ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಈ ಬಾರಿ ಬಿಗ್‌ಬಾಸ್ ಶೋ ಆರಂಭವಾಗಿದೆ. ತಮಿಳಿನಲ್ಲಿ ಮತ್ತೊಮ್ಮೆ ವಿಜಯ್ ಸೇತುಪತಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ವೀಕೆಂಡ್ ಪಂಚಾಯ್ತಿ ವೇಳೆ ಸೇತುಪತಿ ನೀಡಿದ ಹೇಳಿಕೆವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳುನಾಡು ಸಿಎಂ ವಿಜಯ್ ಉದ್ದೇಶಿಸಿ ಅವರು ಪರೋಕ್ಷವಾಗಿ ಕಾಮೆಂಟ್ ಮಾಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.
ವೀಕೆಂಡ್ ಸ್ಪರ್ಧಿಗಳ ಜೊತೆ ವಿಜಯ್ ಸೇತುಪತಿ ಮಾತನಾಡುವ ವೇಳೆ ಸರಿ, ತಪ್ಪುಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ನಾಯಕತ್ವದ ಗುಣಗಳ ಬಗ್ಗೆ ಸ್ಪರ್ಧಿ ಶತಿಗಾ ಅವರಿಗೆ ವಿವರಿಸಿದ್ದಾರೆ. ಒಬ್ಬ ನಾಯಕ ಹೇಗಿರಬೇಕು ಗೊತ್ತಾ? ಎಂದು ತಿಳಿ ಹೇಳಿದ್ದಾರೆ. ಆದರೆ ಇದನ್ನು ತಮಿಳುನಾಡು ಸಿಎಂ ವಿಜಯ್ ಆಡಳಿತ ವೈಖರಿಗೆ ಲಿಂಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದು ಈಗ ಪರ ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ನಟ ದಳಪತಿ ವಿಜಯ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕ್ರಾಂತಿ ಮಾಡಿ ಅಧಿಕಾರ ಹಿಡಿದಿದ್ದಾರೆ. ಡಿಎಂಕೆ, ಎಡಿಎಂಕೆ ಪಕ್ಷಗಳನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ. ತಮಿಳುನಾಡಿನ ಜನತೆಗೆ ಹಲವು ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದರು. ಅಂದಹಾಗೆ ಬಿಗ್‌ಬಾಸ್ ವೇದಿಕೆಯಲ್ಲಿ ವಿಜಯ್ ಸೇತುಪತಿ ಯಾವುದೇ ರಾಜಕೀಯ ವಿಚಾರದ ಬಗ್ಗೆ ಮಾತನಾಡಿಲ್ಲ.
"ನಾಯಕ ಅಂದ್ರೆ ಏನು ಅಂತ ಗೊತ್ತಿಲ್ದೆ, ನಾಯಕತ್ವ ಅಂದ್ರೆ ಏನು ಅಂತ ಗೊತ್ತಿಲ್ದೆ, ಮನಸ್ಸಿಗೆ ಬಂದಂತೆ ಭರವಸೆಗಳನ್ನು ನೀಡಿ ಸಮಸ್ಯೆಗಳು ಎದುರಾದಾಗ ಎದುರಾಳಿಗಳ ಮೇಲೆ ಆರೋಪ ಮಾಡುತ್ತಾ, ಅಥವಾ ಅಲ್ಲಿಂದ ಪಲಾಯನ ಮಾಡುವುದು ನಾಯಕನಿಗೆ ಇರಬೇಕಾದ ಅರ್ಹತೆ ಅಲ್ಲ. ಅದು ಮೋಸ ಮಾಡಿದಂತೆ" ಎಂದು ವಿಜಯ್ ಸೇತುಪತಿ ಹೇಳಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಶತಿಗಾ ಅವರನ್ನು ಉದ್ದೇಶಿಸಿ ಈ ಮಾತು ಆಡಿದ್ದರೂ ಅದನ್ನು ಸಿಎಂ ವಿಜಯ್ ಜೊತೆ ಹೋಲಿಸಿ ನೋಡಲಾಗುತ್ತಿದೆ.
ಸೇತುಪತಿ ಹೇಳಿದ್ದರಲ್ಲಿ ಏನು ತಪ್ಪಿಲ್ಲ. ಅವರು ಬಿಗ್‌ಬಾಸ್ ಶೋಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ ಅಷ್ಟೇ ಎಂದು ಎಲ್ಲರೂ ಸುಮ್ಮನಾಗಿದ್ದಾರೆ. ಆದರೆ ಕೆಲವರು ಮಾತ್ರ ಇದನ್ನು ತಮಿಳುನಾಡು ರಾಜಕೀಯಕ್ಕೆ ತಾಳೆ ಹಾಕಿ ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿವಾದ ಸೃಷ್ಟಿಯಾಗುವ ಸುಳಿವು ಸಿಗುತ್ತಿದ್ದಂತೆ ತಮಿಳು ಬಿಗ್‌ಬಾಸ್ ಆಯೋಜರು ಪ್ರತಿಕ್ರಿಯಿಸಿದ್ದಾರೆ. ವಿಜಯ್ ಟಿವಿಯಲ್ಲಿ ಶೋ ಪ್ರಸಾರವಾಗುತ್ತದೆ. ಸದ್ಯ ವಾಹಿನಿ ಈ ಬಗ್ಗೆ ಬಹಿರಂಗ ಪತ್ರ ಬರೆದಿದೆ.
"ಬಿಗ್ ಬಾಸ್ ತಮಿಳು ಸೀಸನ್ 10 ಒಂದು ಮನರಂಜನಾ ಕಾರ್ಯಕ್ರಮ. ಅದರ ಸ್ವರೂಪ, ಥೀಮ್ ಎಲ್ಲವೂ ಆಟದ ಚೌಕಟ್ಟಿನೊಳಗೆ ಇರುತ್ತದೆ. ಅಲ್ಲಿನ ಸನ್ನಿವೇಶಗಳು, ಸಂಭಾಷಣೆಗಳು, ಅಭಿವ್ಯಕ್ತಿ ಎಲ್ಲವೂ ನಿರೂಪಣೆಯ ಭಾಗ. ಕಾರ್ಯಕ್ರಮದ ಸಂದರ್ಭಕ್ಕೆ ತಕ್ಕಂತೆ ಅದು ಅರ್ಥಮಾಡಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
ಬಿಗ್‌ಬಾಸ್ ಕಾರ್ಯಕ್ರಮದಲ್ಲಿನ ಯಾವುದೇ ಹೇಳಿಕೆ ಕಾರ್ಯಕ್ರಮದ ಸಂದರ್ಭದ ಹೊರಗೆ ಯಾವುದೇ ವ್ಯಕ್ತಿ, ಸಂಸ್ಥೆ, ಸಂಸ್ಥೆ, ಸಿದ್ಧಾಂತ ಅಥವಾ ಸನ್ನಿವೇಶವನ್ನು ಪ್ರತಿನಿಧಿಸುತ್ತದೆ ಎಂದು ಅರ್ಥೈಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
Vijay Sethupathy Attacks TVK CM Elect Vijay In Bigg Boss Tamil Season 10 ⚡
— Analyst (@BoAnalyst) September 13, 2026
Seems Like A Valid Attack ⁉️ pic.twitter.com/gc9BncLSSK