ಬಹುಭಾಷಾ ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಎರಡು ವರ್ಷಗಳ ಹಿಂದೆ ಹಸೆಮಣೆ ಏರಿದ್ದರು. ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೊತೆ ಮಗಳ ಮದುವೆ ಮಾಡಿ ಆಕ್ಷನ್ ಕಿಂಗ್ ಸಂಭ್ರಮಿಸಿದ್ದರು. ಇದೀಗ ಉಮಾಪತಿ- ಐಶ್ವರ್ಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವದಂತಿ ಹರಿದಾಡ್ತಿದೆ. ಅದಕ್ಕೆ ನೆಟ್ಟಿಗರು ಒಂದಷ್ಟು ಸಾಕ್ಷಿ ಹುಡುಕಿ ತಂದಿದ್ದಾರೆ.
ಇತ್ತೀಚೆಗೆ ವಿದೇಶದಲ್ಲಿ ಅರ್ಜುನ್ ಸರ್ಜಾ ಕಿರಿಮಗಳು ಅಂಜನಾ ಮದುವೆ ನಡೀತು. ಈ ಸಂಭ್ರಮದಲ್ಲಿ ಮಗಳು ಐಶ್ವರ್ಯ ಸಹ ಭಾಗಿ ಆಗಿದ್ದರು. ಆದರೆ ಪತಿ ಉಮಾಪತಿ ಆಗಲಿ ಅವರ ಕುಟುಂಬದವರಾಗಲಿ ಕಾಣಿಸಿಕೊಳ್ಳಲಿಲ್ಲ. ಅರೇ ನಾದಿನಿ ಮದುವೆಗೆ ಉಮಾಪತಿ ಗೈರಾಗಿದ್ದು ಯಾಕೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದೆ. ಐಶ್ವರ್ಯ- ಉಮಾಪತಿ ನಡುವೆ ಎಲ್ಲವೂ ಸರಿಯಿಲ್ಲವೇ ಎನ್ನುವ ಊಹಾಪೋಹ ಗರಿಗೆದರಿದೆ. 10-12 ದಿನ ಇಲ್ಲಿ ಎಲ್ಲಾ ಕೆಲಸ ಬಿಟ್ಟು ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ, ರಿಸೆಪ್ಷನ್ ಪಾರ್ಟಿಗೆ ಹಾಜರಾಗ್ತೀವಿ ಎಂದು ಉಮಾಪತಿ ರಾಮಯ್ಯ ಹೇಳಿರುವುದಾಗಿ ವರದಿಯಾಗಿದೆ.
ಇದೀಗ ಐಶ್ವರ್ಯ- ಉಮಾಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂದು ನೆಟ್ಟಿಗರು ಮತ್ತೊಂದು ಸಾಕ್ಷಿ ಹುಡುಕಿ ತಂದಿದ್ದಾರೆ. ನವೆಂಬರ್ 8ರಂದು ಉಮಾಪತಿ ಹುಟ್ಟುಹಬ್ಬ. ಕಳೆದ ವರ್ಷ ಪತಿ ಜೊತೆಗಿನ ಫೋಟೊ ಪೋಸ್ಟ್ ಮಾಡಿ ಐಶ್ವರ್ಯ ಶುಭಾಶಯ ಕೋರಿದ್ದರು. ಆದರೆ ಈ ವರ್ಷ ಹುಟ್ಟುಹಬ್ಬದ ಶುಭಾಶಯ ಕೋರಿ ಯಾಕೆ ಪೋಸ್ಟ್ ಮಾಡಲಿಲ್ಲ ಎಂದು ಕೆಲವರು ಚರ್ಚೆ ಹುಟ್ಟಾಕ್ಕಿದ್ದಾರೆ.
'ಸರ್ವೈವರ್' ಎಂಬ ತಮಿಳು ರಿಯಾಲಿಟಿ ಶೋವನ್ನು ಅರ್ಜುನ್ ಸರ್ಜಾ ನಿರೂಪಣೆ ಮಾಡುತ್ತಿದ್ದರು. ಆ ಶೋನಲ್ಲಿ ಉಮಾಪತಿ ರಾಮಯ್ಯ ಸ್ಪರ್ಧಿಸಿದ್ದರು. ಆತನ ನಡೆ ನುಡಿ ಎಲ್ಲವೂ ಆಕ್ಷನ್ ಕಿಂಗ್‌ಗೆ ಇಷ್ಟವಾಗಿತ್ತು. ಒಮ್ಮೆ ಅರ್ಜುನ್ ಸರ್ಜಾ 'ಬಾಯ್ಸ್ ನೈಟ್ ಔಟ್'ಗೆ ಉಮಾಪತಿಯನ್ನು ಆಹ್ವಾನಿಸಿದ್ದರು. ನಿಧಾನವಾಗಿ ಸರ್ಜಾ ಕುಟುಂಬಕ್ಕೆ ತಂಬಿ ರಾಮಯ್ಯ ಮಗ ಹತ್ತಿರವಾಗಿದ್ದರು. ಬಳಿಕ ಐಶ್ವರ್ಯಗೂ ಉಮಾಪತಿ ಇಷ್ಟವಾಗಿದ್ದರು. ಕೆಲ ಸಿನಿಮಾಗಳಲ್ಲಿ ಕೂಡ ಉಮಾಪತಿ ನಟಿಸಿದ್ದಾರೆ.
Last year Aishwarya Arjun wished Umapathy on his birthday, but no post this year amid divorce rumours 🤔@grok verify this pic.twitter.com/eXBMuxGKPV
— Pree (@vibewithvelvet) November 11, 2026