ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಚಿತ್ರದ ಮೊದಲ ಭಾಗ ತೆರೆಗೆ ಬರ್ತಿದೆ. ಮುಂಬೈನಲ್ಲಿ ಚಿತ್ರದ ಸುದ್ದಿಗೋಷ್ಠಿ ನಡೀತು. ಖ್ಯಾತ ಯೂಟ್ಯೂಬರ್ ಮಿಸ್ಟರ್. ಬೀಸ್ಟ್ ಕೂಡ ಚಿತ್ರತಂಡ ಜೊತೆ ಕಾಣಿಸಿಕೊಂಡರು. ಆದರೆ ರಾವಣನ ಪಾತ್ರದಲ್ಲಿ ನಟಿಸಿ ಚಿತ್ರ ನಿರ್ಮಾಣ ಮಾಡಿರುವ ಯಶ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈ ಬಗ್ಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಪ್ರತಿಕ್ರಿಯಿಸಿದರು.
ರಾಮನಾಗಿ ನಟಿಸಿರುವ ರಣಬೀರ್ ಕಪೂರ್, ಸೀತೆಯಾಗಿ ಬಣ್ಣ ಹಚ್ಚಿರುವ ಸಾಯಿ ಪಲ್ಲವಿ ಹಾಗೂ ಲಕ್ಷ್ಮಣ ಪಾತ್ರಧಾರಿ ರವಿ ದುಬೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಯಶ್ ಯಾಕೆ ಬರಲಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ನಟನ ಗೈರುಹಾಜರಿಯ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದರು. ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಪಕರಾಗಿ 'ರಾಮಾಯಣ' ಚಿತ್ರತಂಡವನ್ನು ಸೇರಿಕೊಂಡಿದ್ದಕ್ಕಾಗಿ ಯಶ್ ಅವರಿಗೆ ನಮಿತ್ ಧನ್ಯವಾದ ಅರ್ಪಿಸಿದರು. ಯಶ್ ಒಬ್ಬ ಉತ್ತಮ ವ್ಯಕ್ತಿ ಎಂದು ಶ್ಲಾಘಿಸಿದರು.
ರಾಮಯಣ ರೀತಿಯ ಸಿನಿಮಾ ಮಾಡಲು ನನಗೆ ಯಶ್ ತರ ಬೆಂಬಲಕ್ಕೆ ನಿಲ್ಲುವವರು ಬೇಕಿದ್ದರು. ನಟಿಸುವುದರ ಜೊತೆಗೆ ಅವ್ರು ಜೊತೆಗೆ ನಿಂತ್ರು. ಈ ಚಿತ್ರದಲ್ಲಿ ರಾವಣ ಪಾತ್ರ ಮಾಡುವುದಕ್ಕೆ ಧೈರ್ಯ ಬೇಕು. ಅವ್ರು ಮುಂದೆ ಬಂದ್ರು. ಯಶ್ ಅವರನ್ನು ಇವತ್ತು ಮಿಸ್ ಮಾಡಿಕೊಳ್ತಿದ್ದೀನಿ. ಅವ್ರು ಆರಾಮಾಗಿ ಇದ್ದಾರೆ ಎಂದು ಭಾವಿಸ್ತೀನಿ. ಅವ್ರಿಗೆ ಧನ್ಯವಾದ ಎಂದು ನಮಿತ್ ಮಲ್ಹೋತ್ರಾ ತಿಳಿಸಿದರು.
ನವೆಂಬರ್ 8ರಂದು ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಸಿನಿಮಾ ಬಿಡುಗಡೆ ಆಗಲಿದೆ. ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿವೇಕ್ ಒಬೆರಾಯ್, ರಕುಲ್ ಪ್ರೀತ್ ಸಿಂಗ್, ಅರುನ್ ಗೋವಿಲ್, ಕಾಜಲ್ ಅಗರ್‌ವಾಲ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಾವಿರಾರು ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತೆರೆಗೆ ತರಲಾಗ್ತಿದೆ.
"I needed someone like him to have the ability to stand there and become a pillar of support."
— 𝗩𝗜•{𝗢}•𝗟𝗘𝗡𝗧 ᵀᵒˣᶦᶜ (@violentsaga19) September 26, 2026
Namit sir about #Yash from #Ramayana event 🫰🔥#YashBoss | @TheNameIsYash pic.twitter.com/VRMc6qgwNb