ತೆಲುಗು ನಟ ನಾಗಚೈತನ್ಯಾ ಹಾಗೂ ನಟಿ ಸಮಂತಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದು ಗೊತ್ತೇಯಿದೆ. ಈಗಾಗಲೇ ಇಬ್ಬರೂ ಬೇರೆಯವರನ್ನು ಪ್ರೀತಿಸಿ ಎರಡನೇ ಮದುವೆ ಆಗಿದ್ದಾರೆ. ನಟಿ ಶೋಭಿತಾ ಜೊತೆ ಚೈತು, ನಿರ್ದೇಶಕ ರಾಜ್ ನಿಡುಮೊರು ಜೊತೆ ಸ್ಯಾಮ್ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಸದ್ಯ ಸಮಂತಾ ಗರ್ಭಿಣಿಯಾಗಿ ಇತ್ತೀಚೆಗೆ ಸೀಮಂತ ಶಾಸ್ತ್ರ ಕೂಡ ನಡೆದಿದೆ.
ಚೈಸ್ಯಾಮ್ ಜೋಡಿ ಡಿವೋರ್ಸ್ ಪಡೆದು ದೂರಾಗಲು ಕಾರಣ ಏನು ಎನ್ನುವುದು ಇವತ್ತಿಗೂ ಬಹಿರಂಗವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ಕೂಡ ಇದೆ. 2017ರಲ್ಲಿ ಮದುವೆಯಾಗಿದ್ದ ಜೋಡಿ ನಾಲ್ಕು ವರ್ಷಗಳ ಬಳಿಕ ದೂರಾಗಲು ನಿರ್ಧರಿಸಿದ್ದರು. ಮೊದಲಿಗೆ ಇದನ್ನು ಯಾರೊಬ್ಬರು ನಂಬಲು ಸಿದ್ಧರಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಪೋಸ್ಟ್ ಮಾಡಿ ಈ ವಿಚಾರ ಖಚಿತಪಡಿಸಿದ್ದರು. ಅಷ್ಟಕ್ಕೂ ಕಾರಣ ಏನು? ಎನ್ನುವ ಚರ್ಚೆ ಶುರುವಾಗಿತ್ತು. ಚೈತು ಅಭಿಮಾನಿಗಳು ಸಮಂತಾರನ್ನು ದೂಷಿಸಿದರು. ಅದೇ ರೀತಿ ಸ್ಯಾಮ್ ಅಭಿಮಾನಿಗಳು ಚೈತನ್ಯಾ ಮೇಲೆ ಆರೋಪ ಹೊರಿಸಿದರು.
ಡಿವೋರ್ಸ್ ಕಾರಣ ಏನಿರಬಹುದು ಎನ್ನುವ ಚರ್ಚೆ ಬಂದಾಗ ಎರಡು ವಿಚಾರಗಳು ಮುನ್ನಲೆಗೆ ಬಂದವು. ಅದು ಸಮಂತಾಗೆ ಸಂಬಂಧಿಸಿದ್ದರು. 'ಫ್ಯಾಮಿಲಿಮ್ಯಾನ್'-2 ವೆಬ್ ಸೀರಿಸ್‌ನಲ್ಲಿ ಸಮಂತಾ ನಟಿಸಿದ್ದರು. ರಾಜಿ ಪಾತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಅವತಾರದಲ್ಲಿ ನಟಿಸಿದ್ದರು. ನಾಗಾರ್ಜುನ ಅವರದ್ದು ಸಂಪ್ರದಾಯಬದ್ಧ ಕುಟುಂಬ. ಮನೆ ಸೊಸೆ ಹೀಗೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವುದು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ದಂಪತಿ ನಡುವೆ ವೈಮನಸ್ಸು ಮೂಡಿತ್ತು, ಜಗಳ ತಾರಕಕ್ಕೇರಿ ಡಿವೋರ್ಸ್‌ವರೆಗೋ ಹೋಯ್ತು ಎಂದು ಕೆಲವರು ಆರೋಪಿಸಿದ್ದರು.
ಸಮಂತಾಗೆ ಮಕ್ಕಳು ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಆದರೆ ಚೈತನ್ಯಾ ಮಗು ಬೇಕು ಎಂದುಕೊಂಡರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಬಿರುಕು ಮೂಡಿತ್ತು ಎನ್ನುವುದು ಮತ್ತೊಂದು ಆರೋಪ. ಅಧಿಕೃವಾಗಿ ಯಾರೂ ಈ ಬಗ್ಗೆ ಮಾತನಾಡದಿದ್ದರೂ ಅಭಿಮಾನಿಗಳ ನಡುವೆ ಇಂತಾದೊಂದು ಚರ್ಚೆ ನಡೆದಿತ್ತು. ಇದಕ್ಕೂ ಸಮಂತಾ ಅವರನ್ನು ಗುರಿ ಮಾಡಿದ್ದರು. ಸಾಮಾನ್ಯವಾಗಿ ಡಿವೋರ್ಸ್ ಪ್ರಕರಣಗಳಲ್ಲಿ ಇಂತಹ ಕಾರಣಗಳು ಇರುತ್ತದೆ. ಅದೇ ಇವರಿಬ್ಬರ ವಿಚಾರದಲ್ಲೂ ನಡೆದಿರಬಹುದು ಎಂದು ವಾದಿಸಿದ್ದರು. ಅದೇ ನಿಜವಾಗಿದ್ದರೆ ಈಗ ಎರಡೂ ಕಾರಣಗಳು ಸುಳ್ಳಾದಂತಾಗಿದೆ ಎಂದು ಹೊಸ ಚರ್ಚೆ ಮುನ್ನಲೆಗೆ ಬಂದಿದೆ.
ಸಮಂತಾ ಈಗ ಗರ್ಭಿಣಿಯಾಗಿದ್ದಾರೆ. ರಾಜ್ ಹಾಗೂ ಸ್ಯಾಮ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಿದ್ದ ಮೇಲೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಚೈಸ್ಯಾಮ್ ನಡುವೆ ಭಿನ್ನಾಭಿಪ್ರಾಯ ಮೂಡಿರಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 3 ವರ್ಷಗಳ ಹಿಂದೆ ಶೋಭಿತಾ ನಟನೆಯ 'ಮೇಡ್ ಇನ್ ಹೆವೆನ್' ಎಂಬ ವೆಬ್ ಸೀರಿಸ್ ಬಂದಿತ್ತು. ಅದರಲ್ಲಿ ಶೋಭಿತಾ ಬಹಳ ಬೋಲ್ಡ್ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ.
'ಫ್ಯಾಮಿಲಿಮ್ಯಾನ್- 2' ವೆಬ್ ಸೀರಿಸ್‌ನಲ್ಲಿ ಸಮಂತಾ ಬಿಂದಾಸ್ ಆಗಿ ನಟಿಸಿದ್ದು ನಿಜಕ್ಕೂ ಡಿವೋರ್ಸ್‌ಗೆ ಕಾರಣ ಅಲ್ಲ. ಅದೇ ನಿಜವಾಗಿದ್ದರೆ 'ಮೇಡ್ ಇನ್ ಹೆವೆನ್' ನೋಡಿ ಶೋಭಿತಾಳನ್ನು ಚೈತು ಮದುವೆ ಆಗುವಂತೆ ಇರಲಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಶೋಭಿತಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೆಲ್ಲಾ ನೋಡಿ ಚೈಸ್ಯಾಮ್ ಡಿವೋರ್ಸ್ ಅಸಲಿ ಕಾರಣ ಏನಪ್ಪಾ ? ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.