ಭಾರತೀಯ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕನ್ನಡ ಸೇರಿ ದಕ್ಷಿಣದ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಮೀಟು ಗಲಾಟೆಯಲ್ಲಿ ಅವರ ಹೆಸರು ಕೇಳಿಬಂದಿತ್ತು. ತಮ್ಮ ಅದ್ಭುತ ನಟನೆಯಿಂದ ರಾಷ್ಟ್ರಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ನಾನಾ ಅಗಲಿಕೆಗೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
ನಿನ್ನೆ(ಅಕ್ಟೋಬರ್ 7)ನಾನಾ ಪಾಟೇಕರ್ ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಬೆಳಗ್ಗೆ 3:30ಕ್ಕೆ ಅವರನ್ನು ಗೋವಾದ ಮಣಿಪಾಲ್ ಆಸ್ಪತ್ರೆಗೆ ತುರ್ತಾಗಿ ಕರೆದೊಯ್ಯಲಾಗಿತ್ತು. ಅದಾಗಲೇ ಸಮಯ ಮಿಂಚಿ ಹೋಗಿತ್ತು. ವೈದ್ಯರು ಎಷ್ಟೇ ಪ್ರಯತ್ನ ನಡೆಸಿದ್ರು ಬದುಕಿಸಲು ಸಾಧ್ಯವಾಗಲಿಲ್ಲ. ಬಳಿಕ ಅಧಿಕೃತವಾಗಿ ಅವರು ಕೊನೆಯುಸಿರೆಳೆದಿರುವುದನ್ನು ಘೋಷಿಸಲಾಯಿತು.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುರುದ್-ಜಂಜಿರಾದಲ್ಲಿ ಮರಾಠಿ ಕುಟುಂಬದಲ್ಲಿ ನಾನಾ ಪಾಟೇಕರ್ ಜನಿಸಿದ್ದರು. ಆರಂಭದಲ್ಲಿ ಮರಾಠಿ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದರು. 'ಗಮನ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಹೋದರು. ಪೋಷಕ ಪಾತ್ರಗಳ ಮಾತ್ರವಲ್ಲದೇ ಲೀಡ್ ರೋಲ್‌ಗಳಲ್ಲಿ ನಟಿಸಿ ಗೆದ್ದರು. 'ಕ್ರಾಂತಿವೀರ್' ಚಿತ್ರದ ನಟನೆಗಾಗಿ ನಾನಾ ಪಾಟೇಕರ್ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. 'ಪರಿಂದಾ' ಹಾಗೂ 'ಅಗ್ನಿಸಾಕ್ಷಿ' ಚಿತ್ರಗಳ ನಟನೆಗಾಗಿ ಅತ್ಯುತ್ತಮ ಪೋಷಕ ನಟ ರಾಷ್ಟ್ರಪ್ರಶಸ್ತಿ ಲಭಿಸಿತ್ತು.
ಕನ್ನಡದಲ್ಲಿ ಲೂಸ್ ಮಾದ ಯೋಗಿ ನಟನೆಯ 'ಯಕ್ಷ' ಚಿತ್ರದಲ್ಲಿ ನಾನಾ ಪಾಟೇಕರ್ ಬಣ್ಣ ಹಚ್ಚಿದ್ದು ವಿಶೇಷ. ತಮಿಳಿನ 'ಕಾಲಾ' ಚಿತ್ರದಲ್ಲಿ ರಜನಿಕಾಂತ್ ಎದುರು ವಿಲನ್ ಆಗಿ ಅಬ್ಬರಿಸಿದ್ದರು.