ಖ್ಯಾತ ನಿರ್ದೇಶಕ ರಾಜಮೌಳಿ ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಸದ್ದು ಮಾಡ್ತಾ ಬರ್ತಿದ್ದಾರೆ. ಸೋಲಿಲ್ಲದ ಸರದಾರ ಎಂಬ ಬಿರುದು ಅವರಿಗಿದೆ. 'ವಾರಣಾಸಿ' ಸಿನಿಮಾ ಮೂಲಕ ಮುಂದಿನ ವರ್ಷ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ. ಎಷ್ಟೇ ದೊಡ್ಡ ಡೈರೆಕ್ಟರ್ ಆಗಿದ್ರು, ಹೆಂಡ್ತಿ ಮಾತು ಕೇಳಲೇಬೇಕು. ಅದಕ್ಕೆ ಈ ವೀಡಿಯೋ ಸಾಕ್ಷಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ 'ಡೋಂಟ್ ಟ್ರಬಲ್ ದಿ ಟ್ರಬಲ್' ಸಿನಿಮಾ ನಿರ್ಮಾಣವಾಗಿದೆ. ರಾಜಮೌಳಿ ಪುತ್ರ ಕಾರ್ತಿಕೇಯ ನಿರ್ಮಾಣದ ಸಿನಿಮಾ ಈ ವಾರ ಬಿಡುಗಡೆ ಆಗ್ತಿದೆ. ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ಜ್ಯೂ. ಎನ್‌ಟಿಆರ್ ಸೇರಿ ಸಾಕಷ್ಟು ಅತಿಥಿಗಳು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಇಂಟ್ರೆಸ್ಟಿಂಗ್ ಸಂಗತಿ ನಡೆದಿದೆ.
ರಾಜಮೌಳಿ ಹಾಗೂ ಪತ್ನಿ ರಮಾ ವೇದಿಕೆ ಬಳಿ ಬರಲು ಮುಂದಾಗಿದ್ದಾರೆ. ಈ ವೇಳೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ರಾಜಮೌಳಿಯನ್ನು ಹಿಂದಿನಿಂದ "ಹೇಯ್ ನಡೀರಿ" ಎಂದು ರಮಾ ನೂಕಿದ್ದಾರೆ. ಮರು ಮಾತನಾಡದೇ ಜಕ್ಕಣ್ಣ ಮುಂದೆ ಸಾಗಿ ಬಂದಿದ್ದಾರೆ. ಕೂಡಲೇ ಅಲ್ಲಿದ್ದವರೆಲ್ಲಾ ಗೊಳ್ ಎಂದು ನಕ್ಕಿದ್ದಾರೆ. ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ನಿರ್ದೇಶಕ ಆಗಿದ್ದರೂ ಪತ್ನಿ ಎನ್ನುವ ನಿರ್ದೇಶಕಿ ಹೇಳಿದಂತೆ ಎಲ್ಲರೂ ಕೇಳಲೇಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
2001ರಲ್ಲಿ ರಾಜಮೌಳಿ ಹಾಗೂ ರಮಾ ಮದುವೆ ನಡೆದಿತ್ತು. ಅದಾಗಲೇ ಒಂದು ಮದುವೆ ಆಗಿ ರಮಾ ಮೊದಲ ಪತಿಯಿಂದ ಡಿವೋರ್ಸ್ ಪಡೆದಿದ್ದರು. ಅವರ ಮಗ ಕಾರ್ತಿಕೇಯ. ಇನ್ನು ರಾಜಮೌಳಿ- ರಮ್ಯಾ ಹೆಣ್ಣು ಮಗುವೊಂದನ್ನು ಕೂಡ ದತ್ತು ಪಡೆದುಕೊಂಡಿದ್ದಾರೆ. ಜಕ್ಕಣ್ಣ ನಿರ್ದೇಶನದ ಸಿನಿಮಾಗಳಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಪತ್ನಿ ರಮಾ ಕೆಲಸ ಮಾಡ್ತಾ ಬರ್ತಿದ್ದಾರೆ. ಅವರ ಇಡೀ ಕುಟುಂಬ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತದೆ.
Rajamouli & Rama’s Funny Moment!
— Telangana Ahead (@telanganaahead) September 30, 2026
A fun moment between SS Rajamouli and Rama Rajamouli has gone viral on social media.#SSRajamouli #RamaRajamouli #ViralVideo pic.twitter.com/kQG3vcs0S8