ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ನಾಲ್ಕು ವರ್ಷಗಳ ಕಾಲ ಯಶ್ ಚಿತ್ರಕ್ಕಾಗಿ ಶ್ರಮಿಸಿದ್ದರು. ದೊಡ್ಡ ತಂಡ ಕಟ್ಟಿಕೊಂಡು ಹಗಳಿರುಳು ಕಷ್ಟಪಟ್ಟಿದ್ದರು. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿತ್ತು. ಅಷ್ಟಕ್ಕೂ ಸಿನಿಮಾ ಬಜೆಟ್ ಎಷ್ಟು? ಅಂತಿಮವಾಗಿ ಎಷ್ಟು ನಷ್ಟ ಆಗಿದೆ ಎನ್ನುವ ಚರ್ಚೆ ನಡೀತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಿಸಿದ್ದರು. ಬಜೆಟ್ ಎಷ್ಟು ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಚಿತ್ರತಂಡದ ಸದಸ್ಯ, ಯಶ್ ಆಪ್ತ ಜೈದೇವ್ ಮೋಹನ್ ಮಾತನಾಡಿದ್ದಾರೆ. ನ್ಯೂಸೋ ನ್ಯೂಸು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ. ಅಂದಾಜು 600 ಕೋಟಿ ರೂ. ಬಜೆಟ್ ಸಿನಿಮಾ ಎಂದು ಹೇಳಿ ಅವರು ಅಚ್ಚರಿ ಮೂಡಿಸಿದ್ದಾರೆ. 'ಟಾಕ್ಸಿಕ್' ಚಿತ್ರದ ಡಬ್ಬಿಂಗ್ ಮೇಲ್ವಿಚಾರಣೆಯನ್ನು ಜೈದೇವ್ ವಹಿಸಿಕೊಂಡಿದ್ದರು. ಸಿನಿಮಾ ಕೆಲಸ ಶುರುವಾದ ಮೊದಲ ದಿನದಿಂದ ಕೂಡ ತಂಡದ ಜೊತೆ ಅವರು ಕೆಲಸ ಮಾಡಿದ್ದರು.
'ಟಾಕ್ಸಿಕ್' ಚಿತ್ರವನ್ನು ಬೇಕೆಂದೆ ಟಾರ್ಗೆಟ್ ಮಾಡಿದ್ರು. ವ್ಯವಸ್ಥಿತವಾಗಿ ಚಿತ್ರವನ್ನು ಮುಗಿಸುವ ಕೆಲಸ ಆಯ್ತು. 3 ಲಕ್ಷಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲೀಟ್ ಮಾಡಿಸಿದ್ದೇವೆ ಎಂದು ಜೈದೇವ್ ಹೇಳಿದ್ದಾರೆ. ಯಾರೋ ಕಾಣದ ಕೈಗಳು ಮಾಡಿರುವ ಕೃತ್ಯ ಇದು ಎಂದು ಆರೋಪಿಸಿದ್ದಾರೆ. "ಒಂದು ತಂಡವಾಗಿ ಹೇಗೆ ಸಿನ್ಮಾ ಮಾಡ್ತೀವೋ, ಅದೇ ರೀತಿ ಒಂದು ತಂಡವಾಗಿ ಈ ಪೈರಸಿ ಕೂಡ ಆಗಿದೆ. ತನ್ನಿಂದ ತಾನೆ ಆಗಲ್ಲ ಅಲ್ವಾ.. ಜನ ಪೈರಸಿ ನೋಡ್ದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ರೆ, ಕಲೆಕ್ಷನ್ ಎಷ್ಟು ಆಗ್ತಿತ್ತು ಲೆಕ್ಕ ಹಾಕಿ. ನನ್ನ ಸ್ನೇಹಿತರೆ ಹಿಂದಿ HD ಪ್ರಿಂಟ್ ಬಂದಿದೆ ಎಂದು ಹೇಳಿದ್ರು.. 600 ಕೋಟಿ ರೂ. ಹಣ ಹಾಕಿ 4 ವರ್ಷ ಹಗಳಿರುಳು ಕೆಲಸ ಮಾಡಿದ್ದಾರೆ. ಅದೇ 4 ವರ್ಷದಲ್ಲಿ 4 ಬೇರೆ ಬೇರೆ ಸಿನ್ಮಾ ಮಾಡ್ಕೊಂಡು ಹಣ ಮಾಡ್ಕೊಂಡು ಇರಬಹುದಿತ್ತು. ಒಂದು ಮಾಸ್ಟರ್ ಪೀಸ್ ಸಿನ್ಮಾ ಮಾಡಬೇಕು ಎನ್ನುವ ಕಿಚ್ಚಿನಿಂದ ಮಾಡಿದ್ರು" ಎಂದು ಜೈದೇವ್ ಹೇಳಿದ್ದಾರೆ.
ಜೈದೇವ್ ಮಾತು ಕೇಳಿದ್ರೆ 'ಟಾಕ್ಸಿಕ್' ಚಿತ್ರದ ಬಜೆಟ್ 600 ಕೋಟಿ ರೂ. ಎನ್ನುವುದು ಪಕ್ಕಾ ಆಗ್ತಿದೆ. ಸದ್ಯ 28 ದಿನಕ್ಕೆ ಸಿನಿಮಾ 330 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಹೇಗೆ ಕೂಡಿ ಕಳೆದರೂ ನಿರ್ಮಾಪಕರಿಗೆ 150 ರಿಂದ 200 ಕೋಟಿ ರೂ. ವಾಪಸ್ ಬರಬಹುದು. ಇನ್ನು ಓಟಿಟಿ ರೈಟ್ಸ್ ಕೂಡ ಸೇರಿದ್ರೆ 300 ಕೋಟಿ ರೂ. ಸಿಕ್ಕಂತಾಗಿದೆ. ಅಲ್ಲಿಗೆ ಬಾಕಿ 300 ರೂ. ನಷ್ಟ ಎನ್ನುವುದು ಸ್ಪಷ್ಟವಾಗ್ತಿದೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಸಿನಿಮಾ ಬಜೆಟ್ ಕೇಳಿ ಕೆಲವರು ಹುಬ್ಬೇರಿಸುತ್ತಿದ್ದಾರೆ.
Jaidev Mohan #Toxic dubbing in-charge and a close friend of Yash stated that the film budget was 600 crore and expressed his sadness over the film loss (300-350 cr) 💔
— Krishna 💙 (@SriKrishna1436) September 22, 2026
Many sources have reported that the budget was 600cr but #Yash fans don’t accept it. We understand their pain.🥲 pic.twitter.com/U0jYlTU9gu