ಸಿನಿಮಾ ಅಂದ್ರೆ ನಿಜ ಜೀವನಕ್ಕೆ ಹತ್ತಿರವಾಗಿರುವುದು ಎನ್ನುವ ಕಾನ್ಸೆಪ್ಟ್ ಹಳೇದಾಯ್ತು. ಈಗ ಲಾರ್ಜರ್ ದೆನ್ ಲೈಫ್ ಕಥೆಗಳಿಗೆ ಹೆಚ್ಚು ಬೇಡಿಕೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಅದು ಮತ್ತಷ್ಟು ಹೆಚ್ಚಾಗಿದೆ. ನಮ್ಮ ನಡುವಿನ ಕಥೆಯನ್ನು ಸಿನಿಮಾದಲ್ಲಿ ಯಾಕೆ ನೋಡಬೇಕು. ಜೀವನದ ಜಂಜಾಟ ಮರೆತು ಎರಡು ಗಂಟೆ ಬೇರೆ ಪ್ರಪಂಚದಲ್ಲಿ ವಿಹರಿಸಿ ಎಂಜಾಯ್ ಮಾಡುವುದೇ ಸಿನಿಮಾ.
ಹೀಗೆ ಪ್ರೇಕ್ಷಕರನ್ನು ರಂಜಿಸೋಕೆ ನಾನಾ ಅಂಶಗಳನ್ನು ತೆರೆಮೇಲೆ ತೋರಿಸಲಾಗ್ತಿದೆ. ಹಾಡು, ಡ್ಯಾನ್ಸ್, ಫೈಟ್, ಕಾಮಿಡಿ ಹೀಗೆ ಹಲವು ಸಂಗತಿಗಳಿಗೆ. ಭಾವನಾತ್ಮಕವಾಗಿ ಕನೆಕ್ಟ್ ಮಾಡುವುದು ಕೂಡ ಇಲ್ಲಿ ಮುಖ್ಯವಾಗುತ್ತೆ. ಅದಕ್ಕಾಗಿ ಫಿಲ್ಮ್ ಮೇಕರ್ಸ್ ಮಾಡುವ ಸರ್ಕಸ್ ಅಷ್ಟಿಷ್ಟಲ್ಲ. ಮದರ್ ಸೆಂಟಿಮೆಂಟ್, ಸಿಸ್ಟರ್ ಸೆಂಟಿಮೆಂಟ್ ಹೀಗೆ ನಾನಾ ವಿಚಾರಗಳನ್ನು ತೆಗೆದುಕೊಳ್ತಾರೆ. ಆದರೆ ಇತ್ತೀಚೆಗೆ ಗರ್ಭಿಣಿ ಮಹಿಳೆಗೆ ಟಾರ್ಚರ್ ಕೊಡುವುದನ್ನು ತೋರಿಸುವ ಪ್ರಯತ್ನ ಮಾಡಲಾಗ್ತಿದೆ. ಮೊನ್ನೆ ಮೊನ್ನೆ ಬಂದ 'ಜೈಲರ್- 2' ಚಿತ್ರದಲ್ಲೂ ಅಂತಾದೊಂದು ದೃಶ್ಯವಿದೆ.
ತಾಯ್ತನ ಎಂಬುದು ಪ್ರಕೃತಿಯು ಮಹಿಳೆಗೆ ನೀಡಿದ ಅತ್ಯಂತ ಸುಂದರವಾದ ವರ.. ಗರ್ಭಿಣಿ ಅಂದ್ರೆ ಬಹಳ ಸೂಕ್ಷ್ಮ. ಒಂದೇ ದೇಹ ಎರಡು ಜೀವ.. ಯಾವುದೇ ಭಯ ಇಲ್ಲದೇ ಮಾನಸಿಕ ಒತ್ತಡವಿಲ್ಲದೆ ಸದಾ ಸಂತೋಷದಿಂದ ಇರಬೇಕಾದ ಸಮಯ. ಆದರೆ ಮಾಸ್ ಸಿನಿಮಾಗಳಲ್ಲಿ ದುಷ್ಟರು ಗರ್ಭಿಣಿಗೆ ಹಿಂಸೆ ಕೊಡುವುದು, ನಾಯಕ ಬಂದು ಅದನ್ನು ತಡೆಯುವುದನ್ನು ಮಾಸ್ ಎಲಿವೇಷನ್ ಎನ್ನುವಂತೆ ತೋರಿಸುತ್ತಿದ್ದಾರೆ. 'ಜೈಲರ್- 2' ಚಿತ್ರದಲ್ಲಿ ಟೀ ಅಂಗಡಿಯಲ್ಲಿ ಇಂಥದ್ದೇ ದೃಶ್ಯವಿದೆ. ಈ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಗರ್ಭಿಣಿ ನೋವಿನಿಂದ ಕಿರುಚುತ್ತಿದ್ದರೆ ಮುತ್ತುವೇಲ್ ಪಾಂಡಿಯನ್(ರಜನಿಕಾಂತ್) ಮಾತ್ರ ಗನ್ ಹಿಡಿದು ನಿಧಾನವಾಗಿ ಬರುವಂತೆ ಸ್ಲೋ ಮೋಷನ್ ಶಾಟ್ ಇಟ್ಟಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಇದನ್ನು ನೋಡಿ ಕೆಲವರು ವಾಹ್ ಎಂತಹ ಎಲಿವೇಷನ್ ಸೀನ್ ಎಂದು ಜೈಕಾರ ಹಾಕುತ್ತಿದ್ದಾರೆ. ಗರ್ಭಿಣಿ ಸ್ತ್ರೀಗೆ ಟಾರ್ಚರ್ ಕೊಡುವಂತಹ ಸನ್ನಿವೇಶಗಳು ಈ ಹಿಂದೆ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಬಂದಿವೆ. ಆದರೆ ನಮ್ಮ ಫಿಲ್ಮ್ ಮೇಕರ್ಸ್ ಇವತ್ತಿಗೂ ಅದೇ ವಿಚಾರವನ್ನು ಹೀರೊ ಬಿಲ್ಡಪ್‌ಗಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. 'ಟಾಕ್ಸಿಕ್' ಚಿತ್ರದಲ್ಲಿ ಕೂಡ ಗರ್ಭಿಣಿ ನಾಡಿಯಾಗೆ ದುಷ್ಟರು ಕಿರುಕುಳ ಕೊಡುವ ಸನ್ನಿವೇಶ ಇತ್ತು.
ಇತ್ತೀಚೆಗೆ ಬಂದ ನಾನಿ ನಟನೆಯ 'ದಿ ಪ್ಯಾರಡೈಸ್' ಚಿತ್ರದಲ್ಲಿ ಕೂಡ ಗರ್ಭಿಣಿಯನ್ನು ಹಿಂಸಿಸುವ ಸನ್ನಿವೇಶ ಇತ್ತು. ಆಕೆಯನ್ನು ಕೆಸರಿನಲ್ಲಿ ಬೀಳಿಸಿ ಹೊಟ್ಟೆಗೆ ಕರೆಂಟ್ ಶಾಕ್ ಕೊಟ್ಟುಬಿಡ್ತಾರೆ. ಇನ್ನು 'ರಣಬಾಲಿ' ಚಿತ್ರದಲ್ಲಿ ತುಂಬು ಗರ್ಭಿಣಿ ಜಯಮ್ಮ(ರಶ್ಮಿಕಾ ಮಂದಣ್ಣ)ಗೆ ಕಿರುಕುಳ ನೀಡುವ ಸನ್ನಿವೇಶ ಇದೆ. ಸಹಾಯಕರು ನಾಯಕ ಬಂದು ರಕ್ಷಿಸಿ ಜೈಕಾರ ಹಾಕಿಸಿಕೊಳ್ಳುವುದು ಸರಿ. ಇದನ್ನೇ ಮಾಸ್ ಎಂದು ಕೆಲವರು ಬಡಾಯಿ ಕೊಚ್ಚಿಕೊಳ್ಳಬಹುದು. ಆದರೂ ಗರ್ಭಿಣಿ ಹಿಂಸೆ ಎನ್ನುವುದನ್ನು ಕೊಂಚ ಬದಲಿಸಿಕೊಳ್ಳುವುದು ಒಳಿತು.
same thing in jailer2
— velan (@billabilli1234) October 16, 2026
just for a elevation aura scene - pregnant women tied and beaten up
hero leisurely walking up slowy and firing , blood shed on that pregnant women face pic.twitter.com/24hmqhF7Ob