ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸೋಲು ಗೆಲುವಿನ ಕಥೆ ಗೊತ್ತೇಯಿದೆ. ಒಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದ್ದು ಬಹುತೇಕರಿಗೆ ಬೇಸರ ಮೂಡಿಸಿತ್ತು. ಇನ್ನು ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ಸೋತಿತ್ತು. ಚಿತ್ರದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಾಗಿತ್ತು. ಆಂಧ್ರ, ತೆಲಂಗಾಣದಲ್ಲಿ ವಿತರಣೆ ಹಕ್ಕು ಕೊಂಡುಕೊಂಡಿದ್ದ ದಿಲ್ ರಾಜು ಅಚ್ಚರಿ ಹೇಳಿಕೆ ನೀಡಿದ್ದಾರೆ.
'ಟಾಕ್ಸಿಕ್' ಮಾತ್ರವಲ್ಲದೇ 'ರಾಮಾಯಣ' ಚಿತ್ರದ ರೈಟ್ಸ್ ಕೂಡ ದಿಲ್ ರಾಜು ಕೊಂಡುಕೊಂಡಿದ್ದಾರೆ. ಸಿನಿಮಾ ಒಂದೇ ವಾರಕ್ಕೆ 1000 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿಲ್ಲ. ಇದೆಲ್ಲದರ ನಡುವೆ ಸಕ್ಸಸ್ ಮೀಟ್ ಮಾಡಿ ದಿಲ್ ರಾಜು ಮಾತನಾಡಿದ್ದಾರೆ. ಎಲ್ಲಾ ಪೇಯ್ಡ್ ಪಬ್ಲಿಸಿಟಿ ಮಾಡಿದ್ರು, ನಿಜ ಹೇಳಬೇಕು ಅಂದ್ರೆ 'ಟಾಕ್ಸಿಕ್' ಚಿತ್ರದಿಂದ ನನಗೆ ಲಾಭವೇ ಆಗಿದೆ ಎಂದಿದ್ದಾರೆ.
"ಟಾಕ್ಸಿಕ್ ಚಿತ್ರದಿಂದ ನನಗೆ ನಷ್ಟವಾಯ್ತು ಎಂದು ಪೇಯ್ಡ್ ಪ್ರಮೋಷನ್ ನಡೀತು. ಅದು ಎಲ್ಲರಿಗೂ ಗೊತ್ತೇಯಿದೆ. ನಾನು ಆ ಸಿನಿಮಾ ವಿತರಣೆ ಮಾಡಿದ್ದೆ, ಈಗ 'ರಾಮಾಯಣ' ಚಿತ್ರವನ್ನು ಬಿಡುಗಡೆ ಮಾಡಿದ್ದೀನಿ. ಆ ಚಿತ್ರದಲ್ಲೂ ನನಗೆ ನಷ್ಟವಿಲ್ಲ, ಈ ಚಿತ್ರದಲ್ಲಿ ಲಾಭವೇ ಬಂದಿದೆ. ನಿಜ ಹೇಳಬೇಕು ಅಂದ್ರೆ 'ಟಾಕ್ಸಿಕ್' ಚಿತ್ರದಿಂದ ಡಿಸ್ಟ್ರಿಬ್ಯೂಷನ್ ಪರ್ಸೆಂಟೇಜ್ ಸಿಕ್ತು. ಆದ್ರೆ ಹೊರಗಡೆ ಏನೇನೊ ಬಿಂಬಿಸಿದ್ರು. ಸೋಶಿಯಲ್ ಮೀಡಿಯಾದಲ್ಲಿ ಎಲ್ಲವನ್ನು ನಾನು ನೋಡ್ತಿದ್ದೀನಿ" ಎಂದು ದಿಲ್ ರಾಜು ಹೇಳಿದ್ದಾರೆ.
120 ಕೋಟಿ ರೂ.ಗೆ 'ಟಾಕ್ಸಿಕ್' ಸಿನಿಮಾ ಆಂಧ್ರ, ತೆಲಂಗಾಣ ರೈಟ್ಸ್ ದಿಲ್ ರಾಜು ಕೊಂಡು ಕೊಂಡಿದ್ದರು. ಆದ್ರೆ 30ರಿಂದ 40 ಕೋಟಿ ರೂ. ಮಾತ್ರ ಬಾಕ್ಸಾಫೀಸ್ ಕಲೆಕ್ಷನ್ ಆಗಿತ್ತು ಎಂದು ವರದಿ ಆಗಿತ್ತು. ಆ ಲೆಕ್ಕದಲ್ಲಿ ವಿತರಕ ದಿಲ್ ರಾಜುಗೆ ಭಾರೀ ನಷ್ಟವಾಗಿದೆ. ಅದನ್ನು ಭರಿಸಲು ಯಶ್ 'ರಾಮಾಯಣ' ಚಿತ್ರದ ರೈಟ್ಸ್ ಕೊಟ್ಟಿದ್ದಾರೆ ಎಂದು ಗುಲ್ಲಾಗಿತ್ತು. ಈಗ ದಿಲ್ ರಾಜು ಹೇಳಿಕೆ ಅಚ್ಚರಿ ಮೂಡಿಸುತ್ತಿದೆ.
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ 340 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ವರದಿ ಆಗಿತ್ತು. 298.51 ಕೋಟಿ ರೂ. ಹಾಗೂ ಹೊರ ದೇಶಗಳಲ್ಲಿ 43.75 ಕೋಟಿ ರೂ. ಮಾತ್ರ ಗಳಿಸಿದಾಗಿ ಸುದ್ದಿ ಆಗಿತ್ತು. ಅಂದಾಜು 600 ಕೋಟಿ ರೂ. ಬಜೆಟ್ ಸಿನಿಮಾ ಇದು ಎನ್ನಲಾಗ್ತಿದೆ. ಆ ಲೆಕ್ಕದಲ್ಲಿ ಭಾರೀ ನಷ್ಟವೇ ಚಿತ್ರಕ್ಕೆ ಎದುರಾಗಿದೆ ಎನ್ನುವುದು ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ
Dil Raju clarified that #Yash Toxic was a profitable venture for him in the Telugu states on a percentage basis and he is also in profit with #Ramayana distribution
— ViratRaya (@Rocky_Virat876) November 13, 2026
He also talks about the paid negative campaign against #ToxicTheMovie pic.twitter.com/RI61frw2KU