ್ಥ..ಆಗ ಭಯಬಿದ್ದು ನನಗೆ, ಭೋಜರಾಜ್ಗೆ ಫೋನ್ ಮಾಡ್ತಾರೆ.. ಭೋಜರಾಜ್ ಪಕ್ಕದ ಬೀದಿಯಲ್ಲಿ ಇರೋರು.. ಕೂಡಲೇ ಹೋಗಿ ಮಾತಾಡಿ ಬಾಗಿಲು ಚಿಲಕ ತೆಗೆಸಿ, ಹೊರಗೆ ಕಳಿಸ್ತಾರೆ. ಇಂತವರ ಬಳಿ ಹಣ ಯಾಕೆ ಬಿಡಬೇಕು ಅಂತ ಆಗ ಮೇಡಂ ಹಠ ಬರುತ್ತೆ" ಎಂದು ವೇಳು ನಾಯ್ಕರ್ ಹೇಳಿರುವುದು ವೈರಲ್ ಆಗ್ತಿದೆ.