ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ತಮಿಳು ಚಿತ್ರರಂಗದ ಎಲ್ಲಾ ಸಿನಿಮಾಹಳ ಬಾಕ್ಸಾಫೀಸ್ ದಾಖಲೆಯನ್ನು ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಹಿಂದಿಕ್ಕಿದೆ. ವಿಶ್ವದಾದ್ಯಂತ ಸಿನಿಮಾ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ದೀಪಾವಳಿ ವೀಕೆಂಡ್ನಲ್ಲಿ ಮತ್ತಷ್ಟು ಗಳಿಕೆ ಕಾಣುವ ಸುಳಿವು ಸಿಕ್ಕಿದೆ.
ತಮಿಳುನಾಡಿನಲ್ಲಿ 'ಜೈಲರ್- 2' ಸಿನಿಮಾ 200 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ಹೇಳಲಾಗ್ತಿದೆ. 1000 ಕೋಟಿ ರೂ. ಕ್ಲಬ್ ಕನಸು ನನಸು ನುಚ್ಚು ನೂರಾಗಿದೆ. ವಯಸ್ಸು 75 ದಾಟಿದ್ರು, ರಜನಿಕಾಂತ್ ಕ್ರೇಜ್, ಬಾಕ್ಸಾಫೀಸ್ ಸ್ಟಾಮಿನಾ ಹೇಗಿದೆ ಎನ್ನುವುದನ್ನು ಈ ಸಿನಿಮಾ ಮತ್ತೊಮ್ಮೆ ಸಾಬೀತು ಮಾಡಿದೆ. ನೆಲ್ಸನ್ ನಿರ್ದೇಶನದ ಸೀಕ್ವೆಲ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ.
20 ದಿನಕ್ಕೆ 816.90 ಕೋಟಿ ರೂ.
ದೇಶವಿದೇಶಗಳಲ್ಲಿ 'ಜೈಲರ್- 2' ಸಿನಿಮಾ ದರ್ಬಾರ್ ಮಾಡ್ತಿದೆ. ಹೆಚ್ಚು ಪ್ರಚಾರ ಇಲ್ಲದೇ ಬಂದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಮೊದಲ ವಾರ 549 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಮಾಹಿತಿ ನೀಡಿತ್ತು. ಬಳಿಕ ಗಳಿಕೆ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ. ಆದರೆ ಇಂಡಸ್ಟ್ರಿ ಮೆಗಾ ಬ್ಲಾಕ್ಬಸ್ಟರ್ ಎಂದು ಪೋಸ್ಟರ್ ಬಿಟ್ಟಿದೆ ಸನ್ ಪಿಕ್ಚರ್ಸ್ ಸಂಸ್ಥೆ. ಆದರೆ ಬಾಕ್ಸಾಫೀಸ್ ಪಂಡಿತರು ಈವರೆಗೆ 816.90 ಕೋಟಿ ರೂ. ಕೊಳ್ಳೆ ಹೊಡೆದಿರುವುದಾಗಿ ಲೆಕ್ಕ ಹಾಕುತ್ತಿದ್ದಾರೆ.
ತಮಿಳುನಾಡಿನಲ್ಲಿ 200 ಕೋಟಿ ರೂ.
ಉತ್ತರಭಾರತದಲ್ಲಿ ಸಿನಿಮಾ ಬಿಡುಗಡೆ ಆಗದೇ ಹಿನ್ನಡೆ ಆಗಿತ್ತು. ತಮಿಳುನಾಡಿನಲ್ಲಿ ಟಿಕೆಟ್ ದರ ಕಮ್ಮಿಯಿದೆ. ಆದರೂ 'ಜೈಲರ್- 2' ಒಳ್ಳೆ ಗಳಿಕೆ ಕಂಡಿದೆ. ಈಗಾಗಲೇ 200 ಕೋಟಿ ರೂ. ಗಳಿಸಿರುವುದಾಗಿ ಹೇಳಲಾಗ್ತಿದೆ. ಇದು ಹೊಸ ದಾಖಲೆ ಎಂದು ಚರ್ಚೆ ನಡೀತಿದೆ. ಈವರೆಗೆ ತಮಿಳುನಾಡಿನಲ್ಲಿ ಮಾತ್ರ ಮತ್ಯಾವುದೇ ಸಿನಿಮಾ ಇಷ್ಟು ಕಲೆಕ್ಷನ್ ಮಾಡಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
ಅದೊಂದು ದಾಖಲೆ ಬಾಕಿ
ತಮಿಳುನಾಡಿನಲ್ಲಿ 'ಪೊನ್ನಿಯಿನ್ ಸೆಲ್ವನ್- 1' ಚಿತ್ರದ 227.04 ಕೋಟಿ ರೂ. ಹಾಗೂ ವಿಜಯ್ ನಟನೆಯ 'GOAT' ಸಿನಿಮಾ 218 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಕೆಲವರು ವಾದಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ದಾಖಲೆಯನ್ನು 'ಜೈಲರ್- 2' ಸಿನಿಮಾ ಅಳಿಸಿ ಹಾಕುತ್ತದೆ ಎನ್ನಲಾಗ್ತಿದೆ.