ಮಲಯಾಳಂ ನಟ ದುಲ್ಕರ್ ಸಲ್ಮಾನ್ ತೆಲುಗು ಚಿತ್ರರಂಗಕ್ಕೆ ದತ್ತುಪುತ್ರ ಆಗಿಬಿಟ್ಟಿದ್ದಾರೆ. ನೇರವಾಗಿ ತೆಲುಗು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸದ್ಯ ದುಲ್ಕರ್ ನಟನೆಯ 'ಆಕಾಶಂಲೊ ಒಕ ತಾರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ನೋಡಿದ ಸಾಕಷ್ಟು ಜನ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಟ್ಟಿ ಹಾಕುತ್ತಿದೆ.
ಲೈತ್ಬೋಸ್ ಮೀಡಿಯಾ, ಸ್ವಪ್ನ ಸಿನಿಮಾ ಹಾಗೂ ಗೀತಾ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ 'ಆಕಾಶಂಲೊ ಒಕ ತಾರ' ಸಿನಿಮಾ ನಿರ್ಮಿಸಿವೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಿನಿಮಾ ವಿತರಣೆ ಮಾಡಿದ್ದಾರೆ. ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ರಾಜಮೌಳಿ ಸೇರಿ ಹಲವರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೆಲ್ಲದರ ನಡುವೆ 'ಪುಷ್ಪ' ಸರಣಿ ಸಿನಿಮಾ ನಿರ್ದೇಶಕ ಸುಕುಮಾರ್ಗೆ ಅಲ್ಲು ಅರವಿಂದ್ ಒಂದು ಸವಾಲು ಹಾಕಿದ್ದಾರೆ. ಅದರಲ್ಲಿ ಸುಕುಮಾರ್ ಸೋತಿದ್ದಾರೆ. ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಿನ್ನೆ ಅಲ್ಲು ಅರವಿಂದ್ ಕರೆ ಮಾಡಿ ನನಗೊಂದು ಚಾಲೆಂಜ್ ಹಾಕಿದ್ರು.. 'ಆಕಾಶಂಲೊ ಒಕ ತಾರ' ಸಿನಿಮಾ ನೋಡಿ.. ನೀವು ಸಿನಿಮಾ ನೋಡಿ ಕಣ್ಣೀರಾಕದೇ ಚಿತ್ರಮಂದಿರದಿಂದ ಹೊರಗಡೆ ಬಂದ್ರೆ ನಿಮಗೆ ಒಂದು ಕೋಟಿ ರೂ. ನಾನು ಕೊಡ್ತೀನಿ. ಇಲ್ಲದೇ ಇದ್ದರೆ ನೀವು ನನಗೆ ಒಂದು ಲಕ್ಷ ರೂ. ಕೊಡಿ ಅಂದ್ರು.. ನಾನು ಚಾಲೆಂಜ್ ಸೋತೆ.. ತಗೊಳಿ ಸರ್ ಒಂದು ಲಕ್ಷ ರೂ. ಚೆಕ್.. ಎಷ್ಟು ದುಬಾರಿ ಸಲಹೆ ಕೊಟ್ರಿ ಸರ್" ಎಂದು ಸುಕುಮಾರ್ ಬರೆದುಕೊಂಡಿದ್ದಾರೆ.
ಇದೆಲ್ಲಾ ಸಿನಿಮಾ ಪ್ರಚಾರದ ಗಿಮಿಕ್ ಎನ್ನುವುದು ಗೊತ್ತಾಗುತ್ತಿದೆ. ಬ್ಯಾಂಕ್ ಚೆಕ್ ಮೇಲೆ ಯಾರಾದರೂ "ಶ್ರೀ ಅರವಿಂದ್ಗಾರು" ಅಂತ ಬರೀತ್ತಾರಾ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಅದೆಲ್ಲಾ ಏನೇ ಇದ್ದರೂ 'ಆಕಾಶಂಲೊ ಒಕ ತಾರ' ಚಿತ್ರದ ಪ್ರಚಾರಕ್ಕೆ ಸುಕುಮಾರ್ ಕೂಡ ಕೈಜೋಡಿಸಿದ್ದಾರೆ. ಈ ಚಿತ್ರವನ್ನು ಪವನ್ ಸಾದಿನೇನಿ ಎಂಬುವವರು ನಿರ್ದೇಶನ ಮಾಡಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆ ಸಾತ್ವಿಕ ವೀರವಳ್ಳಿ, ಶ್ರುತಿ ಹಾಸನ್ ಹಾಗೂ ರುಹಾನಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನು 'ಪುಷ್ಪ' ಸರಣಿ ಬಳಿಕ ರಾಮ್ಚರಣ್ ನಟನೆಯ ಚಿತ್ರವನ್ನು ಸುಕ್ಕು ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ 'ರಂಗಸ್ಥಳಂ' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಮತ್ತೊಂದು ಕಡೆ ಸಾತ್ವಿಕ ವೀರವಳ್ಳಿ ಈ ಚಿತ್ರದಲ್ಲಿ ರಾಮ್ಚರಣ್ ಜೋಡಿಯಾಗಿ ನಟಿಸಬಹುದು ಎನ್ನಲಾಗ್ತಿದೆ.