ಮಹಂತೇಶ್ ಹಂದ್ರಲ್ ನಿರ್ದೇಶನದ ಇನ್ವೆಸ್ಟಿಗೇಷನ್ ಥ್ರಿಲ್ಲರ್ ಸಿನಿಮಾ 'ಸ್ಪಾರ್ಕ್' ಎರಡು ತಿಂಗಳ ಹಿಂದೆ ತೆರೆಗೆ ಬಂದಿತ್ತು. ಇದೀಗ ಸಿನಿಮಾ ಓಟಿಟಿಗೆ ಬಂದಿದೆ. ಉಪೇಂದ್ರ ಸಹೋದರನ ಮಗ ನಿರಂಜನ್, ಭಾವನಾ ಮೆನನ್ ಹಾಗೂ ರಚನಾ ಇಂದರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸೆಪ್ಟೆಂಬರ್ 25ರಂದು 'ಸ್ಪಾರ್ಕ್' ಸಿನಿಮಾ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಇದೀಗ ಸಿನಿಮಾ ಓಟಿಟಿಗೆ ಬಂದಿದೆ. ಮನೆಯಲ್ಲೇ ಕೂತು ಸಿನಿಮಾ ನೋಡಬಹುದು. ಕಳೆದೊಂದು ವಾರದಿಂದ ಸಾಲು ಸಾಲು ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿವೆ. 'ಹೆಗ್ಗಣ ಮುದ್ದು', 'ಪ್ರೇಮದ ಊರಲಿ', 'ಮಾರ್ನಮಿ', 'ಸಿಟಿಲೈಟ್ಸ್' ಹೀಗೆ ಕನ್ನಡ ಸಿನಿಮಾ ಓಟಿಟಿ ಚಂದಾದಾರರನ್ನು ರಂಜಿಸ್ತಿವೆ. ಅದೇ ಸಾಲಿಗೆ 'ಸ್ಪಾರ್ಕ್' ಸಿನಿಮಾ ಸೇರಿಕೊಂಡಿದೆ.
ಗರಿಮಾ ಅವಿನಾಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗರಿಮಾ ಅವಿನಾಶ ಹಾಗೂ ವಶಿಷ್ಠ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನ್ಯಾಯದ ವಿರುದ್ಧ ನಿಂತ ಯುವ ಪತ್ರಕರ್ತ, ಒಬ್ಬ ಪೊಲೀಸ್ ಅಧಿಕಾರಿ. ಇವರಿಬ್ಬರ ನಡುವಿನ ಹೋರಾಟದ ಕಥೆ 'ಸ್ಪಾರ್ಕ್' ಚಿತ್ರದಲ್ಲಿದೆ. ಸ್ವಾಮಿ ಜೆ ಗೌಡ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ಸಹಕಾರ ಬ್ಯಾಂಕ್ ಹಗಹರಣದ ಸುತ್ತಾ ಸಿನಿಮಾ ಕಥೆ ಸಾಗುತ್ತದೆ.