ವಿಶ್ವದೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಣ್ಣದಲೋಕದಲ್ಲಿ ಕೂಡ ತಾರೆಯರು ಸಡಗರ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಇದೇ ಸಡಗರದಲ್ಲಿ ಹೊಸ ಸಿನಿಮಾಗಳ ಅಪ್‌ಡೇಟ್, ಹೊಸ ಹೊಸ ಪೋಸ್ಟರ್ ಹೊರ ಬರ್ತಿದೆ. ಬಾಲಿವುಡ್ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ದಂಪತಿ ಹಬ್ಬದ ಸಂಭ್ರಮದಲ್ಲಿ ಮಗನನ್ನು ಪರಿಚಯಿಸಿದ್ದಾರೆ.

ಮಗ ವಿಹಾನ್ ಫೋಟೊವನ್ನು ಪೋಸ್ಟ್ ಮಾಡಿ "ನಮ್ಮ ಅತ್ಯಂತ ಪ್ರಕಾಶಮಾನವಾದ ದೀಪಾವಳಿ. ಎಲ್ಲರಿಗೂ ಪ್ರೀತಿ, ಬೆಳಕು ಮತ್ತು ಸಂತೋಷ ಸಿಗಲಿ ಎಂದು ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಕ್ರೀಮ್ ಬಣ್ಣದ ಕುರ್ತಾ-ಪೈಜಾಮಾ ಹಾಗೂ ಹಳದಿ ಬಣ್ಣದ ಪ್ರಿಂಟೆಡ್ ನೆಹರು ಜಾಕೆಟ್ ಧರಿಸಿರುವ ವಿಹಾನ್ ಸಂಭ್ರಮದಿಂದ ಕ್ಯಾಮರಾ ಕಡೆ ನಗೆ ಬೀರಿದ್ದಾನೆ. ವಿಹಾನ್ ಫೋಟೊ ನೋಡಿ ಅಭಿಮಾನಿಗಳು, ಆಪ್ತರು ಲೈಕ್ಸ್ ಹಾಗೂ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನವೆಂಬರ್ 7, 2025ರಂದು ಕತ್ರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಿನ್ನೆಯಷ್ಟೆ ವಿಹಾನ್ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿಕ್ಕಿ ಹಾಗೂ ಕತ್ರೀನಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಅನುಪಮಾ ಚೋಪ್ರಾ ನಿರೂಪಣೆಯ ಸಂದರ್ಶನ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಜೋಯಾ ಅಖ್ತರ್ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು. ಬಳಿಕ ಸ್ನೇಹ ಹೆಚ್ಚಾಗಿ ಅದು ಪ್ರೀತಿಗೆ ತಿರುಗಿತ್ತು.

ಕತ್ರೀನಾ ತಂದೆ ಕಾಶ್ಮೀರಿ ಮುಸ್ಲಿಂ.. ತಾಯಿ ಕ್ರಿಶ್ಚಿಯನ್.. ವಿಕ್ಕಿ ಕೌಶಲ್ ಪಂಜಾಬಿ ಹಿಂದೂ ಕುಟುಂಬದವರು. ಮದುವೆ ಬಳಿಕ ಕತ್ರೀನಾ ಹಿಂದೂ ಮತ್ತು ಪಂಜಾಬಿ ಸಂಪ್ರದಾಯಗಳನ್ನು ಒಪ್ಪಿಕೊಂಡಿದ್ದಾರೆ.