ಒಬ್ಬರು ನಟಿಸಬೇಕಿದ್ದ ಸಿನಿಮಾ ಮತ್ತೊಬ್ಬರು ನಟಿಸೋದು ಹೊಸದೇನು ಅಲ್ಲ. ಬ್ಲಾಕ್‌ಬಸ್ಟರ್ ಸಿನಿಮಾ ಕಥೆಗಳು ಕೂಡ ಬೇರೆ ನಟರ ಹೋಗಿರುತ್ತದೆ. ಅನಿವಾರ್ಯ ಕಾರಣಗಳಿಂದ ಬೇರೆ ಯಾರೋ ಮಾಡುವಂತಾಗುತ್ತದೆ. ತಮಿಳಿನ 'ಕೈದಿ' ಸಿನಿಮಾ ಮಾಡಿದ ಕ್ರಾಂತಿ ಗೊತ್ತೇಯಿದೆ. ನಿಮಗೆ ಗೊತ್ತಾ ಈ ಚಿತ್ರವನ್ನು ವಿಜಯ್ ಸೇತುಪತಿ ಮಾಡಬೇಕಿತ್ತು.
ಲೋಕೇಶ್ ಕನಕರಾಜ್ ನಿರ್ದೇಶನದ 'ಕೈದಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಒಂದು ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರಿಗೆ ಸಖತ್ ಮನರಂಜನೆ ಉಣಬಡಿಸಿತ್ತು. ನಾಯಕಿ ಇಲ್ಲ, ಲವ್, ರೊಮ್ಯಾನ್ಸ್, ಐಟಂ ಸಾಂಗ್ ಏನು ಇಲ್ಲದ ಸಿನಿಮಾ ಮಾಸ್ ಪ್ರೇಕ್ಷಕರ ಮನಗೆದ್ದಿತ್ತು. ಬಳಿಕ ಹಿಂದಿಗೂ ರೀಮೆಕ್ ಆಗಿತ್ತು. ಹಾಲಿವುಡ್ ಚಿತ್ರದಿಂದ ಪ್ರೇರಣೆಗೊಂಡು ಲೋಕೇಶ್ ಸಿನಿಮಾ ಕಟ್ಟಿಕೊಟ್ಟಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ವಿಜಯ್ ಸೇತುಪತಿ "ಮೊದಲಿಗೆ 'ಕೈದಿ' ಸಿನಿಮಾ ಕಥೆ ನಾನು ಕೇಳಿದ್ದೆ. ಸಿನಿಮಾ ಮಾಡುವುದು ಫಿಕ್ಸ್ ಆಗಿರಲಿಲ್ಲ. ಲೋಕೇಶ್ ಕನಕರಾಜ್ ಬಂದು ಕಥೆ ಹೇಳಿದ್ರು. ಕಾರ್ತಿ ಸರ್ ಮಾಡ್ತೀನಿ ಅಂದಾಗ ಸುಮ್ಮನಾದೆ. ಅವ್ರು ಫೋನ್ ಮಾಡಿ ವಿಜಯ್ ನಾನು ಮಾಡ್ತೀನಿ ಅಂದ್ರು.. ಖಂಡಿತ ಮಾಡಿ ಸರ್ ಎಂದೆ. ನನಗೆ ನಿಜಕ್ಕೂ ಬೇಸರ ಇಲ್ಲ. ಲೋಕೇಶ್ ನನ್ನ ಸಹೋದರ ಇದ್ದಂತೆ. ಕಾರ್ತಿ ಸರ್ ಬಗ್ಗೆ ಕೂಡ ಬಹಳ ಗೌರವ ಇದೆ. ಆ ಸಿನಿಮಾ ಗೆದ್ದೇ ಗೆಲ್ಲುತ್ತೆ ಎನ್ನುವುದು ನನಗೆ ಮೊದ್ಲೆ ಗೊತ್ತಿತ್ತು. ಕಥೆ ಹೇಳಿದಾಗಲೇ ಅರ್ಥವಾಗಿತ್ತು" ಎಂದು ತಿಳಿಸಿದ್ದಾರೆ. ಗಲಾಟ್ಟ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿಜಯ್ ಸೇತುಪತಿ ಮಾತನಾಡಿದ್ದಾರೆ.
2019ರಲ್ಲಿ ತೆರೆಕಂಡ 'ಕೈದಿ' ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. 25 ಕೋಟಿ ರೂ. ಬಜೆಟ್ ಸಿನಿಮಾ 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿತ್ತು. ನಿರ್ದೇಶಕನಾಗಿ ಲೋಕೇಶ್ ಕನಕರಾಜ್ ದೊಡ್ಡದಾಗಿ ಗೆದ್ದಿದ್ದರು. ಬಳಿಕ ಸ್ಟಾರ್ ನಟರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು. ಇನ್ನು ಇದೇ ಕಥೆಗೆ ಲಿಂಕ್ ಮಾಡಿ ಒಂದಷ್ಟು ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ಅದಕ್ಕೆ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಎಂದು ಹೆಸರಿಡಲಾಗಿದೆ.
Q: What's the character that you got missed & felt later on❓#VijaySethupathi: #Kaithi was supposed to do my myself. Once #Karthi sir came to do that film, he called me and informed. I have also wished, i don't have any regrets as #LokeshKanagaraj is like my brother. I know…
— AmuthaBharathi (@CinemaWithAB) November 26, 2026