ಪವನ್ ಕಲ್ಯಾಣ್ ನಟನೆಯ 'ಬಾಲು: ABCDEFG' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲದೇ ಇದ್ದರೂ ಟ್ರೆಂಡ್ ಸೃಷ್ಟಿಸಿದ್ದು ಸುಳ್ಳಲ್ಲ. ಕರುಣಾಕರನ್ ನಿರ್ದೇಶನದ ಚಿತ್ರದಲ್ಲಿ ಪವರ್ ಸ್ಟಾರ್ ಸಿಕ್ಕಾಪಟ್ಟೆ ಸ್ಟೈಲಿಶ್ ಅವತಾರದಲ್ಲಿ ಮಿಂಚಿದ್ದರು. ಹೇರ್‌ಸ್ಟೈಲ್, ಕಾಸ್ಟ್ಯೂಮ್ ಎಲ್ಲವೂ ಅಭಿಮಾನಿಗಳ ಮನಗೆದ್ದಿತ್ತು. ಅಂದಹಾಗೆ ಆ ಚಿತ್ರದಲ್ಲಿ ಪವನ್ ಮಾಜಿ ಪತ್ನಿ ರೇಣು ದೇಸಾಯಿ ಸ್ಟೈಲಿಸ್ಟ್ ಆಗಿ ಕೆಲಸ ಮಾಡಿದ್ದರು.
'ಬದ್ರಿ' ಚಿತ್ರದಲ್ಲಿ ಪವನ್ ಕಲ್ಯಾಣ್ ಜೋಡಿಯಾಗಿ ರೇಣು ನಟಿಸಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ, ಪ್ರೀತಿ ಶುರುವಾಗಿತ್ತು. 'ಜಾನಿ' ಚಿತ್ರದಲ್ಲಿ ಕೂಡ ಒಟ್ಟಿಗೆ ನಟಿಸಿದ್ದರು. ಆದರೆ ಪ್ರೊಡಕ್ಷನ್ ಡಿಸೈನರ್ ಹಾಗೂ ಸ್ಟೈಲಿಸ್ಟ್ ಆಗಿ ಕೂಡ ಪವನ್ ಕಲ್ಯಾಣ್ ಸಿನಿಮಾಗಳಿಗೆ ಆಕೆ ಕೆಲಸ ಮಾಡಿದ್ದರು. ಸಾಕಷ್ಟು ಜನ ರೇಣು ದೇಸಾಯಿ ಕಾಸ್ಟ್ಯೂಮ್ ಡಿಸೈನರ್ ಎಂದು ಭಾವಿಸಿದ್ದಾರೆ. ವಿಕಿಪಿಡಿಯಾದಲ್ಲಿ ಕೂಡ ಅದೇ ರೀತಿ ನಮೂದಿಸಲಾಗಿದೆ. ಆದರೆ ನಾನು ಕಾಸ್ಟ್ಯೂಮ್ ಡಿಸೈನರ್ ಅಲ್ಲ, ಬರೀ ಸ್ಟೈಲಿಸ್ಟ್ ಅಷ್ಟೇ ಎಂದು Visual Talks Podcastನಲ್ಲಿ ಹೇಳಿದ್ದಾರೆ. ಬಹಳ ಟ್ರೆಂಡ್ ಕ್ರಿಯೇಟ್ ಮಾಡಿದ್ದ 'ಬಾಲು' ಚಿತ್ರದ ಪವನ್ ಕಲ್ಯಾಣ್ ಪ್ಯಾಂಟ್ ಬಗ್ಗೆ ಕೂಡ ಮಾತನಾಡಿದ್ದಾರೆ.
ಆ ಕಾಲಕ್ಕೆ ಅದು ಲಕ್ಷ ಲಕ್ಷ ಬೆಲೆ ಬಾಳುವ ಪ್ಯಾಂಟ್ ಎಂದು ಕೆಲವರು ಮಾತನಾಡಿಕೊಂಡಿದ್ದರು. ಬರೀ ಒಂದು ಪ್ಯಾಂಟ್ ದರ ಇಷ್ಟು ಯಾಕೆ? ಅದರ ವಿಶೇಷತೆ ಏನು ? ಚಿತ್ರದಲ್ಲಿ ಅದು ಅಷ್ಟು ಮುಖ್ಯನಾ ಅಂತ ಅಭಿಮಾನಿಗಳಿಗೆ ಚರ್ಚಿಸಿದ್ದರು. 'ಬಾಲು' ಸಿನಿಮಾ ಮೇಲೆ ಇನ್ನಿಲ್ಲದ ಕ್ರೇಜ್ ಶುರುವಾಗಿತ್ತು. ಆ ಬಳಿಕ ಮತ್ತಷ್ಟು ಸಿನಿಮಾಗಳಲ್ಲಿ ಪವನ್ ಇದೇ ರೀತಿ ಸ್ಟೈಲಿಶ್ ಪ್ಯಾಂಟ್ ಧರಿಸಿ ದರ್ಶನ ಕೊಟ್ಟಿದ್ದರು.
ಸಂದರ್ಶನದಲ್ಲಿ ಮಾತನಾಡಿರುವ ರೇಣು ದೇಸಾಯಿ "ಸಿನಿಮಾ ಕಾಸ್ಟ್ಯೂಮ್‌ಗಾಗಿ ನಾನು ಊರೂರು ಸುತ್ತುತ್ತಿದ್ದೆ. 'ಬಾಲು' ಚಿತ್ರದ ಕಾಸ್ಟ್ಯೂಮ್‌ಗಾಗಿ ಇಟಲಿ ಸೇರಿದಂತೆ ಸಾಕಷ್ಟು ಕಡೆ ಓಡಾಡುತ್ತಿದ್ದೆ. 'ಬಾಲು' ಚಿತ್ರಕ್ಕಾಗಿ ಇಟಲಿಯ ಮಿಲನ್ ನಗರ ಅಂಗಡಿಗೆ ಹೋಗಿದ್ದೆ. ಎರಡನೇ ಮಹಾಯುದ್ಧದಲ್ಲಿ ಬಳಸಿದ್ದ ಬಟ್ಟೆಯಿಂದ ತಯಾರಿಸಿದ್ದ ಪ್ಯಾಂಟ್ ಅದು.. ಬರೀ 5 ಪ್ಯಾಂಟ್ ಮಾತ್ರ ತಯಾರಿಸಿದ್ದರು. ಮೊದಲಿಗೆ ಅಡ್ವಾನ್ಸ್ ಕೊಟ್ಟು ಬಂದು ಬಳಿಕ ಮತ್ತೆ ಹೋಗಿ ತಗೊಂಡು ಬಂದಿದೆ. ಆ ಪ್ಯಾಂಟ್‌ಗೆ ಅವತ್ತಿನ ಕಾಲಕ್ಕೆ 75 ಸಾವಿರ ರೂ. ಕೊಟ್ಟಿದ್ವಿ" ಎಂದು ನೆನಪಿಸಿಕೊಂಡಿದ್ದಾರೆ.
22 ವರ್ಷಗಳ ಹಿಂದೆ 75 ಸಾವಿರ ರೂ. ದೊಡ್ಡ ಮೊತ್ತ. ಚಿತ್ರದಲ್ಲಿ ಸಾಕಷ್ಟು ಕಂಟಿನ್ಯುಟಿ ಸೀನ್ಸ್ ಇದೆ.. 5 ಸಾವಿರದ 10 ಪ್ಯಾಂಟ್ ಖರೀದಿಸುವ ಬದಲು ಇನ್ನು 25 ಸಾವಿರ ಸೇರಿಸಿ ಈ ಪ್ಯಾಂಟ್ ಮಾಡಿಸಿದ್ರೆ, ಚೆನ್ನಾಗಿರುತ್ತೆ ಎಂದು ನಿರ್ಮಾಪಕರನ್ನು ಒಪ್ಪಿಸಿದ್ದೆ. ಅವ್ರು ಒಪ್ಕೊಂಡ್ರು.. ಅವತ್ತು ಆ ಪ್ರಯತ್ನ ಮಾಡಿದ್ದಕ್ಕೆ 20 ಕಳೆದ್ರು, ಆ ಕಾಸ್ಟ್ಯೂಮ್ ಬಗ್ಗೆ ಎಲ್ಲರೂ ಮಾತನಾಡ್ತಾರೆ ಎಂದು ರೇಣು ದೇಸಾಯಿ ವಿವರಿಸಿದ್ದಾರೆ.
ಹೀಗೆ ಪವನ್ ಕಲ್ಯಾಣ್ ಜೊತೆ ಬಹಳ ಆಪ್ತರಾಗಿದ್ದ ರೇಣುದೇಸಾಯಿ ಪ್ರೀತಿಸಿ ಮದುವೆ ಆಗಿದ್ದರು. ಜೋಡಿಗೆ ಇಬ್ಬರು ಮಕ್ಕಳು ಜನಿಸಿದ್ರು. ಬಳಿಕ ಭಿನ್ನಾಭಿಪ್ರಾಯಗಳಿಂದ ಪವನ್- ರೇಣು ದೂರಾಗಿದ್ದರು. ಡಿವೋರ್ಸ್ ಬಳಿಕ ವಿದೇಶಿ ಮೂಲಕ ಅನ್ನಾ ಲೆಝ್ನೆವಾ ಜೊತೆ ಪವನ್ ಕಲ್ಯಾಣ್ ಮೂರನೇ ಮದುವೆ ಮಾಡಿಕೊಂಡರು.
బాలు మూవీ లో #PawanKalyan గారి
— Anchor Chandu 😎 (@Actor_Chandu_) November 3, 2026
ప్యాంట్ "2nd World War " ది....
రేటు ఎంతో తెలుసా ? #Renudesai reveals the price of Balu's pant 💥💥💥💥 pic.twitter.com/m1XnHXRuDu