'ಕೆಜಿಎಫ್' ಸಿನಿಮಾ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಈಗ ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗ್ತಿದ್ದಾರೆ. ಈ ವಾರ ಆಕೆ ನಟಿಸಿರುವ 'ಆದರ್ಶ ಕುಟುಂಬಂ' ಸಿನಿಮಾ ಬಿಡುಗಡೆ ಆಗ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಪತ್ನಿ ಪಾತ್ರದಲ್ಲಿ ಆಕೆ ನಟಿಸಿದ್ದಾರೆ.
'ಆದರ್ಶ ಕುಟುಂಬಂ' ಸಿನಿಮಾ ಪ್ರಚಾರ ಭರದಿಂದ ಸಾಗ್ತಿದೆ. ದಸರಾ ಸಂಭ್ರಮದಲ್ಲೇ ಬರಬೇಕಿದ್ದ ಸಿನಿಮಾ ಕೊಂಚ ತಡವಾಗಿ ದೀಪಾವಳಿ ಹಬ್ಬಕ್ಕೂ ಮುನ್ನ ಬಿಡುಗಡೆ ಆಗ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಈವೆಂಟ್ ವೇಳೆ ನಟಿ ಶ್ರೀನಿಧಿ ಶೆಟ್ಟಿ ಕಾಲಿಗೆ ತ್ರಿವಿಕ್ರಮ್ ಶ್ರೀನಿವಾಸ್ ಬಿದ್ದಿದ್ದು ಭಾರೀ ವೈರಲ್ ಆಗಿತ್ತು. ಅರೇ ಖ್ಯಾತ ನಿರ್ದೇಶಕರು ಯುವ ನಟಿಯ ಕಾಲಿಗೆ ಯಾಕೆ ಬಿದ್ರು ಎಂದು ಕೆಲವರು ಅಚ್ಚರಿಗೊಂಡಿದ್ದರು.
ಇತ್ತೀಚೆಗೆ ಸಂದರ್ಶನದಲ್ಲಿ 'ಆದರ್ಶ ಕುಟುಂಬಂ' ಚಿತ್ರತಂಡ ಭಾಗಿ ಆಗಿತ್ತು. ಈ ವೇಳೆ ಈ ಬಗ್ಗೆ ಮಾಧ್ಯಮದವರಿಂದ ಪ್ರಶ್ನೆ ಎದುರಾಗಿದೆ. ಶ್ರೀನಿಧಿ ಶೆಟ್ಟಿ ನನಗೆ ಬಹಳ ಫ್ರೆಂಡ್ಲಿ.. ನಾನು ಸಾಮಾನ್ಯವಾಗಿ ನಟಿಯರ ಜೊತೆ ಕೊಂಚ ಫ್ರೆಂಡ್ಲಿ ಆಗಿ ಇರ್ತೀನಿ.. ಅವರೆಲ್ಲರಿಗಿಂತ ಈಕೆಯ ಜೊತೆ ಫ್ಯಾಮಿಲಿ ಸದಸ್ಯರಂತೆ ಬೆರೆತು ಹೋಗಿದ್ದಾರೆ. ಹಾಗಾಗಿ ಆಕೆ ಕಾಲಿಗೆ ಬೀಳುತ್ತಿದ್ದಂತೆ ತಮಾಷೆಯಾಗಿ ನಾನು ಕಾಲಿದ್ದು ನಮಸ್ಕರಿಸಿದೆ ಎಂದು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ವೇದಿಕೆ ಮುಂಭಾಗದಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಕುಳಿತಿದ್ದರು. ಬಳಿಕ ಶ್ರೀನಿಧಿ ಅಲ್ಲಿಗೆ ಬಂದರು. ನಿರ್ದೇಶಕರನ್ನು ನೋಡುತ್ತಿದ್ದಂತೆ ಕೊಂಚ ಬಾಗಿ ಕೈ ಮುಗಿದರು.. ಇದ್ದಕ್ಕಿದಂತೆ ಎದ್ದ ತ್ರಿವಿಕ್ರಮ್ ಕೂಡಲೇ ಶ್ರೀನಿಧಿ ಕಾಲಿಗೆ ಬಿದ್ದಂತೆ ಬಾಗಿದ್ದರು. ಬಳಿಕ ಶ್ರೀನಿಧಿ ನಿಜವಾಗಿಯೂ ನಿರ್ದೇಶಕರಿಗೆ ತಲೆಬಾಗಿ ಆಶೀರ್ವಾದ ಪಡೆದಂತೆ ಇತ್ತು. ಕೆಲವರಿಗೆ ಇದು ಫನ್ನಿ ವೀಡಿಯೋ ಎನ್ನುವುದು ಗೊತ್ತಾಗಿತ್ತು. ಆದರೂ ಅನುಮಾನ ಇತ್ತು. ಇದೀಗ ಸ್ವತಃ ತ್ರಿವಿಕ್ರಮ್ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.
'ಅತಡು', 'ಜಲ್ಸಾ', 'ಜುಲಾಯಿ', 'ಅತ್ತಾರಿಂಟಿಕಿ ದಾರೇದಿ', 'ಸನ್ ಆಫ್ ಸತ್ಯಮೂರ್ತಿ', 'ಅರವಿಂದ ಸಮೇತಾ', 'ಅಲ ವೈಕುಂಠಪುರಂಲೊ', 'ಗುಂಟೂರು ಖಾರಂ' ರೀತಿಯ ಹಿಟ್ ಸಿನಿಮಾಗಳನ್ನು ತ್ರಿವಿಕ್ರಮ್ ಶ್ರೀನಿವಾಸ್ ಕಟ್ಟಿಕೊಟ್ಟಿದ್ದಾರೆ. ಇದೀಗ 'ಆದರ್ಶ ಕುಟುಂಬಂ' ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.
#Trivikram tried touching #SrinidhiShetty's feet 👀
— OTT STREAM UPDATES (@newottupdates) October 28, 2026
Emaindhi Guruji...?😱 #AK47 #AadarshaKutumbam
pic.twitter.com/DvIIXMW2Hy
శ్రీనిధి కాళ్లు మొక్కడం...సరదా గా చేసిన పని : త్రివిక్రమ్ #AadarshaKutumbam #Trivikram #SrinidhiShetty pic.twitter.com/7qPPuJN01I
— Anji Shette (@AnjiShette) October 29, 2026