ಕನ್ನಡದ ಬ್ಲಾಕ್ಬಸ್ಟರ್ ಹಿಟ್ 'ಪ್ರೇಮದ ಊರಲಿ' ಸಿನಿಮಾ ಇದೀಗ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಬಾಕ್ಸಾಫೀಸ್ನಲ್ಲಿ 150 ಕೋಟಿ ರೂ. ಕೊಳ್ಳೆ ಹೊಡೆದ ಸಿನಿಮಾ ಇತ್ತೀಚೆಗೆ 50 ದಿನ ಪೂರೈಸಿತ್ತು. ಅದರ ಬೆನ್ನಲ್ಲೇ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಾಗಿದೆ.
ಈಗಾಗಲೇ ಸಿನಿಮಾ ನೋಡಿದವರು ನೋಡದವರು ಓಟಿಟಿಯಲ್ಲಿ ಪ್ರೇಮದ ಊರಿಗೆ ಹೋಗಿ ಬರಬಹುದು. ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೂ ಡಬ್ ಆಗಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಹೊಸಬರ 'ಪ್ರೇಮದ ಊರಲಿ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಕರ್ನಾಟಕದಲ್ಲಿ ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರೈಂ ವೀಡಿಯೋದಲ್ಲಿ ಸಿನಿಮಾ
ಸದ್ಯ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ಬಿಡುಗಡೆಯಾಗಿ 50 ದಿನಗಳ ಬಳಿಕ ಕೂಡ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿತ್ತು. ಅಷ್ಟರಲ್ಲೇ ಓಟಿಟಿಗೆ ಬಂದಿದೆ. ಭಾರೀ ಮೊತ್ತಕ್ಕೆ ಓಟಿಟಿ ರೈಟ್ಸ್ ಸೇಲ್ ಆಗಿದೆ.
156 ಕೋಟಿ ರೂ. ಕಲೆಕ್ಷನ್
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಕೂಡ 'ಪ್ರೇಮದ ಊರಲಿ' ಹವಾ ಜೋರಾಗಿತ್ತು. ಆಂಧ್ರದಲ್ಲಿ ಕೂಡ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ನಮಗೆ ಯಾವುದೇ ಪ್ಯಾನ್ ಇಂಡಿಯಾ ಬೇಡ, ನಮ್ಮತನದ ಸಿನಿಮಾ ಬೇಕು ಎಂದು ಕನ್ನಡ ಸಿನಿರಸಿಕರು ಸಾರಿ ಹೇಳಿದಂತಿತ್ತು. ಒಟ್ಟಾರೆ ಸಿನಿಮಾ 156 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಅಂದಾಜಿಸಲಾಗ್ತಿದೆ. 'ಮುಂಗಾರುಮಳೆ' ಬಳಿಕ ಕನ್ನಡದಲ್ಲಿ ಹೊಸಬರ ಚಿತ್ರಕ್ಕೆ ಸಿಕ್ಕ ಅತಿದೊಡ್ಡ ಗೆಲುವು ಇದಾಗಿದೆ.
ತಮಿಳುನಾಡಿನಲ್ಲಿ ದಾಖಲೆ
ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿರುವ ಗ್ರ್ಯಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ 'ಪ್ರೇಮದ ಊರಲಿ' ಚಿತ್ರಕ್ಕೆ 50 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದ್ದು ವಿಶೇಷ. ಈ ಬಗ್ಗೆ ಚಿತ್ರಮಂದಿರದಿಂದಲೇ ಮಾಹಿತಿ ದೊರಕ್ಕಿತ್ತು. ತಮಿಳುನಾಡಿನಲ್ಲಿ ಕನ್ನಡ ವರ್ಷನ್ ಚಿತ್ರಕ್ಕೆ ಇಂತಾದೊಂದು ರೆಸ್ಪಾನ್ಸ್ ಸಿಕ್ಕಿದ್ದು ಅಚ್ಚರಿಯೇ ಸರಿ..