ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಅನ್ನುವುದು ತಮಾಷೆ ಮಾತಲ್ಲ. ಅದರ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿರುತ್ತವೆ. ಅದೇ ಕಾರಣಕ್ಕೆ ದೊಡ್ಡ ಸಿನಿಮಾಗಳ ಬಿಡುಗಡೆ ದಿನಾಂಕ ವರ್ಷದ ಮುಂದೆ ಘೋಷಿಸಿಬಿಡ್ತಾರೆ. ಆ ಸಮಯಕ್ಕೆ ಬೇರೆ ಯಾರೂ ನಾವು ಸಿನಿಮಾ ರಿಲೀಸ್ ಮಾಡ್ತೀವಿ ಎಂದು ಮುಂದೆ ಬರೋದು ಬೇಡ ಎನ್ನುವ ಕಾರಣಕ್ಕೆ ಈ ತೀರ್ಮಾನಕ್ಕೆ ಬರ್ತಾರೆ.

ಏಪ್ರಿಲ್ 7ರಂದು ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಬಿಡುಗಡೆ ಆಗಬೇಕಿದೆ. ಆದರೆ ಕಾರಣಾಂತರಗಳಿಂದ ಅದು ತಡವಾಗುವ ಸುಳಿವು ಸಿಕ್ಕಿದೆ. ಹಾಗಾಗಿ ಅದೇ ದಿನಾಂಕದಲ್ಲಿ ಪ್ರಭಾಸ್ ನಟನೆಯ 'ಫೌಜಿ' ಅಥವಾ ರಜನಿಕಾಂತ್ ನಟನೆಯ 'ಧರ್ಮನ್' ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಅಪ್ಪಿತಪ್ಪಿ ಒಟ್ಟಿಗೆ ಎರಡೂ ಸಿನಿಮಾಗಳು ಬಿಡುಗಡೆ ಆದ್ರೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ ಮೊದಲ ವಾರದಲ್ಲಿ 'ಫೌಜಿ' ಸಿನಿಮಾ ತೆರೆಗಪ್ಪಳಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸಂಕ್ರಾಂತಿಗೆ ಎಂದುಕೊಂಡಿದ್ದ ಧರ್ಮನ್ ಸಿನಿಮಾ ಈಗ ಸಮ್ಮರ್ ರಿಲೀಸ್ ಪ್ಲ್ಯಾನ್‌ನಲ್ಲಿದೆ. ಏಪ್ರಿಲ್ 14ರಂದು ತಮಿಳರ ಹೊಸ ವರ್ಷ. ಹಾಗಾಗಿ ಅದಕ್ಕೂ ವಾರಕ್ಕೂ ಮುನ್ನ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ಮನಸ್ಸು ಮಾಡಿದೆ. ಏಪ್ರಿಲ್ 7, ಬುಧವಾರ ಯುಗಾದಿ ಸಂಭ್ರಮ. ಆಂಧ್ರ- ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಇದು ದೊಡ್ಡ ಹಬ್ಬ. ಹಾಗಾಗಿ ಅದೇ ದಿನ ಸಿನಿಮಾ ಬಿಡುಗಡೆಗೆ 'ಫೌಜಿ' ಚಿತ್ರತಂಡ ಮನಸ್ಸು ಮಾಡಿದೆ.

ಇನ್ನು ಏಪ್ರಿಲ್ 14, ಬುಧವಾರ ಅಂಬೇಡ್ಕರ್ ಜಯಂತಿ, ಏಪ್ರಿಲ್ 15ರಂದು ರಾಮನವಮಿ ಹಾಗೂ ಏಪ್ರಿಲ್ 19 ಸೋಮವಾರ ಮಹಾವೀರ ಜಯಂತಿ ರಜೆ ಇದೆ. ಹೀಗೆ ಸಾಲು ಸಾಲು ರಜೆಗಳು ಇರುವುದರಿಂದ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಅದು ಪರ್ವಕಾಲ. ಹಾಗಾಗಿ 'ವಾರಣಾಸಿ' ಸಿನಿಮಾ ಬಿಡುಗಡೆಗೆ ಆ ದಿನವನ್ನು ಜಕ್ಕಣ್ಣ ಆಯ್ಕೆ ಮಾಡಿಕೊಂಡಿದ್ದರು. ಕಾರಣಾಂತರಗಳಿಂದ ಸಿನಿಮಾ ಆಗಸ್ಟ್‌ನಲ್ಲಿ ತೆರೆಗೆ ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಹಾಗಾಗಿ ಏಪ್ರಿಲ್ 7ರ ಮೇಲೆ ರಜನಿಕಾಂತ್ ಹಾಗೂ ಪ್ರಭಾಸ್ ಸಿನಿಮಾಗಳ ಕಣ್ಣು ಬಿದ್ದಿದೆ.

'ಸೀತಾರಾಮಂ' ಬಳಿಕ ಹನು ರಾಘವಪುಡಿ ನಿರ್ದೇಶನದ 'ಫೌಜಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಇನ್ನು ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ನಟನೆಯ 'ಧರ್ಮನ್' ಕೂಡ ಕುತೂಹಲ ಮೂಡಿಸಿದೆ. 'ಜೈಲರ್'- 2 ಸಕ್ಸಸ್ ಬಳಿಕ ಬರ್ತಿರೋ ತಲೈವಾ ಸಿನಿಮಾ ಆಗಿರುವುದರಿಂದ ನಿರೀಕ್ಷೆ ದುಪ್ಪಟ್ಟಾಗಿದೆ.