ದೀಪಾವಳಿ ಸಂಭ್ರಮದಲ್ಲಿ ಪೂಜೆ ಮಾಡಿ ಜನ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಕೆಲವರು ಮಧ್ಯರಾತ್ರಿವರೆಗೂ ಪಟಾಕಿ ಸಿಡಿಸುತ್ತಿದ್ದಾರೆ. ಈ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಪರಿಸರ ಮಾಲಿನ್ಯದ ಜೊತೆಗೆ ಸಾಕು ಪ್ರಾಣಿಗಳಿಗೂ ಇದರಿಂದ ಸಮಸ್ಯೆ ಆಗ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತೆಲುಗು ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಟಿಯಾಗಿ ಕೂಡ ರೇಣು ದೇಸಾಯಿ ಗುರ್ತಿಸಿಕೊಂಡಿದ್ದರು. ಇತ್ತೀಚೆಗೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೇಣು ಆಕ್ಟೀವ್ ಆಗಿದ್ದಾರೆ. ಪ್ರಾಣಿ ಹಿಂಸೆ ವಿಚಾರದ ಬಗ್ಗೆ ಆಗಾಗ್ಗೆ ಕಾಮೆಂಟ್ ಮಾಡುತ್ತಿರುತ್ತಾರೆ. ಸದ್ಯ ದೀಪಾವಳಿ ಸಂಭ್ರಮದಲ್ಲಿ ಅತಿಯಾಗಿ ಪಟಾಕಿ ಸಿಡಿಸುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. "ಜನ ರಾತ್ರಿ 9 ಗಂಟೆಯ ಮೊದಲು ತಮಗೆ ಬೇಕಾದಷ್ಟು ಪಟಾಕಿಗಳನ್ನು ಏಕೆ ಸಿಡಿಸಬಾರದು? ಕೊನೆ ಪಕ್ಷ ರಾತ್ರಿ 10 ಗಂಟೆಯೊಳಗೆ ಏಕೆ ಮುಗಿಸಬಾರದು? ನಿಮ್ಮ ಈ ವಿವೇಚನಾರಹಿತವಾದ ಆನಂದವು, ಇನ್ನೊಬ್ಬರಿಗೆ ತೀವ್ರ ಮಾನಸಿಕ ಅಥವಾ ದೈಹಿಕ ಸಂಕಟವನ್ನು ಉಂಟು ಮಾಡಬಾರದಲ್ವಾ?" ಎಂದು ರೇಣು ಪ್ರಶ್ನಿಸಿದ್ದಾರೆ.
ಕಳೆದ 3 ದಿನಗಳಿಂದ ಜನರು ರಾತ್ರಿ 1, 2 ಮತ್ತು 3 ಗಂಟೆಗೂ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ನನ್ನ ಬೆಡ್ರೂಮ್ನಲ್ಲಿ ಸೌಂಡ್ ಪ್ರೂಫ್ ಇದೆ. ನನಗೆ ಬೇರೆಯವರು ಈ ವಿಚಾರ ಹೇಳಿದ್ರು. ಮಾಲಿನ್ಯದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ, ಏಕೆಂದರೆ ವರ್ಷದ 364 ದಿನಗಳ ಕಾಲ ವಾಹನಗಳು ಮತ್ತು ಕೈಗಾರಿಕೆಗಳಿಂದ ಈಗಾಗಲೇ ವಿಪರೀತ ಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ, ಒಂದೇ ದಿನ ಪಟಾಕಿ ಸಿಡಿಸುವುದರಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ ಎಂದು ನೀವು ವಾದಿಸಬಹುದು. ಕನಿಷ್ಠಪಕ್ಷ ರಾತ್ರಿ 10 ಗಂಟೆಯೊಳಗೆ ನಿಮ್ಮ ಸಂಭ್ರಮಾಚರಣೆಯನ್ನು ಮುಗಿಸಿ. ರಾತ್ರಿ 10 ಗಂಟೆಯ ನಂತರವಾದರೂ ವೃದ್ಧರು, ನವಜಾತ ಶಿಶುಗಳು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ಯಾವುದೇ ಒತ್ತಡವಿಲ್ಲದೆ ನೆಮ್ಮದಿಯಾಗಿರಲಿ" ರಂದು ರೇಣು ದೇಸಾಯಿ ಮನವಿ ಮಾಡಿದ್ದಾರೆ.
ಮೂರನೇ ಪತ್ನಿಗೂ ಡಿವೋರ್ಸ್ ನೀಡಿ ರೇಣು ದೇಸಾಯಿ ಮಾತಿ ಪತಿ ಪವನ್ ಕಲ್ಯಾಣ್ ಸುದ್ದಿಯಾಗಿದ್ದಾರೆ. ರೇಣುಗೆ ಡಿವೋರ್ಸ್ ನೋಡಿ ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ಪವನ್ ಮದುವೆ ಆಗಿದ್ದರು. ಈಗ ಆಕೆಗೆ ಕೂಡ ಡಿವೋರ್ಸ್ ನೀಡಿರುವುದು ಚರ್ಚೆ ಹುಟ್ಟಾಕ್ಕಿದೆ.