ಅನಿರುದ್ಧ್- ಕಾವ್ಯಾ ಮದುವೆ ಸಂಭ್ರಮ ಭಾರೀ ಸುದ್ದಿ ಆಗ್ತಿದೆ. ಶೀಘ್ರದಲ್ಲೇ ಜೋಡಿ ಹನಿಮೂನ್ಗೆ ಹೋಗುತ್ತಿದ್ದಾರೆ. ಗ್ರೀಸ್ನಲ್ಲಿ ಮದುವೆ ಬಳಿಕ ಚೆನ್ನೈನಲ್ಲಿ ಎರಡು ದಿನ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿತ್ತು. ಸನ್ ನೆಟ್ವರ್ಕ್ ಸಿಬ್ಬಂದಿಗೆ ಕೂಡ ನವಜೋಡಿ ಮದುವೆ ಊಟ ಹಾಕಿಸಿದ್ದಾರೆ. ಇದೆಲ್ಲದರ ನಡುವೆ ಅನಿ-ಕಾವ್ಯಾ ರಿಸೆಪ್ಷನ್ ಪಾರ್ಟಿಗೆ ಗಾಯಕಿ ಜೊನಿತಾ ಗಾಂಧಿ ಹಾಜರಾಗಿರುವುದು ವೈರಲ್ ಆಗ್ತಿದೆ.
ನಾಲ್ಕೈದು ವರ್ಷಗಳ ಹಿಂದೆ ಅನಿರುದ್ದ್ ರವಿಚಂದರ್ ಹಾಗೂ ಜೊನಿತಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ. ಅದಕ್ಕೆ ತಮ್ಮ ಸಿನಿಮಾಗಳಲ್ಲಿ ಆಕೆಗೆ ಅನಿರುದ್ದ್ ಅವಕಾಶ ಕೊಡುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಈ ಮೂವರಲ್ಲಿ ಯಾರನ್ನು ಮದುವೆ ಆಗ್ತೀರಾ ಎನ್ನುವ ಪ್ರಶ್ನೆಗೆ ಅನಿರುದ್ದ್ ಅವರನ್ನು ಮದುವೆ ಆಗ್ತೀನಿ ಎಂದು ತಮಾಷೆಯಾಗಿ ಹೇಳಿದ್ದರು. ಇದನ್ನೆಲ್ಲಾ ನೋಡಿ ಇಬ್ಬರೂ ಲವ್ ಮಾಡುತ್ತಿದ್ದಾರೆ ಎಂದು ಚರ್ಚೆ ನಡೀತು.
ಈ ಹಿಂದೆ ಕೆಲ ನಟಿಯರ ಜೊತೆಗೂ ಅನಿರುದ್ಧ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದು ಯಾವುದು ನಿಜ ಆಗಲಿಲ್ಲ. ಅಂತಿಮವಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಜೊತೆ ರಾಕ್ಸ್ಟರ್ ಹಸೆಮಣೆ ಏರಿದ್ದಾರೆ. ಎರಡನೇ ದಿನ ನಡೆದ ರಿಸೆಪ್ಷನ್ ಪಾರ್ಟಿಗೆ ಜೊನಿತಾ ಗಾಂಧಿ ಕೂಡ ಬಂದು ನವಜೋಡಿಗೆ ಶುಭ ಕೋರಿದ್ದಾರೆ. ಫೋಟೊ ವೈರಲ್ ಆಗ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಫೋಟೊ ಹಾಕಿ ಆಕೆ ಜೋಡಿಗೆ ಶುಭ ಕೋರಿದ್ದಾರೆ. ದೆಹಲಿಯಲ್ಲಿ ಹುಟ್ಟಿದ ಜೊನಿತಾ ಕೆನಡಾದಲ್ಲಿ ಓದಿ ಬೆಳೆದವರು.
ಸಾಕಷ್ಟು ಬಾಲಿವುಡ್ ಸಿನಿಮಾಗಳಿಗೆ ಜೊನಿತಾ ಗಾಂಧಿ ಹಾಡು ಹಾಡಿದ್ದಾರೆ. ತಮಿಳಿನಲ್ಲಿ ಅನಿರುದ್ಧ್ ಸಂಗೀತದ 'ಡಾಕ್ಟರ್'(ಚೆಲ್ಲಮ್ಮಾ), 'ಬೀಸ್ಟ್'(ಅರೆಬಿಕ್ ಕುತ್ತು), 'ಡಾನ್'(ಪ್ರೈವೇಟ್ ಪಾರ್ಟಿ), 'ಜವಾನ್'(ಪಟ್ಟಾಸ) ಚಿತ್ರಗಳಿಗೆ ಹಾಡಿದ್ದಾರೆ. ಅನಿರುದ್ಧ್ ನಿಜಕ್ಕೂ ತಮ್ಮ ಮದುವೆ ರಿಸೆಪ್ಷನ್ಗೆ ಜೊನಿತಾ ಅವರನ್ನು ಕರೆದಿದ್ರಾ ಎಂದು ಭಾರೀ ಚರ್ಚೆ ನಡೀತಿದೆ. ಮಾಜಿ ಪ್ರೇಯಸಿ ಬಂದು ಮದುವೆಗೆ ಶುಭ ಕೋರುವುದು ಹೊಸದೇನು ಅಲ್ಲ ಬಿಡ್ರೋ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ಅನಿರುದ್ಧ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಮದುವೆ ಹಿನ್ನೆಲೆಯಲ್ಲಿ ಶಾರುಖ್ ಖಾನ್ ನಟನೆಯ 'ಕಿಂಗ್' ಚಿತ್ರವನ್ನು ಅವರು ಕೈಬಿಟ್ಟಿದ್ದಾರೆ. ಇನ್ನುಳಿದಂತೆ ರಜನಿಕಾಂತ್ ನಟನೆಯ 'ಧರ್ಮನ್', ಅಜಿತ್ ನಟನೆಯ 'ಡೇರ್ಡೆವಿಲ್', ರಜನಿಕಾಂತ್ ಹಾಗೂ ಕಮಲ್ ಮಲ್ಟಿಸ್ಟಾರರ್ ಸಿನಿಮಾ ಸೇರಿ ಹಲವು ಸಿನಿಮಾಗಳಿಗೆ ಅನಿರುದ್ಧ್ ಟ್ಯೂನ್ ಹಾಕಬೇಕಿದೆ.