ರಣ್‌ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಸಿನಿಮಾ ಗಳಿಕೆ 1000 ಕೋಟಿ ರೂ. ದಾಟಿ ಮುನ್ನುಗ್ಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಚಿತ್ರದ ಸ್ಥಾನ ಮೆಲೇರುತ್ತಿದೆ. ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ.

8 ದಿನಕ್ಕೆ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ 'ರಾಮಾಯಣ' ಚಿತ್ರತಂಡವೇ ಘೋಷಿಸಿದೆ. 9 ದಿನವೂ ರಾಮ- ರಾವಣ ದರ್ಬಾರ್ ತಗ್ಗಲಿಲ್ಲ. ಎರಡನೇ ಶುಕ್ರವಾರ ಕೂಡ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ರೆಸ್ಪಾನ್ಸ್ ಪಡೆದುಕೊಂಡಿದೆ. ಸಿನಿಮಾ 2000 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಕೆಲವರು ಅಂದಾಜಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಹೊಸ 'ಧುರಂಧರ್' ಈ 'ರಾಮಾಯಣ' ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಒಟ್ಟು ಕಲೆಕ್ಷನ್

ಮೊದಲ 9 ದಿನಕ್ಕೆ 'ರಾಮಾಯಣ' ಸಿನಿಮಾ 1,110.70 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಲೆಕ್ಕ ಸಿಕ್ತಿದೆ. ಭಾರತದಲ್ಲಿ ಮಾತ್ರ ಗಳಿಕೆ 800 ಕೋಟಿ ರೂ. ಗಡಿ ದಾಟಿದೆ. ವಿದೇಶಗಳಲ್ಲಿ 378.50 ಕೋಟಿ ರೂ. ಬಾಚಿದೆ. 9ನೇ ದಿನವಾದ ನಿನ್ನೆ ಭಾರತದಲ್ಲಿ 47.85 ಕೋಟಿ ರೂ. ಹಾಗೂ ಓವರ್‌ಸೀಸ್‌ನಲ್ಲಿ 25 ಕೋಟಿ ರೂ. ಸೇರಿ 70 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದೆ.

'ಕಲ್ಕಿ', 'ಪಠಾಣ್' ದಾಖಲೆ ಧೂಳ್

ಅತಿಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಸದ್ಯ 'ಕಲ್ಕಿ 2898 AD'(1,042 ಕೋಟಿ ರೂ.) ಹಾಗೂ 'ಪಠಾಣ್'(1,050 ಕೋಟಿ ರೂ.) ಸಿನಿಮಾಗಳ ದಾಖಲೆಯನ್ನು 'ರಾಮಾಯಣ' ಸಿನಿಮಾ ಮುರಿದಿದೆ. ಇವತ್ತು ಶಾರುಖ್ ಖಾನ್ ನಟನೆಯ 'ಜವಾನ್' ದಾಖಲೆ ಅಳಿಸಿ ಹಾಕಲಿದ್ದು ನಾಳೆ ಯಶ್ ನಟನೆಯ 'ಕೆಜಿಎಫ್-2'(1,200 ಕೋಟಿ ರೂ.) ಸಿನಿಮಾ ದಾಖಲೆ ಮೀರಿ 'ರಾಮಾಯಣ' ಮುನ್ನುಗ್ಗುವುದು ಖಚಿತವಾಗಿದೆ.

9ನೇ ಸ್ಥಾನದಲ್ಲಿ 'ರಾಮಾಯಣ'

ಇನ್ನು ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ದಂಗಲ್'(1,968 ಕೋಟಿ ರೂ.) ಮೊದಲ ಸ್ಥಾನದಲ್ಲಿದೆ. ಧುರಂಧರ್-2 (1,852 ಕೋಟಿ ರೂ.) ಎರಡನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ 'ಬಾಹುಬಲಿ- 2'(1,810 ಕೋಟಿ ರೂ.) 4ನೇ ಸ್ಥಾನದಲ್ಲಿ 'ಪುಷ್ಪ- 2'(1,800 ಕೋಟಿ ರೂ.) 5ನೇ ಸ್ಥಾನದಲ್ಲಿ 'ಧುರಂಧರ್'(1,350 ಕೋಟಿ ರೂ.) 6ನೇ ಸ್ಥಾನದಲ್ಲಿ 'ಆರ್‌ಆರ್‌ಆರ್‌'(1,300 ಕೋಟಿ ರೂ.) 7ನೇ ಸ್ಥಾನದಲ್ಲಿ 'ಕೆಜಿಎಫ್-2'(1,200 ಕೋಟಿ ರೂ.) ಹಾಗೂ 8ನೇ ಸ್ಥಾನದಲ್ಲಿ 'ಜವಾನ್'(1,148 ಕೋಟಿ ರೂ.) ಸಿನಿಮಾಗಳಿವೆ.