ತಮಿಳು ನಟಿ ಶ್ರುತಿ ಹಾಸನ್ ರಿಲೇಷನ್ಶಿಪ್ಗಳು ಒಂದೆರಡಲ್ಲ. ಶಾಂತನು ಹಜಾರಿಕಾ ಎಂಬುವವರ ಜೊತೆ ರಿಲೇಷನ್ಶಿಪ್ನಲ್ಲಿದ್ದ ಕಮಲ್ ಪುತ್ರಿ ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ಮೈಕೆಲ್ ಕೊರ್ಸೇಲ್ ಎಂಬುವವರ ಜೊತೆ ಶ್ರುತಿ ಪ್ರೀತಿಲಿ ಬಿದ್ದಿದ್ದರು. ಸದ್ಯಕ್ಕೆ ಆಕೆ ಸಿಂಗಲ್ ಆಗಿಯೇ ಇದ್ದಾರೆ.
ಶ್ರುತಿ ಹಾಸನ್ ಮದುವೆ ಯಾವಾಗ ಎನ್ನುವ ಪ್ರಶ್ನೆ ಪದೇ ಪದೆ ಹೇಳಿಬರುತ್ತದೆ. ಆದರೆ ಸದ್ಯಕ್ಕೆ ಅದಕ್ಕೆ ಉತ್ತರ ಗೊತ್ತಿಲ್ಲ ಎಂದು ಆಕೆ ಹೇಳುತ್ತಿದ್ದಾರೆ. ಸ್ವತಃ ಅಕ್ಕ ಸುಹಾಸಿನಿ ಮಣಿರತ್ನಂ ಇದೇ ಪ್ರಶ್ನೆ ಕೇಳಿದ್ದಕ್ಕೆ ನಿಮ್ಮ ಡಿವೋರ್ಸ್ ಯಾವಾಗ ಎಂದು ಶ್ರುತಿ ಹೇಳಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗ್ತಿದೆ. ನೇರಾನೇರ ಪ್ರಶ್ನೆಗೆ ಕಮಲ್ ಪುತ್ರಿ ಉತ್ತರ ಇದೇ ರೀತಿ ಇರುತ್ತೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಸಲಿ ಸಂಗತಿ ಬೇರೆನೇ ಇದೆ.
ಬಹುಭಾಷಾ ನಟಿ ಸುಹಾಸಿನಿ ಗಲಾಟ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಿರೂಪಕಿಯಾಗಿದ್ದಾರೆ. ಸಿನಿಮಾ ತಾರೆಯರ ಬಗ್ಗೆ ಸಂದರ್ಶನ ಮಾಡುತ್ತಾ ಬರ್ತಿದ್ದಾರೆ. ಇತ್ತೀಚೆಗೆ ಸಹೋದರಿ ಶ್ರುತಿ ಹಾಸನ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ನಾನು ಕೇಳುವ ಪ್ರಶ್ನೆಗಳಿಗೆ Savage(ಕಠೋರ ಅಥವಾ ಮುಖ ಮೇಲೆ ಹೊಡೆದಂತೆ) ಉತ್ತರ ಕೊಡಬೇಕು ಎಂದು ಹೇಳಿ ಸುಹಾಸಿನಿ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮ ವಯಸ್ಸೆಷ್ಟು ? ಎನ್ನುವ ಪ್ರಶ್ನೆಗೆ ಗೂಗಲ್ ಮಾಡಿ ನೋಡ್ಕೊಳ್ಳಿ ಎಂದು ಶ್ರುತಿ ಪ್ರತಿಕ್ರಿಯಿಸಿದ್ದಾರೆ.
ಶ್ರುತಿ ಯಾವಾಗ ಮದುವೆ ಆಗ್ತೀರಾ ? ಎನ್ನುವ ಪ್ರಶ್ನೆಗೆ "ನೀವು ಯಾವಾಗ ಡಿವೋರ್ಸ್ ತಗೋತ್ತೀರಾ ?" ಮರು ಪ್ರಶ್ನೆ ಹಾಕಿದ್ದಾರೆ. ಕೂಡಲೇ ಸುಹಾಸಿನಿ ಕೂಡ ನಕ್ಕಿದ್ದಾರೆ. ಮಾತು ಮುಂದುವರೆಸಿರುವ ಶ್ರುತಿ "ಕಂಡಿತ ಆ ಪ್ರಶ್ನೆ ಕೇಳಿದ್ರೆ ಕೋಪ ಬರುತ್ತೆ.. ನನಗೂ ನನ್ನ ಮದುವೆ ಯಾವಾಗ ಎನ್ನುವುದು ಗೊತ್ತಿಲ್ಲ" ಎಂದಿದ್ದಾರೆ. ಇಷ್ಟು ತೆಳ್ಳಗೆ ಯಾಕಿದ್ದೀರಾ ? ಊಟ ತಿನ್ನಲ್ವಾ, ದೇಹದ ಮೂಳೆಗಳಲ್ಲೆ ಕಾಣುತ್ತಲ್ಲ ಎನ್ನುವ ಪ್ರಶ್ನೆಗೆ "ನಾನು ಚೆನ್ನಾಗಿ ತಿಂತೀನಿ, ಆದ್ರು ಫಿಟ್ನೆಸ್ ನನಗೆ ಮುಖ್ಯ" ಎಂದಿದ್ದಾರೆ.
ಬೇರೆ ಏನಾದರೂ ಕೆಲಸ ಮಾಡೋದು ಬಿಟ್ಟು ಅಪ್ಪ ಹೀರೊ ಅಂತ ನೀವು ಇಂಡಸ್ಟ್ರಿಗೆ ಬಂದ್ರಾ? ಎನ್ನುವ ಪ್ರಶ್ನೆಗೆ ಹಿಂಗೆ ಯಾರಾದ್ರು ಕೇಳ್ತಾರಾ ? ಎಂದು ಶ್ರುತಿ ಪ್ರತಿಕ್ರಿಯಿಸಿದ್ದಾರೆ. ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ? ಎನ್ನುವ ಪ್ರಶ್ನೆಗೆ ನನ್ನಿಷ್ಟ ನಾನು ಮಾಡ್ಸಿಕೊಂಡೆ ಏನಿಗ? ಸುಳ್ಳು ಯಾಕೆ ಹೇಳಬೇಕು ? ಎಂದು ಶ್ರುತಿ ಹೇಳಿರುವುದು ವೈರಲ್ ಆಗ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಕಮಲ್ ಹಾಸನ್ ಪುತ್ರಿಗೆ ಚಿತ್ರರಂಗದಕ್ಕೆ ಯಶಸ್ಸು ಸಿಗಲಿಲ್ಲ. 'ಪೆದ್ದಿ' ಚಿತ್ರದ ಸ್ಪೆಷಲ್ ಸಾಂಗ್ನಲ್ಲಿ ಕೊನೆಯದಾಗಿ ಹೆಜ್ಜೆ ಹಾಕಿದ್ದರು. ಒಂದೆರಡು ಸಿನಿಮಾ ಸದ್ಯ ಕೈಯಲ್ಲಿವೆ.
Savage Thuggggg reply by #Shrutihaasan 😁😁😁#KamalHaasan pic.twitter.com/FPTt6MqvJs
— Kamal Abimaani (@Kamalabimaani1) November 16, 2026