ಬಾಲಿವುಡ್ ಬ್ಲಾಕ್‌ಬಸ್ಟರ್ ಸಿನಿಮಾ 'ಹನುಮಾನ್ ಅಂಶ್' ಡಿಜಿಟಲ್ ಸ್ಟ್ರೀಮಿಂಗ್ ಅಪ್‌ಡೇಟ್ ಬಂದಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗ್ತಿದೆ. ಆಗಸ್ಟ್ 7ರಂದು ತೆರೆಗೆ ಬಂದಿದ್ದ ಈ ಬಯೋಪಿಕ್ ಸಿನಿಮಾ ಕೊಂಚ ತಡವಾಗಿ ಓಟಿಟಿಗೆ ಬರ್ತಿದೆ. ಅಂದಾಜು 2 ಕೋಟಿ ರೂ. ಬಜೆಟ್ ಸಿನಿಮಾ 400 ಕೋಟಿ ರೂ. ಕೊಳ್ಳೆ ಹೊಡೆದು ದಾಖಲೆ ಬರೆದಿತ್ತು.

ಮೊದಲಿಗೆ ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಸಿನಿಮಾ ಬಳಿಕ ತೆಲುಗಿಗೂ ಡಬ್ ಆಗಿತ್ತು. ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಪಯಣ ಆಧರಿಸಿದ ಸಿನಿಮಾ ಉತ್ತರ ಭಾರತದಲ್ಲಿ ಹೊಸ ದಾಖಲೆ ಬರೆದಿತ್ತು. ಬಹುಕೋಟಿ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳೇ ಸೋಲುತ್ತಿರುವಾಗ ಸಣ್ಣ ಬಜೆಟ್ಟಿನ 'ಹನುಮಾನ್ ಅಂಶ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಸಂಚಲನ ಸೃಷ್ಟಿಸಿತ್ತು. 'ಟಾಕ್ಸಿಕ್' ರೀತಿಯ ದೊಡ್ಡ ಚಿತ್ರಕ್ಕೂ ಸವಾಲು ಸಿನಿಮಾ ಗೆದ್ದಿತ್ತು.

'ಹನುಮಾನ್ ಅಂಶ್' ಸಿನಿಮಾ ನವೆಂಬರ್ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಹಿಂದಿ ವರ್ಷನ್ ಮಾಡಿ ಸೋನಿ ಲಿವ್ ಓಟಿಟಿಯಲ್ಲಿ ಎರಡು ದಿನ ಮುನ್ನ ಬಿಡಗಡೆ ಆಗಲಿದೆ. ಕನ್ನಡ ಸೇರಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ನೆಟ್‌ಫ್ಲಿಕ್ಸ್‌ಗೆ ಬರಲಿದೆ. ವೀಕ್ಷಕರು ತಮ್ಮದೇ ಭಾಷೆಯಲ್ಲಿ ಸಿನಿಮಾ ನೋಡಬಹುದು. ಜೊತೆಗೆ ಗುಜರಾತಿ ಭಾಷೆಗೂ ಡಬ್ ಆಗಿ ವೀಕ್ಷಣೆಗೆ ಲಭ್ಯವಾಗುತ್ತಿರುವುದು ವಿಶೇಷ. ವಿಶಾಲ್ ಚತುರ್ವೇದಿ ತಾವು ಬರೆದ 'ಡಿವೈನ್ ಡಿಟೂರ್: ದ್ಯಾಟ್ ಚೇಂಜ್ಡ್ ಮೈ ಲೈಫ್' ಎಂಬ ಪುಸ್ತಕ ಆಧರಿಸಿ ಸಿನಿಮಾ ನಿರ್ದೇಶನ ಮಾಡಿದ್ದರು.

ರಾಗಿಣಿ ಸೋನಾ, ನಮ್ರತಾ ಜಿ. ಸಿಂಗ್, ಅನುಪ್ರಿಯಾ ಎ ನಗರ ಹಾಗೂ ವಿಶಾಲ್ ಚತುರ್ವೇದಿ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆಗಸ್ಟ್ ಮೊದಲ ವಾರದಲ್ಲಿ ಯಾವುದೇ ನಿರೀಕ್ಷೆ ಇಲ್ಲದೇ ಬಂದು 'ಹನುಮಾನ್ ಅಂಶ್' ಸಿನಿಮಾ ಗೆದ್ದಿತ್ತು. ಬಳಿಕ ಸೆಪ್ಟೆಂಬರ್ 11ರಂದು ವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಸ್ಟಾರ್ ನಟ- ನಟಿಯರು ಇಲ್ಲದೇ ಒಂದು ಭಕ್ತಿಪ್ರಧಾನ ಬಯೋಪಿಕ್ ಸಿನಿಮಾವೊಂದು ಇಷ್ಟು ದೊಡ್ಡಮಟ್ಟದಲ್ಲಿ ಗೆದ್ದಿದ್ದು ವಿಶೇಷ. ಸಾಕಷ್ಟು ಜನ ಕನ್ನಡದಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದರು. ಅವರಿಗೆ ಓಟಿಟಿಯಲ್ಲಿ ಆ ಅವಕಾಶ ಸಿಗಲಿದೆ.