ತೆಲುಗು ಹಾಸ್ಯನಟ ಅಲಿ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿರುವುದು ವೀಡಿಯೋ ವೈರಲ್ ಆಗ್ತಿದೆ. ಇತ್ತೀಚೆಗೆ ಪತ್ನಿ ಜುಬೇದಾಗೆ ಹಾರ್ಟ್ ಸರ್ಜರಿ ಆಗಿತ್ತು. ಸರ್ಜರಿ ಬಳಿಕ ಆಕೆಯನ್ನು ವಾರ್ಡ್‌ಗೆ ಶಿಫ್ಟ್ ಮಾಡಿದ್ದರು. ಈ ವೇಳೆ ಪತ್ನಿ ಸ್ಥಿತಿ ನೋಡಿ ನಟ ಕಣ್ಣೀರಾಗಿದ್ದಾರೆ.

ಪತಿ ಕಣ್ಣೀರಾದ ವೀಡಿಯೋವನ್ನು ಜುಬೇದಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗ್ತಿದೆ. ಜುಬೇದಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅಂದಹಾಗೆ ಅಲಿ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ವೀಟ್ ಆಗಿದ್ದಾರೆ. ಅಡುಗೆ ರೆಸಿಪಿಗಳ ವೀಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಲಕ್ಷ ಲಕ್ಷ ಜನ ಆಕೆಯ ಇನ್‌ಸ್ಟಾ ಅಕೌಂಟ್ ಫಾಲೋ ಮಾಡುತ್ತಿದ್ದಾರೆ.

"ನನ್ನ ಬಗ್ಗೆ ಅಪಾರ ಕಾಳಜಿ ವಹಿಸುವ ಪತಿಯನ್ನು ಪಡೆದಿರುವುದಕ್ಕೆ ನಾನು ನಿಜಕ್ಕೂ ಧನ್ಯ. ಅವರು ನನ್ನ ಜೊತೆಗಿರುವುದು ನನ್ನ ಜೀವನದ ಅತ್ಯಂತ ದೊಡ್ಡ ವರಗಳಲ್ಲಿ ಒಂದಾಗಿದೆ. ನನ್ನ ಪತಿಯಂತೆಯೇ ಪ್ರೀತಿ, ಕಾಳಜಿ ಮತ್ತು ಬೆಂಬಲ ನೀಡುವ ಸಂಗಾತಿ ಪ್ರತಿಯೊಬ್ಬ ಮಹಿಳೆಗೂ ಸಿಗಲಿ ಎಂದು ನಾನು ಮನಃಪೂರ್ವಕವಾಗಿ ಹಾರೈಸುತ್ತೇನೆ. ಅಂತಹ ಸಂಗಾತಿ ಜೊತೆಗಿದ್ದರೆ, ಒಬ್ಬ ಮಹಿಳೆ ತನ್ನ ಕನಸುಗಳನ್ನು ಬೆನ್ನಟ್ಟಬಹುದು, ಜೀವನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಬಹುದು ಹಾಗೂ ಸಂತೋಷ ಮತ್ತು ಪ್ರೀತಿಯಿಂದ ತುಂಬಿದ ಜೀವನವನ್ನು ನಡೆಸಬಹುದು" ಎಂದು ಜುನೇದಾ ಅಲಿ ಬರೆದುಕೊಂಡಿದ್ದಾರೆ.

ಒಂದ್ಕಾಲದಲ್ಲಿ ಅಲಿ ಬಹುಬೇಡಿಕೆಯ ಹಾಸ್ಯನಟನಾಗಿ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಉಪೇಂದ್ರ ನಿರ್ದೇಶನದ 'ಸೂಪರ್' ಚಿತ್ರದಲ್ಲಿ ಕೂಡ ಅವರು ನಟಿಸಿದ್ದಾರೆ. ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿಲ್ಲ. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಅಲಿ ಬಳಿಕ ಹೀರೊ ಕೂಡ ಆಗಿದ್ದರು.