ನೆಲ್ಸನ್ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಸಿನಿಮಾ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ವಯಸ್ಸು 75 ಆದ್ರು ಬಾಕ್ಸಾಫೀಸ್‌ನಲ್ಲಿ ತಲೈವಾ ತಾಕತ್ತು ಎಂಥದ್ದು ಎಂದು ಈ ಸಿನಿಮಾ ಸಾಬೀತು ಮಾಡಿದೆ.

ಅಕ್ಟೋಬರ್ 15ರಂದು 'ಜೈಲರ್- 2' ಸಿನಿಮಾ ತೆರೆಗಪ್ಪಳಿಸಿತ್ತು. ಅದ್ಭುತ ರೆಸ್ಪಾನ್ಸ್ ಪಡೆದುಕೊಂಡು ಸಿನಿಮಾ ಸದ್ದು ಮಾಡ್ತಿದೆ. ದಸರಾ, ವಿಜಯದಶಮಿ ರಜೆ ಕೂಡ ಸಿನಿಮಾ ಗಳಿಕೆಗೆ ಬಲ ನೀಡಿದೆ. ತಮ್ಮದೇ ಸಿನಿಮಾಗಳ ಹಿಂದಿನ ಬಾಕ್ಸಾಫೀಸ್ ದಾಖಲೆಗಳನ್ನು ಹಿಂದಿಕ್ಕಿ ರಜನಿಕಾಂತ್ ಆಕ್ಷನ್ ಥ್ರಿಲ್ಲರ್ ಸಿನಿಮಾ ದರ್ಬಾರ್ ನಡೆಸ್ತಿದೆ. ಇದೀಗ ಅಧಿಕೃತವಾಗಿ ಚಿತ್ರತಂಡ ಮೊದಲ ವಾರದ ಕಲೆಕ್ಷನ್ ಲೆಕ್ಕ ಕೊಟ್ಟಿದೆ.

ಫಸ್ಟ್ ವೀಕ್ ಕಲೆಕ್ಷನ್

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 'ಜೈಲರ್' ಸರಣಿ ಸಿನಿಮಾಗಳು ತೆರೆಗೆ ಬಂದು ಸದ್ದು ಮಾಡಿವೆ. ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ ಎರಡನೇ ಭಾಗ ತೆರೆಗೆ ತರಲಾಗಿದೆ. ಫಸ್ಟ್ ಹಾಫ್‌ ಎಂಟರ್‌ಟೈನ್‌ಮೆಂಟ್ ಹೋಲಿಸಿದರೆ ಸೆಕೆಂಡ್ ಹಾಫ್ ನಿರಾಸೆ ಮೂಡಿಸುತ್ತದೆ. ಆದರೂ ಭರ್ಜರಿ ಗೆಸ್ಟ್ ಅಪಿಯರೆನ್ಸ್‌ ಜೊತೆ ಮಾಸ್ ಪ್ರೇಕ್ಷಕರ ಮನಗೆದ್ದಿದೆ. ಮೊದಲ ವಾರ ಚಿತ್ರಕ್ಕೆ 549 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.

ಹೊಸ ದಾಖಲೆ

ಮೊದಲ 7 ದಿನಕ್ಕೆ ತಮಿಳಿನ ಮತ್ಯಾವುದೇ ಸಿನಿಮಾ 549 ಕೋಟಿ ರೂ. ಕಲೆಕ್ಷನ್ ಮಾಡಿಲ್ಲ. ಹಾಗಾಗಿ ಇದು ಹೊಸ ಇತಿಹಾಸ ಎಂದು ಚಿತ್ರತಂಡವೇ ಹೇಳಿದೆ. ತಮಿಳಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಟಾಪ್ 5 ಸಿನಿಮಾಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ರಜನಿಕಾಂತ್ ನಟಿಸಿರುವುದು ವಿಶೇಷ. ಅಂದಾಜು 700-800 ಕೋಟಿ ರೂ. ಕಲೆಕ್ಷನ್ ಮಾಡಿದ್ದ 'ಎಂದಿರನ್-2' ಸಿನಿಮಾ ಮೊದಲ ಸ್ಥಾನದಲ್ಲಿದೆ. ಮೂರು ವರ್ಷಗಳ ಹಿಂದೆ 'ಜೈಲರ್' ಸಿನಿಮಾ 605–650 ಕೋಟಿ ರೂ. ಬಾಚಿಕೊಂಡಿತ್ತು. 595–615 ಕೋಟಿ ರೂ. ಕೊಳ್ಳೆ ಹೊಡೆದು ವಿಜಯ್ ನಟನೆಯ 'ಲಿಯೋ' ಸಿನಿಮಾ ಮೂರನೇ ಸ್ಥಾನದಲ್ಲಿದೆ. ಇದೀಗ 'ಜೈಲರ್-2' ಸಿನಿಮಾ ನಾಲ್ಕನೇ ಸ್ಥಾನದಲ್ಲಿದ್ದು 'ಲಿಯೋ' ದಾಖಲೆ ಮುರಿಯುವುದು ಪಕ್ಕಾ ಎನ್ನಲಾಗ್ತಿದೆ. 514–675 ಕೋಟಿ ರೂ. ಗಳಿಸಿದ್ದ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

1000 ಕೋಟಿ ರೂ. ಬಾಚುತ್ತಾ ?

ತಮಿಳಿನಲ್ಲಿ ಈವರೆಗೆ ಯಾವುದೇ ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ದಾಖಲೆ ಮಾಡಿಲ್ಲ. 'ಜೈಲರ್- 2' ಅದನ್ನು ಸಾಧಿಸುವ ನಿರೀಕ್ಷೆ ಇತ್ತು. ಆದರೆ ಉತ್ತರ ಭಾರತದಲ್ಲಿ ಸಿನಿಮಾ ಸರಿಯಾಗಿ ಪ್ರದರ್ಶನವಾಗದೇ ಹಿನ್ನಡೆಯಾಗಿದೆ. ಹಾಗಾಗಿ ಇನ್ನು 450 ಕೋಟಿ ರೂ. ಕಲೆಕ್ಷನ್ ಕಷ್ಟವಾಗಬಹುದು ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.