ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಫಲಿತಾಂಶ ಏನೇ ಇರಲಿ. ಆದರೆ ಸಿನಿಮಾ ಬಗ್ಗೆ ತರಹೇವಾರಿ ಚರ್ಚೆ ನಡೀತಿದೆ. ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ, ಹಾಲಿವುಡ್ ಸ್ಟೈಲ್ ಸಿನಿಮಾ, ಬುದ್ಧಿವಂತರಿಗೆ ಮಾತ್ರ, ಯಶ್ ಈ ಪ್ರಯೋಗ ಮಾಡಬಾರದಿತ್ತು, ಹೀಗೆ ಜನ ಕಾಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ತಮ್ಮ ಅಭಿಪ್ರಾಯಗಳನ್ನು ರಿವ್ಯೂ ರೂಪದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಲೇಖಕಿ ಕುಸುಮಾ ಆಯರಹಳ್ಳಿ ರಿವ್ಯೂ ಗಮನ ಸೆಳೆದಿದೆ.
ರಾಯ ಹಾಗೂ ಟಿಕೆಟ್ ಹೀಗೆ ಎರಡು ಶೇಡ್‌ಗಳಲ್ಲಿ ಯಶ್ ಪರ್ಫಾರ್ಮೆನ್ಸ್ ವಾರೆವ್ಹಾ ಎನ್ನುವಂತಿದೆ. ಸಿನಿಮಾ ಚೆನ್ನಾಗಿದ್ಯೋ ಇಲ್ವೋ ಯಶ್ ನಟನೆ ಸೂಪರ್ ಎಂದು ಸಾಕಷ್ಟು ಜನ ಬೆನ್ನು ತಟ್ಟುತ್ತಿದ್ದಾರೆ. ತಂದೆ ಮಗನಾಗಿ(ಟಿಕೆಟ್ ಎನ್ನುವ ಭ್ರಮೆಯ ಪಾತ್ರ) ಯಶ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಎನ್ನುವವರು ಯಶ್ ಎರಡೂ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿರುವುದನ್ನು ಕೊಂಡಾಡುತ್ತಿದ್ದಾರೆ.
ಗೀತು ಮೋಹನ್ ದಾಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಚಿತ್ರಕ್ಕೆ ಚಿತ್ರಕಥೆ ಸಹ ಬರೆದಿದ್ದಾರೆ. ತಮಗೆ ಬೇಕಾದಂತೆ ಚಿತ್ರವನ್ನು ತಿದ್ದಿ ತೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುಟಗಳಗಟ್ಟಲೆ 'ಟಾಕ್ಸಿಕ್' ಸಿನಿಮಾ ರಿವ್ಯೂ ಹರಿದಾಡ್ತಿದೆ. ಕೆಲವರು ವೀಡಿಯೋ ಮಾಡಿ ಮಾತನಾಡಿದ್ದಾರೆ. ಮತ್ತಷ್ಟು ಜನ ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಲೇಖಕಿ ಕುಸುಮಾ ಆಯರಹಳ್ಳಿ ಅವರು ಫೇಸ್‌ಬುಕ್‌ನಲ್ಲಿ ಬಹಳ ವಿಭಿನ್ನವಾಗಿ ರಿವ್ಯೂ ಬರೆದಿರುವುದು ವೈರಲ್ ಆಗ್ತಿದೆ. ನೇರಾನೇರ ತಮ್ಮ ಅಭಿಪ್ರಾಯ ಹಂಚಿಕೊಳ್ಳದೇ ರಾಯ ಹಾಗೂ ಟಿಕೆಟ್ ಪಾತ್ರಗಳ ಜೊತೆ ಸಂಭಾಷಣೆಯ ರೂಪದಂತೆ ತೆರೆದಿಟ್ಟಿದ್ದಾರೆ.
ತಮ್ಮ ಪಕ್ಕದಲ್ಲೇ ರಾಯ! ಅಲ್ಲಾ ಟಿಕೆಟ್ ? ಬಂದು ಕೂತು ತನ್ನ ಕಥೆಯನ್ನು ಹೇಳಿಕೊಂಡಂತೆ ಕುಸುಮಾ ತಮ್ಮ ರಿವ್ಯೂ ಬರೆದಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಹಳ ಮೆಚ್ಚುಗೆ ಪಡೆದುಕೊಂಡಿದೆ. ಸಾಕಷ್ಟು ಕಾಮೆಂಟ್ ಮಾಡಿ ಕೊಂಡಾಡಿದ್ದಾರೆ.