ಬಾಲಿವುಡ್ ನಟಿ ಕಿಯಾರಾ ಅದ್ವಾನಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಎರಡನೇ ಬಾರಿ ಗರ್ಭಿಣಿ ಆಗಿರುವುದನ್ನು ಕಿಯಾರಾ ತಿಳಿಸಿದ್ದಾರೆ. ಕಳೆದ ವರ್ಷ ಜುಲೈ 15ರಂದು ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದ್ದರು.

ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಇದೀಗ ಸಿದ್ದ್‌-ಕಿಯಾರಾ ಅದೇ ಸಂಭ್ರಮದಲ್ಲಿದ್ದಾರೆ. "ಎಲ್ಲಕ್ಕಿಂತ ಶ್ರೇಷ್ಠವಾದ ಉಡುಗೊರೆಯು ಮತ್ತೊಮ್ಮೆ ನಮಗೆ ಲಭಿಸಿದೆ.

ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿಹೋಗಿವೆ" ಎಂದು ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

2023, ಫೆಬ್ರವರಿ 7 ರಂದು ರಾಜಾಸ್ತಾನದಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅದ್ವಾನಿ ಮದುವೆ ನಡೆದಿತ್ತು. 'ಟಾಕ್ಸಿಕ್' ಸಿನಿಮಾ ಚಿತ್ರೀಕರಣದ ನಡುವೆಯೇ ಕಿಯಾರಾ ಮೊದಲ ಬಾರಿ ಗರ್ಭಿಣಿ ಆಗಿದ್ದರು. ಆದರೂ ಸಿನಿಮಾ ಚಿತ್ರೀಕರಣ ಮುಗಿಸಿದ್ದರು. ಇದೇ ವರ್ಷ ಸಿನಿಮಾ ತೆರೆಗೆ ಬಂದಿದ್ದು ಗೊತ್ತೇಯಿದೆ. ಚಿತ್ರದಲ್ಲಿ ನಾಡಿಯಾ ಆಗಿ ಆಕೆಯ ಅಭಿನಯಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಇತ್ತೀಚೆಗೆ ನಟಿಯರು ಮದುವೆ, ಗರ್ಭಿಣಿ, ಮಗು ಎನ್ನುವುದನ್ನು ಲೆಕ್ಕಿಸದೇ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಬರ್ತಿದ್ದಾರೆ. ಅದಕ್ಕಾಗಿ ಹೆಚ್ಚಿನ ಬಿಡುವು ತೆಗೆದುಕೊಳ್ಳುತ್ತಿಲ್ಲ. ಅದೇ ರೀತಿ ಕಿಯಾರಾ ಒಂದರ ಹಿಂದೆ ಒಂದು ಸಿನಿಮಾದಲ್ಲಿ ನಟಿಸುತ್ತಾ ಬರ್ತಿದ್ದಾರೆ. ಅಂದಹಾಗೆ ಮಗಳಿಗೆ ಸರಾಯಾ ಎಂದು ದಂಪತಿ ಹೆಸರಿಟ್ಟಿದ್ದಾರೆ. ಇದೀಗ ಸರಾಯಾಗೆ ತಮ್ಮನೋ ತಂಗಿನೋ ಬರ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.