ಚಿತ್ರಮಂದಿರಗಳಲ್ಲಿ ಈ ವಾರ ಸಾಕಷ್ಟು ಕನ್ನಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಕನ್ನಡದಲ್ಲಿ ಬರೋಬ್ಬರಿ 44 ಸಿನಿಮಾ ಒಂದೇ ದಿನ ತೆರೆಗೆ ಬರ್ತಿದೆ. ಇನ್ನು ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ಒಂದಷ್ಟು ಸಣ್ಣಪುಟ್ಟ ಸಿನಿಮಾಗಳು ತೆರೆಗೆ ಬರ್ತಿವೆ. ಇತ್ತ ಓಟಿಟಿಯಲ್ಲಿ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗ್ತಿವೆ.

ಕಳೆದ 10 ದಿನಗಳಲ್ಲಿ ಕನ್ನಡದ ನಾಲ್ಕೈದು ಸಿನಿಮಾ ಓಟಿಟಿಗೆ ಬಂದಿದೆ. ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಓಟಿಟಿ ಸ್ಟ್ರೀಮಂಗ್ ಯಾವಾಗ ಎಂದು ಜನ ಕಾಯುತ್ತಿದ್ದಾರೆ. 'ರಾಮಾಯಣ' ಸದ್ಯಕ್ಕೆ ಓಟಿಟಿಗೆ ಬರಲ್ಲ ಎನ್ನುವುದು ಗೊತ್ತಾಗಿದೆ. 'ಪ್ರೇಮದ ಊರಲಿ' ಸಿನಿಮಾ ಓಟಿಟಿಗೆ ಬಂದಮೇಲೆ ಕೂಡ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾಗಳ ಪಟ್ಟಿ ಮುಂದೆ ಓದಿ.

ಅಮೆರಿಕಾ ಅಮೆರಿಕಾ- 2

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ- 2' ಸಿನಿಮಾ ಸ್ಟ್ರೀಮಿಂಗ್ ಶುರುವಾಗಿದೆ. ಪೃಥ್ವಿ ಅಂಬರ್, ಶಾನ್ವಿ ಶ್ರೀವಾಸ್ತವ್ ಹಾಗೂ ನಿರೂಪ್ ಭಂಡಾರಿ ನಟನೆಯ ರೊಮ್ಯಾಂಟಿಕ್ ಎಂಟರ್‌ಟೈನರ್ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ ದೊಡ್ಡ ಗೆಲುವ ಸಿಕ್ಕಿರಲಿಲ್ಲ. ಪ್ರೈ ವೀಡಿಯೋದಲ್ಲಿ ಜನ ಸಿನಿಮಾ ವೀಕ್ಷಿಸಬಹುದು.

ಹನುಮಾನ್ ಅಂಶ್

ಬಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ 'ಹನುಮಾನ್ ಅಂಶ್' ಸಿನಿಮಾ ಈ ವಾರವೇ ಓಟಿಟಿಗೆ ಬರ್ತಿದೆ. ಹಿಂದಿ ವರ್ಷನ್ ಸೋನಿಲಿವ್ ಓಟಿಟಿ ವೇದಿಕೆಯಲ್ಲಿ ನವೆಂಬರ್ 27ರಂದು ಸ್ಟ್ರೀಮಿಂಗ್ ಆರಂಭಿಸಲಿದೆ. ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಗುಜರಾತಿ ಭಾಷೆಗಳಲ್ಲಿ ನವೆಂಬರ್ 29ರಂದು ಸಿನಿಮಾ ಬಿಡುಗಡೆ ಆಗಿದೆ.

ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಬಯೋಪಿಕ್ ಸಿನಿಮಾ 400 ಕೋಟಿ ರೂ. ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿದೆ. ಚಿತ್ರದಲ್ಲಿ ನೀಮ್ ಕರೋಲಿ ಬಾಬಾ ಜೀವನಾಧರಿತ ಕಥೆಯನ್ನು ಕಟ್ಟಿಕೊಡಲಾಗಿದೆ. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಕಾಯುತ್ತಿದ್ದಾರೆ.

ಆದರ್ಶ ಕುಟುಂಬಂ

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ವಿಕ್ಟರಿ ವೆಂಕಟೇಶ್ ನಟನೆಯ ಕಾಮಿಡಿ ಎಂಟರ್‌ಟೈನರ್ 'ಆದರ್ಶ ಕುಟುಂಬಂ' ಚಿತ್ರ ನವೆಂಬರ್ 27ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಕನ್ನಡ ನಟಿ ಶ್ರೀನಿಧಿ ಶೆಟ್ಟಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ತಿಂಗಳಿಗೂ ಮುನ್ನ ಈಗ ಓಟಿಟಿಗೆ ಬರ್ತಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಲಭ್ಯವಾಗಲಿದೆ.

ಸ್ಪಾರ್ಕ್

ಕನ್ನಡ ಇನ್ವೆಸ್ಟಿಗೇಷನ್ ಥ್ರಿಲ್ಲರ್ 'ಸ್ಪಾರ್ಕ್' ಸಿನಿಮಾ ಈಗಾಗಲೇ ಓಟಿಟಿಗೆ ಬಂದಿದೆ. ಕಳೆದೆರಡು ದಿನಗಳಿಂದ ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ನಿರಂಜನ್ ಸುಧೀಂದ್ರ ಹಾಗೂ ಭಾವನಾ ಮೆನನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತೆಲುಗಿಗೂ ಸಿನಿಮಾ ಡಬ್ ಆಗಿ ಸದ್ದು ಮಾಡ್ತಿದೆ. ಗರಿಮಾ ಅವಿನಾಶ್ ಹಾಗೂ ವಶಿಷ್ಠ ನಿರ್ಮಾಣದ ಚಿತ್ರವನ್ನು ಮಹಾಂತೇಶ ಹಂದ್ರಾಳ್ ನಿರ್ದೇಶನ ಮಾಡಿದ್ದಾರೆ.

ದೃಶ್ಯಂ: ದಿ ಕನ್‌ಕ್ಲೂಷನ್

ಮಲಯಾಳಂನಲ್ಲಿ ಬಂದ 'ದೃಶ್ಯಂ' ಸರಣಿ ಹಿಂದಿಯಲ್ಲಿ ಕೂಡ ಹಿಟ್ ಆಗಿತ್ತು. ಸರಣಿಯ ಮೂರನೇ ಸಿನಿಮಾ ಎರಡು ತಿಂಗಳ ಹಿಂದೆ ತೆರೆಕಂಡು ಹಿಟ್ ಆಗಿತ್ತು. ಮಲಯಾಳಂ 'ದೃಶ್ಯಂ- 3' ರೀಮೇಕ್ ಮಾಡದೇ ಹೊಸ ಕಥೆ ಹೇಳಿ ಚಿತ್ರತಂಡ ಗೆದ್ದಿತ್ತು. ಮತ್ತೊಮ್ಮೆ ಅಜಯ್ ದೇವಗನ್ ತಮ್ಮ ನಟನೆ ಮೂಲಕ ಮೋಡಿ ಮಾಡಿದ್ದರು. 'ದೃಶ್ಯಂ: ದಿ ಕನ್‌ಕ್ಲೂಷನ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್ 27ರಂದು ಸ್ಟ್ರೀಮಿಂಗ್ ಆರಂಭಿಸಲಿದೆ.

ಪ್ರೈಂ ವೀಡಿಯೋ

ಬ್ಲೇಡ್ ರನ್ನರ್ 2099(ಇಂಗ್ಲೀಷ್ ಸಿನಿಮಾ) ನವೆಂಬರ್ 25

ಕ್ಲಾಷಿಂಗ್ ತ್ರೂ ದಿ ಸ್ನೋ(ಇಂಗ್ಲೀಷ್ ಸಿನಿಮಾ) ನವೆಂಬರ್ 23

ಗರ್ವಿಡಿಲಕ್ಷ್ಮಿ(ತೆಲುಗು ಸಿನಿಮಾ) ನವೆಂಬರ್ 25

ಹಾಟ್‌ಸ್ಟರ್

ಸ್ವೀಟ್ ಪಿ ಸೀಸನ್- 2(ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 26

ದಿ ಡಿಗ್(ಇಂಗ್ಲೀಷ್ ವೆಬ್ ಸೀರಿಸ್) ನವೆಂಬರ್ 25

ದಾಯಿ ಚಾಲ್(ಹಿಂದಿ ವೆಬ್ ಸೀರಿಸ್) ನವೆಂಬರ್ 27

ನೆಟ್‌ಫ್ಲಿಕ್ಸ್

ದಿ ಮಸ್ಕಿಟೊ ಬೌಲ್(ಇಂಗ್ಲೀಷ್ ಸಿನಿಮಾ)ನವೆಂಬರ್ 25

ಸ್ಪೈಡರ್‌ಮ್ಯಾನ್- ಬ್ರ್ಯಾಂಡ್ ನ್ಯೂ ಡೇ(ಇಂಗ್ಲೀಷ್ ಸಿನಿಮಾ)ನವೆಂಬರ್ 26

ಆಲ್ವೇಸ್ ಆನ್ ಕಾಲ್(ಇಂಗ್ಲೀಷ್ ಸಿನಿಮಾ)ನವೆಂಬರ್ 26

ದಿ ಟ್ರಯಲ್ಸ್ ಆಫ್ ಕರೆನ್ ರಿಡ್(ಇಂಗ್ಲೀಷ್ ಸಿನಿಮಾ)ನವೆಂಬರ್ 23

ದಿ ಚೈಲ್ಡ್(ಇಂಗ್ಲೀಷ್ ಸಿನಿಮಾ)ನವೆಂಬರ್ 27